ಜೆಡಿಎಸ್ ಪಕ್ಷವನ್ನ ಸದೃಢವಾಗಿ ಸಂಘಟನೆ ಮಾಡಬೇಕಿದೆ, ಅದೇ ನನ್ನ ಗುರಿ : ನಿಖಿಲ್ ಕುಮಾರಸ್ವಾಮಿ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ ಈ ದಿಸೆಯಲ್ಲಿ ಯುವ ಕಾರ್ಯಕರ್ತರು ಕೆಲಸ ಮಾಡಬೇಕು. ಅಲ್ಲದೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತಿಸುವ ಜೆಡಿಎಸ್​ ಪಕ್ಷವನ್ನು ರಾಜ್ಯದ ಯುವಜನತೆ ಬೆಂಬಲಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿಕೊಂಡ್ರು.

ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ

  • Share this:
ರಾಮನಗರ(ಚನ್ನಪಟ್ಟಣ): ಮಿಷನ್ 123 (Mission 123) ಹಾಗೂ ಪಂಚತಂತ್ರ ಕಾರ್ಯಕ್ರಮ ನಮ್ಮ ಪಕ್ಷದ ಗುರಿಯಾಗಿದ್ದು ರೈತರು ಹಾಗೂ ರಾಜ್ಯದ ಜನರ ಅಭಿವೃದ್ಧಿ ಬಗ್ಗೆ ಚಿಂತಿಸುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ (JDS) ಪಕ್ಚವನ್ನು ಯುವಜನತೆ ಬೆಂಬಲಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಮನಗರದಲ್ಲಿ ಮನವಿ ಮಾಡಿದ್ದಾರೆ. ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ ನಿರ್ಮಾಣಗೊಂಡಿರವ 65 ಅಡಿ ಎತ್ತರದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ್ರು. ಇನ್ನು 12 ಕೆಜಿ ಬಂಗಾರ ಬಳಸಿ ಎತ್ತರದ ದೇವಿಯ ವಿಗ್ರಹ ನೋಡಿದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಗೌಡಗೆರೆ ಪುಣ್ಯಕ್ಷೇತ್ರವಾಗಿದ್ದು ಇದೇ ಮೊದಲ ಬಾರಿಗೆ ಬೇಟಿ ನೀಡುತ್ತಿದ್ದೇನೆ ಮುಂದೆ ಪ್ರತಿ ವರ್ಷ ಭೇಟಿ ನೀಡುವುದಾಗಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ರು.

ಇನ್ನು ತಮ್ಮ ಸ್ಪರ್ಧೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಮುಂದೆ ನೋಡೋಣ ಪಕ್ಷದ ತೀರ್ಮಾನಕ್ಕೆ ಬಧ್ದ ಎಂದ್ರು. ಅಲ್ಲದೇ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ತಮ್ಮ ಇಚ್ಛೆಯಿಂದಲ್ಲ. ಬದಲಾಗಿ ಅಲ್ಲಿನ ಶಾಸಕರು, ಮುಖಂಡರ ಕಾರ್ಯಕರ್ತರ ಒತ್ತಾಯ ಮತ್ತು ಪ್ರೀತಿಗೆ ಮಣಿದು ಸ್ಪರ್ಧಿಸಬೇಕಾಯ್ತು ಎಂದು ಪುನರುಚ್ಚರಿಸಿದ್ರು. ಇದೀಗ ಮಂಡ್ಯ ವಿಧಾನ ಪರಿಷತ್ ಚುನಾವಣಾ ಜವಾಬ್ದಾರಿಯನ್ನು ತಾವು ತೆಗೆದುಕೊಂಡಿದ್ದು ಗೆಲ್ಲುವ ಭರವಸೆ ಇದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ

ಅಲ್ಲದೇ ಏಳು ಕ್ಷೇತ್ರಗಳಲ್ಲಿ ನಮ್ಮ ಶಾಸಕರಿದ್ದು ಈಗಾಗಲೇ ಪೂರ್ವಭಾವಿ ಸಭೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ.  ಅಲ್ಲಿ ನಮ್ಮ ಅಭ್ಯರ್ಥಿ ಅಪ್ಪಾಜಿಗೌಡರು ಜಯಗಳಿಸಿವ ವಿಶ್ವಾಸವಿದೆ. ಇನ್ನು ನಮ್ಮ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಮಿಷನ್ 123 ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದ್ದು ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ. ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ ಈ ದಿಸೆಯಲ್ಲಿ ಯುವ ಕಾರ್ಯಕರ್ತರು ಕೆಲಸ ಮಾಡಬೇಕು. ಅಲ್ಲದೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತಿಸುವ ಜೆಡಿಎಸ್​ ಪಕ್ಷವನ್ನು ರಾಜ್ಯದ ಯುವಜನತೆ ಬೆಂಬಲಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿಕೊಂಡ್ರು.

ಇದನ್ನೂ ಓದಿ:  ಯಾಕೆ ಬಂದಿದ್ದೀಯಾ? ನಿನ್ನ ನೋಡೋಕೆ! ಸಿದ್ದರಾಮಯ್ಯರ ಜೊತೆ ಪುಟಾಣಿ ಪೋರಿ ಮಾತುಕತೆ: ವಿಡಿಯೋ ನೋಡಿ

ಇನ್ನು‌ ಇದೇ ಸಂದರ್ಭದಲ್ಲಿ ಕಾರ್ಯಕರ್ತರ ಜೊತೆಗೆ ಕಾಲ ಕಳೆದ ನಿಖಿಲ್ ಕುಮಾರಸ್ವಾಮಿ ಸೆಲ್ಫಿ ತೆಗೆಸಿಕೊಳ್ಳುವಲ್ಲಿ ನಿರತರಾದರು. ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ನಮ್ಮ ತಂದೆಯ ಹೆಸರಿನಲ್ಲಿ ಯಾರ್ಯಾರೋ ಎಂಎಲ್ಎ ಆಗಿದ್ದಾರೆ,

ರೇಣುಕಾಂಬ ದೇವಿಯ ದರ್ಶನ ಪಡೆದ ನಿಖಿಲ್ 

ಆದರೆ ನಾನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಎಂಎಲ್ಎ ಅಗಬಹುದಿತ್ತು. ಆದರೆ ನನಗೆ ಪಕ್ಷ ಕಟ್ಟಬೇಕೆಂಬ ಅಸೆಯಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನ ರಾಜ್ಯಾದ್ಯಂತ ಸಂಘಟನೆ ಮಾಡಬೇಕಿದೆ. ಈ ವಿಚಾರವಾಗಿ ಹಲವು ಯೋಜನೆಗಳು ಇದೇ ಎಂದರು. ಇನ್ನು ಕಡೆ ಕಾರ್ತಿಕ ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಅವ್ವೇರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ರೇಣುಕಾಂಬ ದೇವಿಯ ದರ್ಶನ ಪಡೆದ್ರು.

ಜಿಟಿಡಿಹಗೆ ಹೆಚ್ ಡಿಕೆ ಶಾಕ್ 

ಶಾಸಕರಾದ ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಸಂಪೂರ್ಣ ಮುಚ್ಚಿದೆ. 2023ರ ವೇಳೆಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಹೊಸ ನಾಯಕನನ್ನು ಹುಟ್ಟು ಹಾಕಲಾಗುವುದು, ಈ ಹಿಂದೆ 2008ರಲ್ಲಿ ಜೆಡಿಎಸ್ ತೊರೆದು 2013ರಲ್ಲಿ ಪಕ್ಷಕ್ಕೆ ಮರಳಿ ಬಂದಿದ್ದರು.

ಜಿಟಿಡಿಗೆ ಜೆಡಿಎಸ್ ಬಾಗಿಲು ಕ್ಲೋಸ್

ಮುಂದಿನ ದಿನಗಳಲ್ಲಿ ಮತ್ತೆ ಜಿಟಿಡಿ ಅವರನ್ನು ಕರೆದುಕೊಳ್ಳುವ ಪ್ರಶ್ನೆಯೇ ಬರಲ್ಲ. ಜಿಟಿ ದೇವೇಗೌಡರಿ ಜೆಡಿಎಸ್ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಮುಂದಿನ ಹೊಸ ನಾಯಕರು ಯಾರು ಎಂಬುದನ್ನು ನೀವೇ ಆಯ್ಕೆ ಮಾಡಬೇಕೆಂದು ಕಾರ್ಯಕರ್ತರಲ್ಲಿ ಕೇಳಿಕೊಂಡರು.

ಇದನ್ನೂ ಓದಿ:  ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಡೋದನ್ನ ನಿಲ್ಲಿಸಬೇಕು, ಅದನ್ನು ನಾನೇ ಮಾಡ್ತೀನಿ: ಇದೇನಿದು BSY ಹೊಸ ವರಸೆ?

ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಜನರ ಆಶೀರ್ವಾದ ಕೇಳುತ್ತಿಲ್ಲ, ಜನರ ಸೇವೆಯನ್ನು ಮಾಡಬೇಕೆಂಬ ಉದ್ದೇಶದಿಂದ ನಿಮ್ಮ ಮುಂದೆ ಬರುತ್ತಿದ್ದೇನೆ. ಹಾಗಾಗಿ ನೀವುಗಳು ನಮಗೆ ಪೂರ್ಣಬಹುಮತದ ಅಧಿಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ವರದಿ: ಎ.ಟಿ.ವೆಂಕಟೇಶ್
Published by:Mahmadrafik K
First published: