ರೂಪಾಂತರಿ Omicron ಇರುವ ದೇಶಗಳ ಪ್ರಜೆಗಳ ಪ್ರವೇಶ ನಿರ್ಬಂಧಕ್ಕೆ ಕೇಂದ್ರಕ್ಕೆ ಮನವಿ: CM Basavaraja Bommai

ಡಿಸೆಂಬರ್ ಒಳಗೆ ಸೆಕೆಂಡ್ ಡೋಸ್ ಶೇ.70 ರ ಗುರಿ ತಲುಪಲು ಸೂಚನೆ ನೀಡಿದ್ದೇನೆ. ಹೆಲ್ತ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ಕೊಡಲು ಕೇಂದ್ರದಿಂದ ಅನುಮತಿ‌ ಕೇಳಿದ್ದೇವೆ. ಕೇರಳದಿಂದ ಬಂದವರಿಗೆ ಮರು ಪರೀಕ್ಷೆಗೆ ಸೂಚನೆ ನೀಡಲಾಗಿದೆ  ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಬೆಂಗಳೂರು: ಕೋವಿಡ್ ಎರಡನೇ ಅಲೆ (COVID Second Wave) ನಿಯಂತ್ರಣಕ್ಕೆ ಬಂದಿದೆ ಅನ್ನುವ ಸಂದರ್ಭದಲ್ಲಿ ಈ ಬೆಳವಣೆಗೆ ಆಗಿದೆ. ಸೌತ್ ಆಫ್ರಿಕಾ (South Africa), ಹಾಂಕಾಂಗ್ ದೇಶದಲ್ಲಿ ವೈರಸ್ (New Variant Omicron Virus) ಕಂಡು ಬಂದಿದೆ. ಯಾವ ರೀತಿ ಪರಿಣಾಮ ಆಗುತ್ತೆ ಅಂತ ಗೊತ್ತಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization) ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಪ್ರಧಾನಿ ಮೋದಿ (PM Narendra Modi) ಅವರು ಈಗಾಗಲೇ ನಿನ್ನೆ ಸಭೆ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಹೇಳಿದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಧಾರವಾಡ, ಬೆಂಗಳೂರು ಹಾಸ್ಟೆಲ್ ಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಹಾಸ್ಟೆಲ್​ಗಳನ್ನು ಕಂಟೋನ್ಮೆಂಟ್ ಜೋನ್ ಆಗಿ ಮಾಡಿದ್ದೇವೆ. ಯಾರ್ ಯಾರಿಗೆ ಪಾಸಿಟಿವ್ ಬಂದಿದೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

  ಹೊಸ ವರ್ಷ ಆಚರಣೆ ಬಗ್ಗೆ ಮುಂದೆ ತೀರ್ಮಾನ: ಸಿಎಂ

  ಹೊಸವರ್ಷ ಆಚರಣೆಗೆ ವಿಷಯವಾಗಿ ಸದ್ಯಕ್ಕೆ ಏನೂ ತೀರ್ಮಾನ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇವೆ. ಸದ್ಯದ ಬೆಳವಣಿಗೆ ನೋಡಿಕೊಂಡು ಮುಂದೆ ತಿರ್ಮಾನ ಮಾಡುತ್ತೇವೆ ಎಂದರು. ರಾಜ್ಯದಲ್ಲಿ ಕೋವಿಡ್ ಟೆಸ್ಟ್​ಗಳನ್ನು ಹೆಚ್ಚು ಮಾಡಲು ಸೂಚಿಸಲಾಗಿದೆ. ಏರ್ ಪೋರ್ಟ್ ಗಳಲ್ಲಿ ಹಲವು ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಿ ಪ್ರಜೆಗಳಿಗೆ ನೆಗೆಟಿವ್ ಬಂದ್ರೆ ಮಾತ್ರ ಬಿಡುತ್ತೇವೆ. ರಿಪೋರ್ಟ್ ನೆಗೆಟಿವ್ ಬರುವವರೆಗೂ ಏರ್ ಪೋರ್ಟ್ ನಲ್ಲೇ ಇರಬೇಕು. ರೂಪಾಂತರಿ ಒಮಿಕ್ರಾನ್ ಇರುವ ದೇಶಗಳ ಪ್ರಜೆಗಳ ಪ್ರವೇಶ ನಿರ್ಬಂಧಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.

  ರಾಜ್ಯದಲ್ಲಿ 80 ಲಕ್ಷ ಡೋಸ್ ಲಸಿಕೆ

  ಲಸಿಕೆ ಕೊರತೆ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ‌ ಅವರು, ನಮ್ಮಲ್ಲಿ 80 ಲಕ್ಷ ಡೋಸ್ ಲಸಿಕೆ ಲಭ್ಯ ಇದೆ. ನಮ್ಮ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ರಾಜ್ಯದಲ್ಲಿ ಫಸ್ಟ್ ಡೋಸ್ ವ್ಯಾಕ್ಸಿನೇಷನ್ ಶೇ.91 ರಷ್ಟಾಗಿದೆ. ಸೆಕೆಂಡ್ ಡೋಸ್ ಶೇ.58 ಆಗಿದೆ. ಸೆಕೆಂಡ್ ಡೋಸ್ ಹೆಚ್ಚಿಸಲು ಸೂಚಿಸಲಾಗಿದೆ. ಡಿಸೆಂಬರ್ ಒಳಗೆ ಸೆಕೆಂಡ್ ಡೋಸ್ ಶೇ.70 ರ ಗುರಿ ತಲುಪಲು ಸೂಚನೆ ನೀಡಿದ್ದೇನೆ. ಹೆಲ್ತ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ಕೊಡಲು ಕೇಂದ್ರದಿಂದ ಅನುಮತಿ‌ ಕೇಳಿದ್ದೇವೆ. ಕೇರಳದಿಂದ ಬಂದವರಿಗೆ ಮರು ಪರೀಕ್ಷೆಗೆ ಸೂಚನೆ ನೀಡಲಾಗಿದೆ  ಎಂದು ತಿಳಿಸಿದರು.

  ಇದನ್ನು ಓದಿ: New Variant Coronavirus: ಮತ್ತೆ ಫಿಲ್ಡ್​ಗೆ ಇಳಿದ BBMP ಮಾರ್ಷಲ್ಸ್​ಗಳು; ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಫೈನ್

  ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ
  ದಕ್ಷಿಣ ಆಫ್ರಿಕಾ, ಬೋಟ್ಸಾವಾನ್, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡು ಬಂದಿಲ್ಲ. ಇದೇ ವಿಷಯವಾಗಿ ನಿನ್ನೆ ಆರೋಗ್ಯ ಇಲಾಖೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ, ಅವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಈ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಏಳು ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಅವರಿಗೆ ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು.
  Published by:HR Ramesh
  First published: