ಲೋಕಸಭಾ ಚುನಾವಣೆ ಎದುರಿಸಲು ನಾವು ಶಕ್ತ; ಮೈತ್ರಿ ಬೇಡ ಎಂದರೆ ಸ್ಪಷ್ಟಪಡಿಸಿ ಎಂದ ಎಚ್​ಡಿಕೆ

news18
Updated:September 1, 2018, 5:26 PM IST
ಲೋಕಸಭಾ ಚುನಾವಣೆ ಎದುರಿಸಲು ನಾವು ಶಕ್ತ; ಮೈತ್ರಿ ಬೇಡ ಎಂದರೆ ಸ್ಪಷ್ಟಪಡಿಸಿ ಎಂದ ಎಚ್​ಡಿಕೆ
news18
Updated: September 1, 2018, 5:26 PM IST
ಚಿದಾನಂದ ಪಟೇಲ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.1): ರಾಜ್ಯದಲ್ಲಿ ಈಗಾಗಲೇ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಲೋಕಸಭೆಯಲ್ಲಿ ಮುಂದುವರೆಯಬೇಕಾ ಬೇಡ ಎನ್ನುವುದನ್ನು ಆದಷ್ಟು ಬೇಗ ಸ್ಪಷ್ಟಪಡಿಸಿ ಎಂದು ಸಿಎಂ ಕುಮಾರಸ್ವಾಮಿ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​ಗೆ ನೇವಾಗಿ ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಮೈತ್ರಿಯಾಗುವುದರ ಕುರಿತು ಸ್ಪಷ್ಟ ನಿರ್ಧಾರಕ್ಕೆ ಇನ್ನು ಕಾಂಗ್ರೆಸ್​-ಜೆಡಿಎಸ್​ ನಾಯಕರು ಬಂದಿಲ್ಲ. ಈ ಕುರಿತು  ಶುಕ್ರವಾರ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​, ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಡ್ಯಾನಿಷ್​ ಆಲಿ, ಸಿಎಂ ಕುಮಾರಸ್ವಾಮಿ ಸಭೆ ನಡೆಸಿದರು. ಈ ವೇಳೆ ಮೈತ್ರಿ ಕುರಿತು ಸ್ಪಷ್ಟಪಡಿಸುವಂತೆ ಎಚ್​ಡಿಕೆ ಸ್ಪಷ್ಟಪಡಿಸುವಂತೆ ವೇಣುಗೋಪಾಲ್​ಗೆ ತಿಳಿಸಿದ್ದಾರೆ.

ಲೋಕಸಭಾ ಚುನಾವಣಾ ಮೈತ್ರಿಗೆ  ಕಾಂಗ್ರೆಸ್​ ನಾಯಕರ ವಿರೋಧವಿದೆ. ನಾವಿಲ್ಲಿ ಮೈತ್ರಿ ಮಾಡಿಕೊಂಡರೆ ಚುನಾವಣೆ ಸಂದರ್ಭದಲ್ಲಿ ಕಷ್ಟವಾಗುತ್ತದೆ. ಹಾಸನ, ಮಂಡ್ಯ, ಮೈಸೂರಿನಲ್ಲಿ ಸ್ಥಳೀಯ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯ ನಾಯಕರ ಈ ಒಳಜಗಳ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಲಾಭಾವಾಗುವ ಸಾಧ್ಯತೆಗಳು ಅಧಿಕವಾಗಿದೆ ಎಂದು ಪರಿಸ್ಥಿತಿ ಕುರಿತು ವಿವರಿಸಿದ್ಧಾರೆ.

ಲೋಕಸಭಾ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸಲು ನಾವು ಸಿದ್ಧವಾಗಿದ್ದೇವೆ.   ನಾವೀಗಲೇ 20 ಕ್ಷೇತ್ರಗಳನ್ನು ಗುರುತಿಸಿದ್ದೇವೆ. ಅಭ್ಯರ್ಥಿಗಳ ಹೆಸರನ್ನು ಫೈನಲ್​ ಮಾಡಿದ್ದೇವೆ. ಮೈತ್ರಿ ಬೇಡ ಎಂದರೆ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡುತ್ತೇವೆ. ಈ ಹಿನ್ನಲೆಯಲ್ಲಿ ಈ ಕುರಿತು ರಾಹುಲ್​ ಗಾಂಧಿಯವರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿ ಎಂದರು.

ಕುಮಾರಸ್ವಾಮಿ ಮಾತಿನಿಂದ ಗೊಂದಲಕ್ಕೆ ಒಳಗಾದ ವೇಣುಗೋಪಾಲ್​ ಈ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಮುಂದಾಗಬೇಡಿ. ಪಟ್ಟಿಯನ್ನು ಬಿಡುಗಡೆ ಮಾಡಬೇಡಿ ಎಂದಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...