ಕೌರವರಿಗೆ ಉತ್ತರ ನೀಡಲು ನಾವು ಪಾಂಡವರು ಬಂದಿದ್ದೇವೆ; ಕಾಂಗ್ರೆಸ್ ಆರೋಪಕ್ಕೆ ಸಚಿವ ಅಶೋಕ್ ಪ್ರತ್ಯುತ್ತರ

ಕಳೆದ ವರ್ಷದ ಜನವರಿ 8ರಂದು ಚಂದ್ರಲೋಕದಿಂದ ಹಿಂದಿನ ‌ಸರ್ಕಾರದಲ್ಲಿ 21 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದಾರೆ. ಆಗ ಆಡಳಿತದಲ್ಲಿ ಯಾರಿದ್ದರೂ ಅನ್ನೋದನ್ನ ಆತ್ಮಾವಲೋಕನ‌ ಮಾಡಿಕೊಳ್ಳಲಿ. ಆಗ ಆರಾಮಾಗಿ ಖರೀದಿ ಮಾಡಿದ್ದಾರೆ ಎಂದು ಅಶೋಕ್ ಹೇಳಿದರು.

ಸಚಿವ ಆರ್. ಅಶೋಕ್

ಸಚಿವ ಆರ್. ಅಶೋಕ್

 • Share this:
  ಬೆಂಗಳೂರು; ಕೋವಿಡ್ 19 ನಿಯಂತ್ರಣಕ್ಕಾಗಿ ವೈದ್ಯಕೀಯ ಪರಿಕರ ಖರೀದಿಯಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ಭ್ರಷ್ಟಾಚಾರ ಎಸಗಿದೆ ಎಂದು ಗುರುವಾರ ಬೆಳಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದರು. ಈ ಆರೋಪ ಸಂಬಂಧ ಇಂದು ವಿಧಾನಸೌಧದಲ್ಲಿ ಐವರು ಸಚಿವರು ಪ್ರತಿಯಾಗಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

  ಸಚಿವರಾದ ಆರ್. ಅಶೋಕ್. ಶ್ರೀರಾಮಲು, ಆಶ್ವಥ ನಾರಾಯಣ್, ಕೆ. ಸುಧಾಕರ್ ಹಾಗೂ  ಬಸವರಾಜ್ ಬೊಮ್ಮಯಿ ಅವರು‌ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

  ಸುದ್ದಿಗೋಷ್ಠಿ ಆರಂಭದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ ಅವರು, 2000 ಕೋಟಿ ರೂ. ಹಗರಣ ಆಗಿದೆ ಅಂತಾ‌ ಸಿದ್ದರಾಮಯ್ಯವರು ಆರೋಪ ಮಾಡಿದ್ದಾರೆ. 50 ವರ್ಷ ರಾಜ್ಯವನ್ನಾಳಿ ಲೂಟಿ ಮಾಡಿದ ಪಕ್ಷ ಈಗ ಕೊರೋನಾ‌ ಸಂಕಷ್ಟದ ಸಮಯದಲ್ಲಿ ಆರೋಪ ಮಾಡುತ್ತಿದೆ. ಕಷ್ಟದಲ್ಲಿರುವ ಜನರ ಮನಸಿನಲ್ಲಿ ವಿಷ ಬೀಜ ‌ಬಿತ್ತುವ ಪಿತೂರಿಯನ್ನು ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ.

  ಕಾಂಗ್ರೆಸ್​ನವರು ವೆಂಟಿಲೇಟರ್ ಖರೀದಿ ಬಗ್ಗೆ ಆರೋಪ ಮಾಡಿದ್ದಾರೆ. ಪಕ್ಕದ ರಾಜ್ಯದಲ್ಲಿ 4 ಲಕ್ಷಕ್ಕೆ ಸಿಕ್ಕಿದೆ, ಇಲ್ಲಿ 18 ಲಕ್ಷ ಖರೀದಿಯಾಗಿದೆ ಅಂದಿದ್ದಾರೆ. ಕಳೆದ ವರ್ಷದ ಜನವರಿ 8ರಂದು ಚಂದ್ರಲೋಕದಿಂದ ಹಿಂದಿನ ‌ಸರ್ಕಾರದಲ್ಲಿ 21 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದಾರೆ. ಆಗ ಆಡಳಿತದಲ್ಲಿ ಯಾರಿದ್ದರೂ ಅನ್ನೋದನ್ನ ಆತ್ಮಾವಲೋಕನ‌ ಮಾಡಿಕೊಳ್ಳಲಿ. ಆಗ ಆರಾಮಾಗಿ ಖರೀದಿ ಮಾಡಿದ್ದಾರೆ. ಈಗ ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದೆ. ಇಂತಹ ವೇಳೆಯಲ್ಲಿ 14 ಲಕ್ಷಕ್ಕೆ 9, ಯುನಿಟ್, 15 ಲಕ್ಷಕ್ಕೆ 28 ಯುನಿಟ್ ಗಳಲ್ಲಿ ಖರೀದಿ ಮಾಡಲಾಗಿದೆ ಎಂದು ಹೇಳಿದರು.

  ಕೇರಳದವರು 2.94 ಲಕ್ಷಕ್ಕೆ ಐಫ್ಲೋ ನಾಜಲ್ ಖರೀದಿ ಮಾಡಿದ್ದಾರೆ. ನಾವು ಕೇರಳಕ್ಕಿಂತ ಕಡಿಮೆ ದರದಲ್ಲಿ 2.83 ಲಕ್ಷಕ್ಕೆ ಐಫ್ಲೋ ನಾಜಲ್ ಖರೀದಿ ಮಾಡಿದ್ದೀವಿ. ಇದು ಸಿದ್ದರಾಮಯ್ಯ ಕಣ್ಣಿಗೆ ಕಾಣಲಿಲ್ಲವೇ? ನಮ್ಮಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಪ್ರಶ್ನಿಸಿದರು.

  ಇದನ್ನು ಓದಿ: ಕೋವಿಡ್ ಬಿಕ್ಕಟ್ಟಿನಲ್ಲಿ ಭ್ರಷ್ಟಾಚಾರ: ಸರ್ಕಾರದಿಂದ 2,000 ಕೋಟಿ ಅವ್ಯವಹಾರ: ಸಿದ್ದರಾಮಯ್ಯ ಆರೋಪ

  ಡಿಸಿಗಳಿಗೆ 800 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ನಾವು 232  ಕೋಟಿ ಡಿಸಿಗಳಿಗೆ ಬಿಡುಗಡೆ ಮಾಡಿದ್ದೇವೆ. 30 ಜಿಲ್ಲೆಗಳಿಗೆ 56 ಕೋಟಿ ರೂ. ಆಹಾರಕ್ಕೆ ಬಿಡುಗಡೆ ಮಾಡಿದ್ದೇವೆ. 34 ಕೋಟಿ ಕ್ವಾರಂಟೈನ್​ಗೆ ಬಿಡುಗಡೆ ಮಾಡಿದ್ದೇವೆ. ಕೋವಿಡ್​ಗೆ​68 ಕೋಟಿಯನ್ನು ಎಲ್ಲ ಡಿಸಿಗಳಿಗೆ ಬಿಡುಗಡೆ ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ನೀಡಿದ ಪೈಸೆ ಪೈಸೆಗೂ ಲೆಕ್ಕಕ್ಕೆ ದಾಖಲೆ ಇದೆ ಎಂದ ಆರ್. ಅಶೋಕ್, ಕೌರವರಿಗೆ ಉತ್ತರ ನೀಡಲು ನಾವು ಪಾಂಡವರು ಬಂದಿದ್ದೇವೆ ಎಂದು ಪ್ರತ್ಯುತ್ತರ ನೀಡಿದರು.
  Published by:HR Ramesh
  First published: