ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ; ಸೋನಿಯಾ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ

ಯಡಿಯೂರಪ್ಪ ಅನೈತಿಕ ಮಾರ್ಗದಲ್ಲಿ ಸಿಎಂ ಆಗಿದ್ದಾರೆ. ಸರ್ಕಾರದ ಬಣ್ಣ ಬಯಲಾಗುತ್ತದೆ ಅಂತಾ ಅಧಿವೇಶನವನ್ನು ಹೆಚ್ಚು ದಿನ ನಡೆಸಲಿಲ್ಲ. ಯಾವುದೇ ಚರ್ಚೆ ಇಲ್ಲದೆ ಬಜೆಟ್ ಪಾಸ್ ಮಾಡಿಕೊಂಡಿದ್ದಾರೆ. ವರ್ಗಾವಣೆ ದೊಡ್ಡ ದಂಧೆ ಆಗುತ್ತಿದೆ. ಇದರ ಬಗ್ಗೆಯೂ ಚರ್ಚೆ ಆಗಬೇಕಿತ್ತು ಎಂದು ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

HR Ramesh | news18-kannada
Updated:October 16, 2019, 3:17 PM IST
  • Share this:
ನವದೆಹಲಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸರ್ಕಾರ ಬೀಳಿಸಿದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಸರ್ಕಾರ ಬೀಳಲು ಕಾರಣರಾದ ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿಯಿಂದ ಬಂದವವರನ್ನು ಕಾರ್ಯಕರ್ತರು ಒಪ್ಪಬೇಕಾಗುತ್ತೆ, ಬಂದರೆ ಆಮೇಲೆ ಯೋಚಿಸೋಣ. ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಬಂದರೆ ಸ್ವಾಗತ ಎಂದು ಆಹ್ವಾನ ನೀಡಿದರು.

ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ್ದಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಹೇಳಲು ಬಂದಿದ್ದೆ. ಅವರಿಗೆ ಕೃತಜ್ಞತೆ ಹೇಳಿದ್ದೇನೆ. ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರ ತರುತ್ತೇವೆ ಎಂದು ಹೇಳಿದ್ದೇನೆ.  ಉಪ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಪರಮೇಶ್ವರ್ ಐಟಿ ರೇಡ್ ಬಗ್ಗೆ ಮಾಹಿತಿ ಕೇಳಿದರು ಎಂದು ತಿಳಿಸಿದರು.

ಸ್ಪೀಕರ್ ಕಾಗೇರಿ ಅವರು ಕೇಶವ ಕೃಪ ಹೇಳಿದಂತೆ ಕೇಳುತ್ತಾರೆ. ಆರ್​ಎಸ್​ಎಸ್ ಹೇಳಿದಂತೆ ಥೈ ಥೈ ಅಂತಾ ಕುಣಿತ್ತಾರೆ. ಬಿಜೆಪಿ ಸರಕಾರ ಸತ್ತು ಹೋಗಿದೆ. ಪಂಚೇಂದ್ರಿಗಳು ಇಲ್ಲ, ಕಿವಿ, ಕಣ್ಣೂ ಇಲ್ಲ. ಯಡಿಯೂರಪ್ಪ ಅನೈತಿಕ ಮಾರ್ಗದಲ್ಲಿ ಸಿಎಂ ಆಗಿದ್ದಾರೆ. ಸರ್ಕಾರದ ಬಣ್ಣ ಬಯಲಾಗುತ್ತದೆ ಅಂತಾ ಅಧಿವೇಶನವನ್ನು ಹೆಚ್ಚು ದಿನ ನಡೆಸಲಿಲ್ಲ. ಯಾವುದೇ ಚರ್ಚೆ ಇಲ್ಲದೆ ಬಜೆಟ್ ಪಾಸ್ ಮಾಡಿಕೊಂಡಿದ್ದಾರೆ. ವರ್ಗಾವಣೆ ದೊಡ್ಡ ದಂಧೆ ಆಗುತ್ತಿದೆ. ಇದರ ಬಗ್ಗೆಯೂ ಚರ್ಚೆ ಆಗಬೇಕಿತ್ತು ಎಂದು ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

ಇದನ್ನು ಓದಿ: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜ್ಯ ಕಾಂಗ್ರೆಸ್​ನ ಕೆಸಿ ರಾಮಮೂರ್ತಿ; ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ

ರೌಡಿ ಶೀಟರ್ ಜೊತೆ ಕೆ.ಸಿ. ವೇಣುಗೋಪಾಲ್ ಫೋಟೋ ತೆಗಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಫೋಟೋದಲ್ಲಿ ಇರುವ ರೌಡಿಶೀಟರ್​ ಹೆಂಡತಿ ಕಾರ್ಪೋರೆಟರ್ ಆಗಿದ್ದಾರೆ. ವೇಣುಗೋಪಾಲ್​ಗೆ ಗೊತ್ತಿರುತ್ತಾ ಇವರೇ ರೌಡಿ ಶೀಟರ್ ಅಂತಾ. ಭೇಟಿಗೆ ಬಂದಾಗ ಕುತ್ತಿಗೆ ಹಿಡಿದು ತಳ್ಳೊಕೆ ಆಗುತ್ತಾ? ನೀನು ರೌಡಿ ಏನಪ್ಪ? ರೌಡಿ ಶೀಟರ್ ಏನಪ್ಪ ಅಂತಾ ಕೇಳೋಕೆ ಆಗುತ್ತಾ? ಎಂದು ಪ್ರಶ್ನೆ ಮಾಡಿದರು.

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading