ನಾವು ಬಿಜೆಪಿ ಸರ್ಕಾರ ಬೀಳಿಸಲ್ಲ, ಅವರ ಪಕ್ಷದವರೇ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ; ಡಿ.ಕೆ.ಶಿವಕುಮಾರ್

ಶಿವಾಜಿನಗರದ ವಸಂತ ನಗರ ವಾರ್ಡಿನಲ್ಲಿ ರೋಡ್ ಷೋ ಮೂಲಕ ಪಕ್ಷದ ಅಭ್ಯರ್ಥಿ ಪರ ಡಿಕೆಶಿ ಪ್ರಚಾರ ಮಾಡಿದರು. ಡಿಕೆಶಿಗೆ ಕ್ರೇನ್ ಮೂಲಕ ಬೃಹತ್ ಸುಗಂಧರಾಜ್ ಜೊತೆಗೆ ಸೇಬಿನ ಹಾರ ಹಾಕಿ ಸ್ವಾಗತ ಕೋರಲಾಯಿತು. ಈ ವೇಳೆ ಹಾಸ್ಯ ನಟ ಸಾಧುಕೋಕಿಲ ಕೂಡ ಪ್ರಚಾರದಲ್ಲಿ ಭಾಗಿಯಾದರು.

news18-kannada
Updated:November 29, 2019, 3:22 PM IST
ನಾವು ಬಿಜೆಪಿ ಸರ್ಕಾರ ಬೀಳಿಸಲ್ಲ, ಅವರ ಪಕ್ಷದವರೇ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ; ಡಿ.ಕೆ.ಶಿವಕುಮಾರ್
ಡಿ ಕೆ ಶಿವಕುಮಾರ್
  • Share this:
ಬೆಂಗಳೂರು: ಬಿಜೆಪಿ ಯಾವಾಗ ಅಧಿಕಾರಕ್ಕೆ ಬರುತ್ತೋ  ಆಪರೇಶನ್ ಕಮಲ ಮಾಡಿಯೇ ಬರುತ್ತೆ. ನನಗೆ ಕೊನೇ ಅವಕಾಶ ಅಂತ ಹೇಳಿ ಏಳು ಬಾರಿ ಸರ್ಕಾರ ಬೀಳಿಸೋಕೆ ಯಡಿಯೂರಪ್ಪನವರು ಪ್ರಯತ್ನಿಸಿದ್ದರು ಎಂದು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದರು.

ಶಿವಾಜಿನಗರಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆಶಿ, ಸಂತೆಯಲ್ಲಿ ಕುರಿ, ಕೋಳಿ ತಂದು ಮಾರಾಟ ಮಾಡುವಂತೆ ಶಾಸಕರು ಮಾರಾಟವಾಗಿದ್ದಾರೆ. ರೋಷನ್ ಬೇಗ್ ಅಂತ ಹೆಸರು ಬರಲು ಕಾಂಗ್ರೆಸ್ ಕಾರಣ. ಬಿಜೆಪಿಯಲ್ಲಿ ನಿಂತರೆ ಓಟ್ ಬರಲ್ಲ ಅಂತ ಅವರಿಗೆ ಟಿಕೆಟ್ ಕೊಟ್ಟಿಲ್ಲ.  ಬಿಜೆಪಿ ಜೊತೆ ಬೇಗ್ ಇದ್ದಾರೆ, ಇರಲಿ, ನಮಗೇನೂ ತೊಂದರೆ ಇಲ್ಲ. ಬಿಜೆಪಿಯವರು ಈ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಕೊಟ್ಟಿದ್ದಾರೆ. ಆ ಅಭ್ಯರ್ಥಿ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿದರು.

ಯಡಿಯೂರಪ್ಪ ನಡೆಸುತ್ತಿರುವ ಚುನಾವಣಾ ತಂತ್ರಗಳನ್ನು ಜನ ಒಪ್ಪಲ್ಲ.  ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಳ್ಳಲಿಲ್ಲ. ಪ್ರಜಾಪ್ರಭುತ್ವದ ಪ್ರತಿಯೊಬ್ಬ ಮತದಾರನಿಗೂ ಮೋಸ ಆಗಿದೆ. ಹೀಗಾಗಿ ಕಾಂಗ್ರೆಸ್, ಶಿವಸೇನೆ, ಎನ್​ಸಿಪಿ ಮೂರೂ ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದ್ವು ಎಂದು ಹೇಳಿದರು.

ಡಿ. 9 ರ ನಂತರ ನಾವು ಬಿಎಸ್​ವೈ ಸರ್ಕಾರ ಬೀಳಿಸಲ್ಲ. ನಾನು ಬಿಜೆಪಿ ಸರ್ಕಾರದ ಭವಿಷ್ಯ ಹೇಳಲ್ಲ. ನಾವು ಅದಕ್ಕೆ ಮುಹೂರ್ತ ಫಿಕ್ಸ್ ಮಾಡಲ್ಲ. ಅವರ ಪಕ್ಷದವರೇ ಬಿಜೆಪಿ ಸರ್ಕಾರವನ್ನು ಬೀಳಿಸುತ್ತಾರೆ. ಬಿಜೆಪಿಯಲ್ಲಿ ಎಲ್ಲಾ ನಾಯಕರು ಕುದಿಯುತ್ತಿದ್ದಾರೆ.  ಎಣ್ಣೆಯಲ್ಲಿ ಜಿಲೇಬಿ ಕುದಿಯುವ ಹಾಗೆ ಕುದಿಯುತ್ತಿದ್ದಾರೆ. ಅವರೆ ಸರ್ಕಾರ ಬೀಳಿಸ್ತಾರೆ ಎಂದರು.

ಇದನ್ನು ಓದಿ: ಡಿ. 9ರ ನಂತರ ಸರ್ಕಾರ ಪತನ: ಮತ್ತೊಮ್ಮೆ ಭವಿಷ್ಯ ನುಡಿದ ಸಿದ್ದರಾಮಯ್ಯ

ಶಿವಾಜಿನಗರದ ವಸಂತ ನಗರ ವಾರ್ಡಿನಲ್ಲಿ ರೋಡ್ ಷೋ ಮೂಲಕ ಪಕ್ಷದ ಅಭ್ಯರ್ಥಿ ಪರ ಡಿಕೆಶಿ ಪ್ರಚಾರ ಮಾಡಿದರು. ಡಿಕೆಶಿಗೆ ಕ್ರೇನ್ ಮೂಲಕ ಬೃಹತ್ ಸುಗಂಧರಾಜ್ ಜೊತೆಗೆ ಸೇಬಿನ ಹಾರ ಹಾಕಿ ಸ್ವಾಗತ ಕೋರಲಾಯಿತು. ಈ ವೇಳೆ ಹಾಸ್ಯ ನಟ ಸಾಧುಕೋಕಿಲ ಕೂಡ ಪ್ರಚಾರದಲ್ಲಿ ಭಾಗಿಯಾದರು.

 
First published: November 29, 2019, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading