News18 India World Cup 2019

ನಾವು ಬಂದಿರೋದು ರಾಜಕಾರಣ ಮಾಡಲಿಕ್ಕೆ, ಸಮಾಜ ಸೇವೆಗಲ್ಲ; ಅನಂತ್​​ಕುಮಾರ್ ಹೆಗಡೆ

G Hareeshkumar
Updated:October 11, 2018, 4:28 PM IST
ನಾವು ಬಂದಿರೋದು ರಾಜಕಾರಣ ಮಾಡಲಿಕ್ಕೆ, ಸಮಾಜ ಸೇವೆಗಲ್ಲ; ಅನಂತ್​​ಕುಮಾರ್ ಹೆಗಡೆ
ಅನಂತಕುಮಾರ್ ಹೆಗಡೆ ಪ್ರಾತಿನಿಧಿಕ ಚಿತ್ರ
G Hareeshkumar
Updated: October 11, 2018, 4:28 PM IST
- ರಾಜೇಂದ್ರ ಸಿಂಗನಮನೆ, ನ್ಯೂಸ್ 18 ಕನ್ನಡ 

ಶಿರಸಿ (ಅ.11) :  ನಾವು ರಾಜಕಾರಣ ಮಾಡೋಕೆ‌ ಈ ಕುರ್ಚಿ ಮೇಲೆ ಕುಳಿತಿರೋದು. ಯಾವುದೇ ಸಮಾಜ ಸೇವೆ ಮಾಡಲಿಕ್ಕೆ‌ ಅಲ್ಲ ಎಂದು ಕೇಂದ್ರ ಸಚಿವ ಅನಂತ್​ಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ  ಶಿರಸಿಯಲ್ಲಿ ಮಾತನಾಡಿದ ಅವರು, ಯಾರಾದರು ಕೇಳಬಹುದು, ಇವರು ರಾಜಕಾರಣ ಮಾಡ್ತಾರೆ ಅಂತಾಹ, ರಾಜಕಾರಣ ಮಾಡಲಿಕ್ಕಾಗಿಯೇ ನಾವಿದ್ದೇವೆ ಎಂದರು.

ರಾಜಕಾರಣಕ್ಕೆಲ್ಲದೆ ಮತ್ತೇಕೆ ನಾವು ಇಲ್ಲಿಗೆ ಬಂದಿದ್ದೇವೆ. ರಾಜಕಾರಣ ಮಾಡಲಿಕ್ಕಾಗಿಯೇ ತಾಲ್ಲೂಕು ಅಧ್ಯಕ್ಷರಾಗಿದ್ದೀರಿ, ಅದಕ್ಕಾಗಿಯೇ ತಾಲ್ಲೂಕು ಕಾರ್ಯದರ್ಶಿಗಳಾಗಿದ್ದೀರಿ, ಅದಕ್ಕಾಗಿಯೇ ಜಿಲ್ಲಾ ಸಮಿತಿ ಸದಸ್ಯರಾಗಿದ್ದೀರಿ, ಅದಕ್ಕಾಗಿಯೇ ಶಾಸಕರು, ಸಂಸದರಾಗಿದ್ದೀರಿ. ರಾಜಕಾರಣ ಬಿಟ್ಟು ಮತ್ತೇನು ಮಾಡಲು ಆಗುವುದಿಲ್ಲ. ರಾಜಕಾರಣವನ್ನೇ ಮಾಡಬೇಕು ಎಂದು ಹೇಳಿದರು.

ಸಮಾಜ ಸೇವೆ ಮಾಡಲು ಇಲ್ಲಿಗೆ ಬಂದಿಲ್ಲ, ಈ ಕುರ್ಚಿಗಳ ಮೇಲೆ ಬಂದು ಕುಳಿತುಕೊಂಡಿಲ್ಲ. ನಾವು ರಾಜಕಾರಣ ಮಾಡಲು ಬಂದು ಕುಳಿತುಕೊಂಡಿದ್ದೇವೆ. ಅದಕ್ಕೋಸ್ಕರ ರಾಜಕಾರಣವನ್ನೇ ಮಾಡುತ್ತೇವೆ. ಇದನ್ನು ಮಾಧ್ಯಮದವರು ಹೇಗೆ ಬರೆದುಕೊಳ್ಳುತ್ತಾರೆ ಬರೆದುಕೊಳ್ಳಲಿ. ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂದರು

ಈ ಹಿಂದೆಯೂ ಸಿದ್ದರಾಮಯ್ಯ ಅವರ ಕಾಂಗ್ರೆಸ್​​ ಸರ್ಕಾರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಅವರು, "ಸಿದ್ದರಾಮಯ್ಯ ವೋಟಿನ ಆಸೆಗೆ ಏನಬೇಕಾದ್ರು ಮಾಡುತ್ತಾರೆ. ವೋಟಿಗಾಗಿ ಯಾರು ಬೇಕೋ ಅವರ ಬೂಟ್‌ ಸಹ ನೆಕ್ಕುವ ಸ್ಥಿತಿಗೆ ತಲುಪಿದ್ದಾರೆ" ಎಂದು ಟೀಕಿಸಿ ವಿವಾದ ಸೃಷ್ಟಿಸಿದ್ದರು.
Loading...


ಇನ್ನು 'ಸಂವಿಧಾನ ಬದಲಾವಣೆ ಮಾಡಲು ಅಧಿಕಾರಕ್ಕೆ ಬಂದಿದ್ದೇವೆ' ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಬಳಿಕ ಹೆಗಡೆ ಹೇಳಿಕೆ ಬಗ್ಗೆ ಕ್ಷಮೆ ಯಾಚನೆ ಮಾಡಿದ್ದರು. ರಾಹುಲ್ ನೇತೃತ್ವದಲ್ಲಿ ಸಂಸದ ಅನಂತ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಮಣಿದ ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅವರು, 'ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುವೆ' ಎಂದು ಹೇಳಿದರು.

ನಾಲಿಗೆ ಹರಿಬಿಟ್ಟ ಹೆಗಡೆ: ಪಾಪಿಗಳು ಆಡಳಿತ ನಡೆಸಬಾರದು ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ..!

First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...