ನೆರೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ, ನೀವು ಹೇಳಿದಂತೆ ಸಂತ್ರಸ್ತರಿಗೆ ಪರಿಹಾರ ನೀಡಿ; ಸಿಎಂಗೆ ಡಿಕೆಶಿ ಆಗ್ರಹ

ಸ್ವಾತಂತ್ರ್ಯ ಬಂದ ಮೊದಲ ಬಾರಿಗೆ ಮಂತ್ರಿಗಳಿಲ್ಲದೇ ಬಾವುಟ ಹಾರಿಸುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ತಹಸೀಲ್ದಾರ್​, ಡಿಸಿಗಳು ಬಾವುಟ ಹಾರಿಸುವಂತಾಗಿದೆ. ಕೇಂದ್ರದ ಆಡಳಿತ ಇಲ್ಲಿ ನಡೆಯುತ್ತಿದೆ. ರಾಜ್ಯಪಾಲರ ಆಡಳಿತದಂತೆ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದರು.

Updated:August 14, 2019, 11:50 AM IST
ನೆರೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ, ನೀವು ಹೇಳಿದಂತೆ ಸಂತ್ರಸ್ತರಿಗೆ ಪರಿಹಾರ ನೀಡಿ; ಸಿಎಂಗೆ ಡಿಕೆಶಿ ಆಗ್ರಹ
ಡಿ.ಕೆ ಶಿವಕುಮಾರ್​​
  • Share this:
ಬೆಂಗಳೂರು: ನೆರೆ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಆ ಮಾತಿನಂತೆ ಮೊದಲು ನಡೆದುಕೊಳ್ಳಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಸದಾಶಿವನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ 5 ಸಾವಿರ ಬಾಡಿಗೆ ಕೊಡ್ತೀವಿ. ಮನೆ ರಿಪೇರಿಗೆ ಒಂದು ಲಕ್ಷ ಕೊಡ್ತಿವಿ, ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ಕೊಡ್ತೀವಿ, ಅಷ್ಟು ಕೊಡ್ತೀವಿ. ಇಷ್ಟು ಕೊಡ್ತೀವಿ ಅಂತಾ ಹೇಳಿದ್ದಾರೆ. ಅವರು ಹೇಳಿದಂತೆ ಮೊದಲು ನಡೆದುಕೊಳ್ಳಲಿ. ನಿಮ್ಮ ಅಧಿಕಾರಿಗಳನ್ನು ಬಳಸುಕೊಂಡು ಚೆಕ್ ವಿತರಿಸಿ. ನೆರೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ಮೊದಲು ಸಂತ್ರಸ್ತರಿಗೆ ಚೆಕ್ ಗಳನ್ನು ವಿತರಿಸಿ ಎಂದು ಹೇಳಿದರು.

ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಆ ಬಗ್ಗೆ ನನಗೆ ಗೊತ್ತಿಲ್ಲ. ತಿಳ್ಕೊಂಡು ಹೇಳ್ತಿನಿ. ನೀವು ಹೇಳ್ತಿದ್ದೀರಿ. ಆದ್ರೆ ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಇದನ್ನು ಓದಿ: ಇಂದು ಕರ್ನಾಟಕ ಸೇರಿ ದೇಶಾದ್ಯಂತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

ಸ್ವಾತಂತ್ರ್ಯ ಬಂದ ಮೊದಲ ಬಾರಿಗೆ ಮಂತ್ರಿಗಳಿಲ್ಲದೇ ಬಾವುಟ ಹಾರಿಸುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ತಹಸೀಲ್ದಾರ್​, ಡಿಸಿಗಳು ಬಾವುಟ ಹಾರಿಸುವಂತಾಗಿದೆ. ಕೇಂದ್ರದ ಆಡಳಿತ ಇಲ್ಲಿ ನಡೆಯುತ್ತಿದೆ. ರಾಜ್ಯಪಾಲರ ಆಡಳಿತದಂತೆ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದರು.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ