Karnataka By Election Result 2021; ಹಣ ದೊಡ್ಡ ಮಟ್ಟದಲ್ಲಿ ಬಿಂಬಿತವಾಗಿದೆ: ಚುನಾವಣೆ ಫಲಿತಾಂಶಕ್ಕೆ HDK ಪ್ರತಿಕ್ರಿಯೆ

ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಪರವಾಗಿರಲು ಜನರು ತಿಳಿಸಿದ್ದಾರೆ. ಅಭ್ಯರ್ಥಿಗಳನ್ನ‌ಹಾಕುವುದರಲ್ಲಿ ನಾವು ಎಡವಿಲ್ಲ. ನಮ್ಮ‌ಅಭ್ಯರ್ಥಿಗಳು ಕಾಂಗ್ರೆಸ್ ಹೋಗಿದ್ದಾರೆ. ಆದ್ರೆ ಅಲ್ಲಿ ‌ಮಾಡಿದ್ದಾದ್ರೂ ಏನು ಎಂದು ಅಶೋಕ್ ಮನಗೂಳಿ ಅವರನ್ನ ಪ್ರಶ್ನೆ ಮಾಡಿದರು. 

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

  • Share this:
ರಾಮನಗರ: ಸಿಂದಗಿ ಮತ್ತು ಹಾನಗಲ್ (Sindagi And Hangal) ವಿಧಾನಸಭಾ ಕ್ಷೇತ್ರದ ಚುನಾವಣೆಯ (Karnataka By Election Result 2021) ಫಲಿತಾಂಶದ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ರಾಮನಗರದ ತೋಟದ ಮನೆಯಲ್ಲಿ ಪ್ರತಿಕ್ರಿಯೆ ನೀಡಿದರು. ಎರಡು ಕ್ಷೇತ್ರದಲ್ಲಿ‌ಜೆಡಿಎಸ್ ಪಕ್ಷಕ್ಕೆ ಬಂದಂತ ಮತ ಕಾಂಗ್ರೆಸ್ ಪಕ್ಷ ಆಪಾದನೆಗೆ ಉತ್ತರ ಸಿಕ್ಕಿದೆ. ಕಾರ್ಯಕರ್ತರ ಒತ್ತಾಸೆಗೆ ಅಭ್ಯರ್ಥಿ ನಿಲ್ಲಿಸಲಾಗಿತ್ತು. ಸಿಂದಗಿ ಕ್ಷೇತ್ರದಲ್ಲಿನ ಮತ ಬೇಸರ ತಂದಿದೆ ಸಿಂದಗಿಯಲ್ಲಿ ಹಲವಾರು ಕಾರ್ಯಕ್ರಮ ಕೊಟ್ಟಿದ್ದರೂ ,ಫಲಿತಾಂಶ ನಿರಾಸೆ ತಂದಿದೆ. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ (Ashok Manuguli) ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿತು. ಹಾಗಾಗಿ ಪಕ್ಷದ ಅಭ್ಯರ್ಥಿಯನ್ನು ಗುರುತಿಸಲು ಗೊಂದಲವಾಯ್ತು ಎಂದರು.

ಸಾರ್ವತ್ರಿಕ ಚುನಾವಣೆಯೇ ಬೇರೆ ಉಪಚುವಾಣೆಯೇ ಬೇರೆ ಆಗಿರುತ್ತದೆ. ನನ್ನ ಗಮನ ಇರುವುದು 2023 ಕ್ಕೆ. ಪಕ್ಷವನ್ನ ತಳಮಟ್ಟದಿಂದ  ಮೇಲೆ ತರುವ ಕಡೆ ಗಮನ ನೀಡುತ್ತೇನೆ ಎಂದರು. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದೇನೆ. ನಾವು ವಿಷಯ ಆಧಾರಿತವಾಗಿ ಹೋರಾಟ ಮಾಡುತ್ತೇವೆ. ಹಾನಗಲ್ ನಲ್ಲಿ ನಮಗೆ ಬೇಸ್ ಇರಲಿಲ್ಲ. ಆದರೆ ಮೊದಲೆಲ್ಲ ಸಿಂದಗಿಯಲ್ಲಿ ಬಿಜೆಪಿಗೆ ಫೈಟ್ ಕೋಟ್ಟಿದ್ದು ನಾವೇ. ಮುಂದಿನ ಚುನಾವಣೆಗೆ ಪಕ್ಷ ಸಧೃಢ ಗೊಳಿಸಲು ಮುಂದಾಗುತ್ತೇನೆ ಎಂದು ಹೇಳಿದರು|

ನಾವು ಹಣ ಹಂಚಿಲ್ಲ

8 ನೇ ತಾರೀಖಿನಿಂದ ಸಭೆ ನಡೆಸುತ್ತೇವೆ. 8 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ, 30 ಜಿಲ್ಲೆಯ ಕಾರ್ಯಕರ್ತರ ಜತೆ ಸಭೆ ಮಾಡ್ತೇವೆ ಈ ಚುನಾವಣೆಯಲ್ಲಿ ಹಣ ದೊಡ್ಡ ಮಟ್ಟದಲ್ಲಿ ಬಿಂಬಿತವಾಗಿದೆ. ಆದ್ರೆ ನಾವು ಯಾವ ಹಣ ಹಂಚಿಲ್ಲ.. ಆದ್ರೆ ರಾಷ್ಟ್ರೀಯ ಪಕ್ಷಗಳು ಹಣ ಹಂಚಿವೆ. ಉಪಚುನಾವಣೆ ನಡೆಯುವುದೇ ಹಣ ಬಲದಿಂದ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ:  ಹಣ ದೊಡ್ಡ ಮಟ್ಟದಲ್ಲಿ ಬಿಂಬಿತವಾಗಿದೆ: ಚುನಾವಣೆ ಫಲಿತಾಂಶಕ್ಕೆ ಹೆಚ್.ಡಿ,ಕುಮಾರಸ್ವಾಮಿ ಪ್ರತಿಕ್ರಿಯೆ

ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಪರವಾಗಿರಲು ಜನರು ತಿಳಿಸಿದ್ದಾರೆ. ಅಭ್ಯರ್ಥಿಗಳನ್ನ‌ಹಾಕುವುದರಲ್ಲಿ ನಾವು ಎಡವಿಲ್ಲ. ನಮ್ಮ‌ಅಭ್ಯರ್ಥಿಗಳು ಕಾಂಗ್ರೆಸ್ ಹೋಗಿದ್ದಾರೆ. ಆದ್ರೆ ಅಲ್ಲಿ ‌ಮಾಡಿದ್ದಾದ್ರೂ ಏನು ಎಂದು ಅಶೋಕ್ ಮನಗೂಳಿ ಅವರನ್ನ ಪ್ರಶ್ನೆ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಏನಾಗಲಿದೆ ಅಂತ ನೋಡೋಣ

ಈ ಚುನಾವಣೆ ನನಗೆ ನಿರಾಸೆ ತಂದಿಲ್ಲ. ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಏನಾಗಲಿದೆ ಎಂಬುದನ್ನ ನೋಡೋನಾ, ಆಗ ಚರ್ಚೆ ಮಾಡೋಣ. ಈಗ ತುಂಬಾ ವ್ಯತ್ಯಾಸ ಇದೆ. ಅಭಿವೃದ್ಧಿ ಆದಾಗ ಮಾತನಾಡುತ್ತಾರೆ. ಆದರೆ ಜನರೇಷನ್ ಬದಲಾದಾಗ ಜನರು ಮರೆಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ಣೂ ಓದಿ:  Karnataka By Election Results 2021: ಹಾನಗಲ್ ನಲ್ಲಿ ಗೆದ್ದ ಕಾಂಗ್ರೆಸ್; ಸಿಎಂ ತವರು ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಗೆಲುವಿನ ಸೀಕ್ರೆಟ್ ಏನು?

ದೇವೇಗೌಡರ ಪ್ರತಿಕ್ರಿಯೆ

ಉಪ ಸಮರದ ಫಲಿತಾಂಶದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Devegowda) ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಂದು ಉಪಚುನಾವಣೆಗಲ ಪ್ರಚಾರಕ್ಕೆ ಹೋದವನಲ್ಲ. ಆದರೂ ಸಿಂದಗಿ ಆದರೆ ಸಿಂದಗಿ ಉಪಚುನಾವಣೆ ಹೋಗಿದ್ದೆ.ಸಿಂದಗಿ ಜನರು ಕಷ್ಟದಲ್ಲಿದ್ದರು, ಕೂಲಿಗೆ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು.ಆ ಭಾಗದ ಜನರಿಗೆ ಏನ್ ಮಾಡಿದ್ದೇನೆ ಅನ್ನೊದನ್ನು ಜನರೇ ಹೇಳುತ್ತಾರೆ. ಮನಗೊಳಿಯವ್ರು ಸಮಾಜವಾದಿ ಜನತಾ ಪಾರ್ಟಿಯಿಂದ ನಿಂತು ಸೋತರು. ಮತ್ತೆ ನಮ್ಮ ಪಕ್ಷಕ್ಕೆ ಬಂದರು, ಗೆದ್ದರು ಅವರನ್ನು  ಮಂತ್ರಿ ಮಾಡಿದ್ದೆವು.ಆತನ ಮಗ ಕಾಂಗ್ರೆಸ್ ಗೆ ಹೋಗಿದ್ದನ್ನು ಚರ್ಚೆ ಮಾಡಲ್ಲ. ಈ ಬಾರಿಯ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ಆದರೆ ಬಿಜೆಪಿ, ಕಾಂಗ್ರೆಸ್​ ಪಕ್ಷ ಹಣದ ಹೊಳೆ ಹರಿಸಿದ್ದಾರೆ ಎಂದು ದೇವೇಗೌಡ ಕಿಡಿಕಾರಿದ್ದಾರೆ.

ಇನ್ನೂಈ ಫಲಿತಾಂಶದಿಂದ ನಾನು ಧೃತಿಗೆಟ್ಟಿಲ್ಲ. ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದೂವರೆ ಇದೆ. ರಾಜ್ಯ ಪ್ರವಾಸ ಮಾಡುತ್ತೇನೆ. ಬೈ ಎಲೆಕ್ಷನ್​ನಲ್ಲಿ ಬಿಜೆಪಿ, ಕಾಂಗ್ರೆಸ್ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
Published by:Mahmadrafik K
First published: