news18-kannada Updated:March 10, 2020, 7:42 PM IST
ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಸದನದಲ್ಲಿ ಸಂವಿಧಾನದ ಬಗ್ಗೆ ಬಹಳ ಉತ್ತಮ ಚರ್ಚೆ ನಡೆದಿತ್ತು. ಇವತ್ತು ಸಚಿವ ಸುಧಾಕರ್ ಕೂಡ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅವರು ಮಾತನಾಡುವಾಗ ಅನಗತ್ಯ ವಿಚಾರ ಪ್ರಸ್ತಾಪ ಮಾಡಿದರು. ರಮೇಶ್ ಕುಮಾರ್ ಬಗ್ಗೆ ಅವರು ಸ್ಪೀಕರ್ ಆಗಿದ್ದಾಗ ಮಾಡಿದ್ದ ಆದೇಶದ ಬಗ್ಗೆ ಪ್ರಸ್ತಾಪ ಮಾಡಿದರು. ಆ ಆದೇಶ ರಮೇಶ್ ಕುಮಾರ್ ಆಗಿ ಮಾಡಿದ್ದಲ್ಲ. ಸ್ಪೀಕರ್ ಆಗಿ ಮಾಡಿದ್ದ ಆದೇಶ ಎಂದು ಸಿದ್ದರಾಮಯ್ಯ ಹೇಳಿದರು.
ಸದನದಲ್ಲಿ ಕೆ.ಸುಧಾಕರ್ ಮತ್ತು ರಮೇಶ್ ಕುಮಾರ್ ಏಕವಚನ ಜಟಾಪಟಿಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಸ್ಪೀಕರ್ ಆದೇಶದಿಂದ 17 ಜನ ಅನರ್ಹರಾಗಿದ್ದರು. ಅವರಲ್ಲಿ ಸುಧಾಕರ ಕೂಡ ಒಬ್ಬರು. ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಅದನ್ಮು ಸುಧಾಕರ ಹೇಳುತ್ತಾ, ಆ ಪೀಠದಿಂದ ಆದೇಶ ಮಾಡಿದ್ರು. ಮಾನಸಿಕವಾಗಿ ಹಿಂಸೆ ಕೊಟ್ಟು ಅನರ್ಹ ಮಾಡಿದ್ರು ಅಂತಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಇಲ್ಲಿ ಬಳಸುವಂತಿಲ್ಲ. ಅದನ್ನು ಹೇಳುತ್ತಾ ರಮೇಶ್ ಕುಮಾರ್ ವಿರುದ್ಧ ಅವ್ಯಾಚ್ಯ ಪದ ಬಳಸಿದ್ದಾರೆ. ಸುಧಾಕರ್ ಹೀಗೆ ಮಾತನಾಡಿದ್ದು ಸರಿಯಲ್ಲ. ಸದನದ ಹಕ್ಕುಚ್ಯುತಿಯಾಗಿದೆ. ರಮೇಶ್ ಕುಮಾರ್ ಘನತೆ ಗೌರವಕ್ಕೆ ಧಕ್ಕೆ ತರುವ ಮಾತನ್ನಾಡಿದ್ದಾರೆ. ಪೀಠಕ್ಕೆ ಅಗೌರವವಾಗಿದೆ. ಸದನಕ್ಕೆ ಅಗೌರವಾಗಿದೆ. ಸುಧಾಕರ್ ಬಹಳ ಉದ್ದಟತನದಿಂದ ಮಾತಾಡಿದ್ದಾರೆ. ಅದಕ್ಕೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನೋಟಿಸ್ ಕೊಟ್ಟಿದ್ದೇವೆ. ಇದರ ಮೇಲೆ ಚರ್ಚೆ ಮಾಡಲು ಅವಕಾಶ ನೀಡಲೇ ಇಲ್ಲ. ಗದ್ದಲ ಮಾಡಿದರು. ಸರ್ಕಾರ ನಡೆಸುವವರೇ ಹೀಗೆ ಮಾಡಿದರೆ ಹೇಗೆ? ಇದನ್ನು ನಾನು ಖಂಡಿಸುತ್ತೇನೆ. ಇದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಇವರು ಪ್ರಜಾತಂತ್ರ ವಿರೋಧಿಗಳು. ಸದನ ನಡೆಯದಿರಲು, ಗದ್ದಲಕ್ಕೆ ಮಂತ್ರಿಗಳು, ಸರ್ಕಾರ ಕಾರಣ. ಸುಧಾಕರ್ ಸದನದಲ್ಲಿ ಇರಲು ಯೋಗ್ಯರಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಸದನದಲ್ಲಿ ಏಕವಚನದಲ್ಲಿ ಬೈಯ್ದಾಡಿದ ರಮೇಶ್ ಕುಮಾರ್-ಕೆ.ಸುಧಾಕರ್; ಹಕ್ಕು ಚ್ಯುತಿ ಮಂಡನೆಗೆ ಕಾಂಗ್ರೆಸ್ ನಿರ್ಧಾರ
ಬಿಜೆಪಿಯವರು ಹಕ್ಕುಚ್ಯುತಿ ಮಂಡಿಸುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಕ್ಕುಚ್ಯುತಿ ಮಂಡನೆಗೆ ಮೊದಲು ನಾವು ನೊಟೀಸ್ ಕೊಟ್ಟಿದ್ದೇವೆ. ರಮೇಶ್ ಕುಮಾರ್ ಬಾಸ್ಟೆಡ್ ಅನ್ನೋ ಪದ ಬಳಸಿಲ್ಲ. ಅವರು ಆ ಪದ ಬಳಸಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆ ಇದೆಯಾ? ಒಳಗೆ ರೆಕಾರ್ಡ್ ಆಗಿದೆಯಾ? ತೋರಿಸಿ ನೋಡೋಣ ಎಂದು ಸವಾಲು ಹಾಕಿದರು.
First published:
March 10, 2020, 7:42 PM IST