ನಾವೆಲ್ಲಾ ಒಟ್ಟಿಗೆ ಇದ್ದೇವೆ, ಬಹುಮತ ಸಾಬೀತುಪಡಿಸುತ್ತೇವೆ; ಡಿಸಿಎಂ ಜಿ. ಪರಮೇಶ್ವರ್ ವಿಶ್ವಾಸ

ನಾವು ಎಲ್ಲಾ ಶಾಸಕರು ಒಟ್ಟಿಗೆ ಇದ್ದೇವೆ, ವಿಧಾನಸೌಧಕ್ಕೂ ಒಟ್ಟಿಗೆ ಬಂದಿದ್ದೇವೆ. ವಿಶ್ವಾಸಮತಕ್ಕೆ ಯಾವುದೇ ಅಡಚಣೆ ಬರುವುದಿಲ್ಲ. ಒಟ್ಟಾರೆ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವುದು ಖಚಿತ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

MAshok Kumar | news18
Updated:July 18, 2019, 11:21 AM IST
ನಾವೆಲ್ಲಾ ಒಟ್ಟಿಗೆ ಇದ್ದೇವೆ, ಬಹುಮತ ಸಾಬೀತುಪಡಿಸುತ್ತೇವೆ; ಡಿಸಿಎಂ ಜಿ. ಪರಮೇಶ್ವರ್ ವಿಶ್ವಾಸ
ಉಪ ಮುಖ್ಯಮಂತ್ರ ಡಾ.ಜಿ. ಪರಮೇಶ್ವರ್
  • News18
  • Last Updated: July 18, 2019, 11:21 AM IST
  • Share this:
ಬೆಂಗಳೂರು (ಜುಲೈ.18); ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಒಟ್ಟಿಗೆ ಇದ್ದೇವೆ ಹಾಗೂ ಬಹುಮತ ಸಾಬೀತುಪಡಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹುಮತ ಸಾಬೀತುಪಡಿಸುವ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಜಿ. ಪರಮೇಶ್ವರ್, “ನಾವು ಎಲ್ಲಾ ಶಾಸಕರು ಒಟ್ಟಿಗೆ ಇದ್ದೇವೆ, ವಿಧಾನಸೌಧಕ್ಕೂ ಒಟ್ಟಿಗೆ ಬಂದಿದ್ದೇವೆ. ವಿಶ್ವಾಸಮತಕ್ಕೆ ಯಾವುದೇ ಅಡಚಣೆ ಬರುವುದಿಲ್ಲ. ಬಹುಮತ ಸಾಬೀತಿಗೂ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಚರ್ಚೆಗೆ ಅವಕಾಶ ಕೊಟ್ಟರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ಮಾಡಬಹುದು. ಒಟ್ಟಾರೆ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವುದು ಮಾತ್ರ ಖಚಿತ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ಬಹುಮತದ ಮೇಲೆ ನಡೆಯ ಬಹುದಾದ ಚರ್ಚೆಯ ಕುರಿತು ಮಾಹಿತಿ ನೀಡಿದ ಅವರು, “ಸರ್ಕಾರದ ಬಗ್ಗೆ, ವ್ಯವಸ್ಥೆಯ ಬಗ್ಗೆ, ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ” ಎಂದು ತಿಳಿಸಿದರು. ಅಲ್ಲದೆ ಸದನದ ನಂತರ ಶಾಸಕರ ರೆಸಾರ್ಟ್ ವಾಸ್ತವ್ಯ ಇರತ್ತೋ? ಇಲ್ವೋ? ಅಂತ ಎಲ್ಲಾ ನಾಯಕರು ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ವಿಶ್ವಾಸಮತ ಯಾಚನೆ; ಬಿಜೆಪಿಗಿಂತ ಕಾನ್ಫಿಡೆಂಟ್ ಆಗಿರುವ ಸಿಎಂ ಹೆಚ್​ಡಿಕೆ; ಆಪರೇಷನ್ ಮೈತ್ರಿ ಗುಮಾನಿ!

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading