ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಮುಕ್ತ ಗುರಿ: ಡಿಸಿಎಂ ಅಶ್ವತ್ಥನಾರಾಯಣ್​

ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ತನ್ನೆಲ್ಲ ಗುರಿಗಳನ್ನು ಸಾಧಿಸಿದೆ. ಇದೀಗ ಪಂಚಾಯಿತಿ ಮಟ್ಟದಲ್ಲೂ ಆ ಪಕ್ಷವನ್ನು ಮುಕ್ತ ಮಾಡುವುದು ನಿಶ್ಚಿತ.

ಬಂಟ್ವಾಳದಲ್ಲಿ ನಡೆದ ಗ್ರಾಮ ಸ್ವರಾಜ್ ಸಮಾವೇಶ

ಬಂಟ್ವಾಳದಲ್ಲಿ ನಡೆದ ಗ್ರಾಮ ಸ್ವರಾಜ್ ಸಮಾವೇಶ

  • Share this:
ಮಂಗಳೂರು(ನ.28) : ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಗುರಿಯನ್ನು ಬಿಜೆಪಿ ಸಾಧಿಸಿದೆ. ಮುಂದಿನ‌ ದಿನಗಳಲ್ಲಿ ಗ್ರಾಮೀಣ ಮಟ್ದಲ್ಲೂ ಕಾಂಗ್ರೆಸ್‌ ಮುಕ್ತ ಗುರಿಯನ್ನು ನಮ್ಮ ಪಕ್ಷ ಸಾಧಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಬಂಟ್ವಾಳದಲ್ಲಿ 'ಗ್ರಾಮ ಸ್ವರಾಜ್' ಕಾರ್ಯಕ್ರಮದಲ್ಲಿ​ ಅವರು, ಕಾಂಗ್ರೆಸ್‌ ಪಕ್ಷವು ಇದೀಗ ದೇಶ ರಾಜಕಾರಣದಲ್ಲಿ ಅಪ್ರಸ್ತುತವಾಗಿದೆ. ನಾಯಕತ್ವದ ಕೊರತೆ, ಜನವಿರೋಧಿ ನೀತಿಗಳು, ರಾಷ್ಟ್ರದ ಹಿತಾಸಕ್ತಿ ಬಗ್ಗೆ ರಾಜಿ ಸೇರಿದಂತೆ ಅನೇಕ ಕಾರಣಗಳಿಂದ ಆ ಪಕ್ಷವು ಜನಮಾನಸದಿಂದ ಮರೆಯಾಗಿಬಿಟ್ಟಿದೆ. ಹೀಗಾಗಿ ದೇಶದಲ್ಲಿ ಜನರ ಏಕೈಕ ʼರಾಜಕೀಯ ಆಯ್ಕೆʼ ಎಂದರೆ ಬಿಜೆಪಿ ಮಾತ್ರ ಎಂದರು. ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ತನ್ನೆಲ್ಲ ಗುರಿಗಳನ್ನು ಸಾಧಿಸಿದೆ. ಇದೀಗ ಪಂಚಾಯಿತಿ ಮಟ್ಟದಲ್ಲೂ ಆ ಪಕ್ಷವನ್ನು ಮುಕ್ತ ಮಾಡುವುದು ನಿಶ್ಚಿತ. ಆ ನಿಟ್ಟಿನಲ್ಲಿ ಪಕ್ಷವು ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಲೋಕಮಾನ್ಯ ತಿಲಕರು ಹೇಳಿದ ಸ್ವರಾಜ್ಯ ಹಾಗೂ ಮಹಾತ್ಮ ಗಾಂಧಿ ಅವರು ನೀಡಿದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರ ಮಾಡಲು ಎಪ್ಪತ್ತು ವರ್ಷಗಳ ನಂತರ ಬಿಜೆಪಿ ಬರಬೇಕಾಯಿತು ಎಂದರು.

ನಗರ, ಪಟ್ಟಣಗಳಂತೆಯೇ ಗ್ರಾಮಗಳೂ ಅಭಿವೃದ್ಧಿ ಹೊಂದಬೇಕು. ಗ್ರಾಮದ ಆಡಳಿತ ಆ ಗ್ರಾಮದಲ್ಲಿಯೇ ಇರಬೇಕು. ಅಂತಹ ಆದರ್ಶ ಪಂಚಾಯತಿ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಬೇಕಿದೆ. ಉತ್ತಮ ಆಡಳಿತ ವ್ಯವಸ್ಥೆಯನ್ನು ಗ್ರಾಮ ಮಟ್ಟದಲ್ಲಿಯೇ ರೂಪಿಸಬೇಕು. ಉತ್ತಮ ಜನಪ್ರತಿನಿಧಿಗಳು ಉತ್ತಮ ಪಕ್ಷದಿಂದ ಮಾತ್ರ ಬರಲು . ಸಾಧ್ಯ. ಅಂತಹ ಉತ್ತಮ ಪಕ್ಷ ಬಿಜೆಪಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ;

ಇಡೀ ದೇಶಕ್ಕೆ ಹೊಸದಿಕ್ಕು ನೀಡಿಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ರೂಪಿಸಿದೆ. ಅದನ್ನು ಜಾರಿ ಮಾಡುತ್ತಿರುವ ರಾಜ್ಯವೆಂದರೆ ಕರ್ನಾಟಕ. ಬಹು ವಿಷಯಾಧಾರಿತ, ಬಹು ವಿಷಯ ಆಯ್ಕೆಯುಳ್ಳ, ವೈಜ್ಞಾನಿಕವಾದ  ಅಧ್ಯಯನ ನಡೆಸಲು ಸಾಧ್ಯ. ವಿದ್ಯಾರ್ಥಿಯ ಮೂರನೇ ವಯಸ್ಸಿನಿಂದಲೇ, ಅಂದರೆ ಫ್ರೀ ಸರ್ಸರಿಯಿಂದಲೇ ವ್ಯವಸ್ಥಿತ ಶಿಕ್ಷಣವನ್ನು ನೀಡಲಾಗುವುದು. ಈ ನೀತಿಯ ಜಾರಿಯೊಂದಿಗೆ ಇಡೀ ಶಿಕ್ಷಣ ಪದ್ಧತಿಗೆ ಪರಿಪೂರ್ಣತೆ ಬರುತ್ತಿದೆ ಎಂದು ತಿಳಿಸಿದರು.

ಇದನ್ನು ಓದಿ: ಕೌಟುಂಬಿಕ ರಾಜಕಾರಣದಿಂದ ಯಾರೂ ಹೊರತಾಗಿಲ್ಲ; ಟೀಕೆಗಳಿಗೆ ಕಿವಿಗೊಡಬೇಡಿ ನಿಖಿಲ್​, ಪ್ರಜ್ವಲ್​ಗೆ ಎಚ್​ಡಿಕೆ ಕಿವಿಮಾತು

ಮಗುವುಗೆ ಮೂರನೇ ವಯಸ್ಸಿನಿಂದಲೇ ವ್ಯವಸ್ಥಿತ ಶಿಕ್ಷಣ ನೀಡಬೇಕೆಂಬ ಚಿಂತನೆ ಬಹಳ ದಿನಗಳ ಹಿಂದಿನಿಂದಲೂ ಇತ್ತು. ಶಿಕ್ಷಣ ತಜ್ಞರು ಸಲಹೆ ಮಾಡುತ್ತಲೇ ಇದ್ದರು. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳುವಂಥ ಸರಕಾರ ಇರಲಿಲ್ಲ. ಆದರೆ, ಮೋದಿ ಅವರು ಬಂದ ಕೂಡಲೇ ಈ ಬಗ್ಗೆ ಗಮನ ಹರಿಸಿದರು. ಮೂರರಿಂದ ಆರನೇ ವಯಸ್ಸಿನಲ್ಲೇ ಶೇ80ರಷ್ಟು ಕಲಿಕೆಯ ಸಾಮರ್ಥ್ಯ ಇರುತ್ತದೆ. ಮಕ್ಕಳಿಗೆ ಮೂರಕ್ಕೂ ಹೆಚ್ಚು ಭಾಷೆ ಕಲಿಯುವ ಶಕ್ತಿಯೂ ಇರುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ  ಮಾಹಿತಿ ನೀಡಿದರು.

ತಾಂತ್ರಿಕ ಬೆಸುಗೆ:

ಕೋವಿಡ್‌ ಬಂದ ಮೇಲೆ ತಂತ್ರಜ್ಞಾನದಿಂದಲೇ ಎಲ್ಲವನ್ನೂ ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ವೃತ್ತಿ, ಸೇವೆ, ಶಿಕ್ಷಣ ಸೇರಿದಂತೆ ಎಲ್ಲವನ್ನು ತಂತ್ರಜ್ಞಾನವೇ ಬೆಸೆಯುತ್ತಿದೆ. ಹೀಗಾಗಿ ಗ್ರಾಮಗಳ್ಲಲೂ ಈಗ ತಂತ್ರಜ್ಞಾನವೇ ಎಲ್ಲವನ್ನೂ ನಿರ್ಧರಿಸುತ್ತಿದೆ. ಹೀಗಾಗಿ, ಗ್ರಾಮೀಣ ಮಟ್ಟದಲ್ಲಿ ಕನೆಕ್ಟಿವಿಟಿ ಮುಖ್ಯವಾಗುತ್ತದೆ. ಹೀಗಾಗಿ ಹಳ್ಳಿಗಳಿಗೆ ಉತ್ತಮ ಸಂಪರ್ಕ ಸೇತುವೆಯನ್ನು ಕಲ್ಪಸಬೇಕು ಎಂದು ತಿಳಿಸಿದರು
Published by:Seema R
First published: