Karnataka Bypoll Result: ಮತದಾರರ ತೀರ್ಪಿಗೆ ತಲೆಬಾಗುತ್ತೇವೆ; ಸೋಲೊಪ್ಪಿಕೊಂಡ ಡಿಕೆ ಶಿವಕುಮಾರ್​

Karnataka Bypoll Result: ಯಾರು ಯಾವ ಪಕ್ಷಕ್ಕೆ ಹೋದರು ಅಭ್ಯರ್ಥಿಗಳ ಪರ ಜನರು ಮತ ಚಲಾಯಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ನಿರ್ಣಯವೇ ಅಂತಿಮವಾಗಿದ್ದು, ಅವರ ತೀರ್ಮಾನವನ್ನು ಒಪ್ಪುತ್ತೇವೆ

Seema.R | news18-kannada
Updated:December 9, 2019, 11:10 AM IST
Karnataka Bypoll Result: ಮತದಾರರ ತೀರ್ಪಿಗೆ ತಲೆಬಾಗುತ್ತೇವೆ; ಸೋಲೊಪ್ಪಿಕೊಂಡ ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ಡಿ.9): ಪಕ್ಷಾಂತರಿಗಳಿಗೆ ಜನರು ಮತದಾನ ಮಾಡಿದ್ದಾರೆ ಎಂದರೆ, ಅದು ಜನರ ಇಚ್ಛೆ. ಮತದಾರರ ತೀರ್ಮಾನವನ್ನು ನಾವು ಒಪ್ಪುತ್ತೇವೆ ಎಂದು ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಹೇಳಿದ್ದಾರೆ. ಉಪ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಇನ್ನೂ ಮುಗಿಯದಿದ್ದರೂ ಅಧಿಕ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ ಎಂಬುದು ಸದ್ಯದ ಟ್ರೆಂಡ್​ನಿಂದ ತಿಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಮಾಜಿ ಸಚಿವ ಡಿಕೆ ಶಿವಕುಮಾರ್​ ಪಕ್ಷದ ಸೋಲನ್ನು ಒಪ್ಪಿಕೊಂಡಿದ್ದಾರೆ. 

ಉಪಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿರುವ ಕುರಿತು ಮಾತನಾಡಿದ ಅವರು, ಯಾರು ಯಾವ ಪಕ್ಷಕ್ಕೆ ಹೋದರು ಅಭ್ಯರ್ಥಿಗಳ ಪರ ಜನರು ಮತ ಚಲಾಯಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ನಿರ್ಣಯವೇ ಅಂತಿಮವಾಗಿದ್ದು, ಅವರ ತೀರ್ಮಾನವನ್ನು ಒಪ್ಪುತ್ತೇವೆ ಎಂದರು.

ಫಲಿತಾಂಶವನ್ನು ಗಮನಿಸಿದರೆ ಕಾಂಗ್ರೆಸ್​ ರಾಜಕಾರಣದಲ್ಲಿ ಎಡವುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್​ನಲ್ಲಿ ನಾವೆಲ್ಲಾ ಇದ್ದೇವೆ. ಯಾವಾಗ ಏನು ತಂತ್ರ ಮಾಡಬೇಕು ಎಂಬುದು ಗೊತ್ತಿದೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಇದನ್ನು ಓದಿ: ಉಪಚುನಾವಣೆ ಫಲಿತಾಂಶ: ಕ್ಷೇತ್ರವಾರು ಎಷ್ಟೆಷ್ಟು ಮತಗಳ ಲೀಡ್?

ಬಿಜೆಪಿ ನಾಯಕರು ಕಾಂಗ್ರೆಸ್​ಗೆ ಉಳಿಗಾಲವುಲ್ಲ ಎಂಬ ಟೀಕೆಗೆ ಉತ್ತರಿಸಿದ ಅವರು, ಬಹಳ ಸಂತೋಷ. ಒಳ್ಳೆಯದಾಗಲಿ. ಯಶಸ್ಸು ಸಿಗಲಿ ಎಂದು ಹಾರೈಸಿದರು.

ಇತ್ತೀಚಿನ ಮಾಹಿತಿ ಪ್ರಕಾರ ಬಿಜೆಪಿ ಒಟ್ಟೂ 12 ಕ್ಷೇತ್ರಗಳಲ್ಲಿ, ಕಾಂಗ್ರೆಸ್​ 2 ಕ್ಷೇತ್ರಗಳಲ್ಲಿ ಮತ್ತು ಸ್ವತಂತ್ರ್ಯ ಅಭ್ಯರ್ಥಿ ಶರತ್​ ಬಚ್ಚೇಗೌಡ ಮುನ್ನಡೆ ಸಾಧಿಸಿದ್ದಾರೆ. ಯಶವಂತಪುರ, ಗೋಕಾಕ್​, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು, ಕೆ ಆರ್​ ಪೇಟೆ, ಚಿಕ್ಕಬಳ್ಳಾಪುರ, ಯಲ್ಲಾಪುರ, ಕೆ.ಆರ್​. ಪುರಂ, ಅಥಣಿ, ಮಹಾಲಕ್ಷ್ಮಿ ಲೇಔಟ್​, ವಿಜಯನಗರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಹುಣಸೂರು ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಮುನ್ನಡೆ ಪಡೆದಿದೆ. ಯಲ್ಲಾಪುರ, ಚಿಕ್ಕಬಳ್ಳಾಪುರ ಮತ್ತು ಕೆ.ಆರ್​. ಪೇಟೆಯಲ್ಲಿ ಬಿಜೆಪಿ ಗೆಲುವು ಸ್ಪಷ್ಟವಾಗಿದೆ. ಆದರೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
First published: December 9, 2019, 10:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading