HOME » NEWS » State » WAVE RIDER BOY DESCENDS INTO THE ARABIAN SEA

ಅರಬ್ಬಿಸಮುದ್ರಕ್ಕೆ ಇಳಿದ ಅತ್ಯಾಧುನಿಕ ವೇವ್​ ರೈಡರ್​ ಬಾಯ್​; ಸಮುದ್ರದಾಳದ ಮಾಹಿತಿ ನೀಡಲು ಸಹಕಾರಿ

 ಸಮುದ್ರದಲ್ಲಿ ಏಳುವ ಅಲೆಗಳ ಎತ್ತರ  ಅಲೆಗಳ ದಿಕ್ಕು ಅಲೆಗಳ ಅವಧಿ, ಅವುಗಳು ಅಪ್ಪಳಿಸುವ ವೇಗ, ಸಮುದ್ರದ ನೀರಿನ ಉಷ್ಣಾಂಶ, ಗಾಳಿಯ ಉಷ್ಣಾಂಶ ಮುಂತಾದ ಅಂಶಗಳನ್ನು ಈ ಉಪಕರಣ ನಿರಂತರವಾಗಿ ದಾಖಲಿಸುತ್ತದೆ

news18-kannada
Updated:October 30, 2020, 7:25 AM IST
ಅರಬ್ಬಿಸಮುದ್ರಕ್ಕೆ ಇಳಿದ ಅತ್ಯಾಧುನಿಕ ವೇವ್​ ರೈಡರ್​ ಬಾಯ್​; ಸಮುದ್ರದಾಳದ ಮಾಹಿತಿ ನೀಡಲು ಸಹಕಾರಿ
ವೇವ್​ ರೈಡರ್​ ಬಾಯ್​ ಅನ್ನು ಸಮುದ್ರದಾಳಕ್ಕೆ ಇಡುತ್ತಿರುವ ಚಿತ್ರಣ
  • Share this:
ಕಾರವಾರ (ಅ.30):  ಕಡಲಿನ ಆಳದಲ್ಲಿ ಉಂಟಾಗುವ ವೈಪರಿತ್ಯದಿಂದ ಹವಾಮಾನ ಕುರಿತು ಸಂಪೂರ್ಣ ಮಾಹಿತಿ ನೀಡುವ ಸುಧಾರಿತ ‘ಸಾಗರ ಹವಾಮಾನ ಮುನ್ಸೂಚನಾ ಉಪಕರಣ ವೇವ್ ರೈಡರ್ ಬಾಯ್​ಯನ್ನು ಅರಬ್ಬಿ ಸಮುದ್ರದ ಅಳವಡಿಸಲಾಗಿದೆ. ಇದು ಕರ್ನಾಟಕ ರಾಜ್ಯದಲ್ಲೇ ಮೊದಲನೆಯದಾಗಿದ್ದು ಸುಧಾರಿತ ವೇವ್ ರೈಡರ್ ಬಾಯ್ ಇದಾಗಿದ್ದು, ಇದರ ಸಹಾಯದಿಂದ  ಹವಾಮಾನ ಬದಲಾವಣೆ, ಮೀನುಗಳ ಸಾಂದ್ರತೆಯ ಮಾಹಿತಿಯನ್ನು ಪಡೆಯಬಹುದಾಗಿದೆ. ಸಮುದ್ರದಲ್ಲಿ ಏಳುವ ಅಲೆಗಳ ಎತ್ತರ  ಅಲೆಗಳ ದಿಕ್ಕು ಅಲೆಗಳ ಅವಧಿ, ಅವುಗಳು ಅಪ್ಪಳಿಸುವ ವೇಗ, ಸಮುದ್ರದ ನೀರಿನ ಉಷ್ಣಾಂಶ, ಗಾಳಿಯ ಉಷ್ಣಾಂಶ ಮುಂತಾದ ಅಂಶಗಳನ್ನು ಈ ಉಪಕರಣ ನಿರಂತರವಾಗಿ ದಾಖಲಿಸುತ್ತದೆ. ಇದು ಇನ್ಸಾಟ್ ಸರಣಿಯ ಓಷಿಯನ್ ಸ್ಯಾಟ್ ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಉಪಗ್ರಹದಿಂದ ಹೈದರಾಬಾದ್‌ನಲ್ಲಿರುವ ‘ಇನ್‌ಕಾಯ್ಸ್’ ಕಚೇರಿಗೆ ಮಾಹಿತಿ ರವಾನೆಯಾಗುತ್ತದೆ. ಸಮುದ್ರದ ಸ್ಥಿತಿಗತಿಯ ಅಧ್ಯಯನಕ್ಕೆ ಇದು ಸಹಕಾರಿಯಾಗಲಿದೆ

ನೆದರ್‌ಲ್ಯಾಂಡ್‌ನಲ್ಲಿ ತಯಾರಾಗಿರುವ  75 ಲಕ್ಷ ಮೌಲ್ಯದ ಈ ಅತ್ಯಾಧುನಿಕ ಉಪಕರಣವನ್ನು ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರಕ್ಕೆ ಕಳೆದ ತಿಂಗಳು ತರಲಾಗಿತ್ತು. ಹೈದರಾಬಾದ್‌ನಲ್ಲಿರುವ ಸಮುದ್ರ ಮಾಹಿತಿ ಮತ್ತು ಸೇವೆಗಳ ರಾಷ್ಟ್ರೀಯ ಕೇಂದ್ರ, ‘ಇನ್‌ಕಾಯ್ಸ್’ (ಐ.ಎನ್.ಸಿ.ಒ.ಐ.ಎಸ್) ಉಪಕರಣವನ್ನು ಮಂಜೂರು ಮಾಡಿ ಕಳುಹಿಸಿಕೊಟ್ಟಿದೆ. ‘ಇನ್‌ಕಾಯ್ಸ್’ ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ.ಬಾಯ್‌ಗೆ ಥಾಯ್ಲೆಂಡ್‌ನಿಂದ ತರಿಸಲಾಗಿರುವ ಸುಮಾರು 1.50 ಲಕ್ಷ ಮೌಲ್ಯದ ವಿಶೇಷ ಹಗ್ಗದಿಂದ ಬಿಗಿಯಲಾಗುತ್ತದೆ. ಅದನ್ನು 400 ಕೆ.ಜಿ ತೂಕದ ವೇದಿಕೆಗೆ ಜೋಡಿಸಿ ಸಮುದ್ರಕ್ಕೆ ಇಳಿ ಬಿಡಲಾಯಿತು ಸಮುದ್ರದ ವರ್ತನೆಯ ಬಗ್ಗೆ ಮೀನುಗಾರರಿಗೆ, ಕಡಲತೀರದ ನಿವಾಸಿಗಳಿಗೆ ಮುನ್ಸೂಚನೆ ನೀಡಲು ಸುಧಾರಿತ ಸಾಗರ ಹವಾಮಾನ ಮುನ್ಸೂಚನಾ ಉಪಕರಣವು ಸಹಕಾರಿಯಾಗಲಿದೆ‌..

ಒಂಬತ್ತು ರಾಜ್ಯಗಳಿಗೆ ಮಂಜೂರು

ಸುಧಾರಿತ ಸಾಗರ ಹವಾಮಾನ ಮುನ್ಸೂಚನಾ ಉಪಕರಣವು ಹೆಚ್ಚಿನ ಸಾಮರ್ಥ್ಯವುಳ್ಳ (ಎಚ್.ಎಫ್) ಆ್ಯಂಟೆನಾ ಹೊಂದಿದೆ. ಉಪಕರಣವನ್ನು ಸಮುದ್ರಕ್ಕೆ ಬಿಟ್ಟ ಬಳಿಕ ಸುಮಾರು 50 ಮೀಟರ್‌ ಸುತ್ತಳತೆಯಲ್ಲೇ ಅದು ತೇಲುತ್ತಿರುತ್ತದೆ. ಈ ರೀತಿಯ ಉಪಕರಣವನ್ನು ಸಮುದ್ರ ತೀರ ಹೊಂದಿರುವ ಕರ್ನಾಟಕವೂ ಸೇರಿದಂತೆ ಒಂಬತ್ತು ರಾಜ್ಯಗಳಿಗೆ ನೀಡಲಾಗಿದೆ.

ಮೀನುಗರರಿಗೆ ಸಹಕಾರಿಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರಿಗೆ ಈ ಉಪಕರಣ ಭಾರಿ ಸಹಕಾರಿ ಆಗಲಿದೆ.ಆಳ ಸಮುದ್ರ ಮೀನುಗಾರಿಕೆ ತೆರಳಿದ ಸಂದರ್ಭದಲ್ಲಿ ಉಂಟಾಗುವ ಸಮುದ್ರದಲ್ಲಾಗುವ  ಬದಲಾವಣೆ ಈ ಉಪಕರಣದಿಂದ ತಿಳಿಯ ಬಹುದಾಗಿದೆ..ಹೀಗೆ ಹತ್ತು ಹಲವು ವಿಭಾಗದಲ್ಲಿ ಮೀನುಗಾರರಿಗೆ ಸಹಕಾರಿ ಆಗಲಿದೆ...
Published by: Seema R
First published: October 30, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories