ಡಿ. 1 ರಿಂದ ಆಲಮಟ್ಟಿ, ನಾರಾಯಣಪುರ ಜಲಾಷಯಗಳಿಂದ ವಾರಾ ಬಂದಿ ಪದ್ಧತಿಯಡಿ ಹಿಂಗಾರು ಹಂಗಾಮಿಗೆ ನೀರು ಬಿಡುಗಡೆ: ಡಿಸಿಎಂ ಗೋವಿಂದ ಕಾರಜೋಳ

ಕೆಬಿಜೆಎನ್ಎಲ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ಬಿಜೆಪಿ ಶಾಸಕ ಶಿವನಗೌಡ ನಾಯಕ ಮಧ್ಯೆ ವಾರಾಬಂದಿ ಪದ್ಧತಿಯಡಿ ನೀರು ಬಿಡುಗಡೆ ಕುರಿತು ಮಾತಿನ ಚಕಮಕಿಯೂ ನಡೆಯಿತು.

news18
Updated:November 17, 2019, 10:48 PM IST
ಡಿ. 1 ರಿಂದ ಆಲಮಟ್ಟಿ, ನಾರಾಯಣಪುರ ಜಲಾಷಯಗಳಿಂದ ವಾರಾ ಬಂದಿ ಪದ್ಧತಿಯಡಿ ಹಿಂಗಾರು ಹಂಗಾಮಿಗೆ ನೀರು ಬಿಡುಗಡೆ: ಡಿಸಿಎಂ ಗೋವಿಂದ ಕಾರಜೋಳ
ಸಭೆಯಲ್ಲಿ ಗೋವಿಂದ ಕಾರಜೋಳ
  • News18
  • Last Updated: November 17, 2019, 10:48 PM IST
  • Share this:
ವಿಜಯಪುರ(ನ. 17): ಆಲಮಟ್ಟಿ ಮತ್ತು ನಾರಾಯಣಪುರ ಜಲಾಷಯಗಳಿಂದ ಈ ಬಾರಿ ಹಿಂಗಾರು ಹಂಗಾಮಿಗೆ ಡಿಸೆಂಬರ್ 1 ರಿಂದ ಮುಂದಿನ ವರ್ಷದ ಮಾರ್ಚ್ 20ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಕೆಬಿಜೆಎನ್ಎಲ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಕಳೆದ ವರ್ಷ ಹಿಂಗಾರು ಹಂಗಾಮಿಗೆ ನೀರು ಬಿಡದ ಕಾರಣ ರೈತರು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಆದರೆ, ಈ ಬಾರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತ ಪರ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಅಥಣಿ ಕ್ಷೇತ್ರದ ಮತದಾರರ ಆಗ್ರಹ: ಉಪಚುನಾವಣೆ ಬಹಿಷ್ಕಾರ

ಸಭೆಯ ಬಳಿಕ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಡಿ. 1 ರಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಲಾಗುವುದು. ನವೆಂಬರ್ 21ರವರೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಷಯದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ 118 ಟಿಎಂಸಿ ನೀರು ಸಂಗ್ರಹವಿರಲಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ 39 ಟಿಎಂಸಿ ನೀರು ಉಳಿಸಿಕೊಳ್ಳಲಾಗುವುದು. ಇನ್ನುಳಿದ 78 ಟಿಎಂಸಿ ನೀರನ್ನು ರೈತರ ಜಮೀನಿಗೆ ಹರಿಸಲಾಗುವುದು. ವಿತರಣೆ ಕಾಲುವೆಯ ತುತ್ತ ತುದಿಯವರೆಗೆ ಅಂದರೆ ಟೇಲ್ ಎಂಡ್​ವರೆಗೆ ನೀರು ಹರಿಸಲು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.  ಡಿಸೆಂಬರ್ 1 ರಿಂದ ಮಾರ್ಚ್ 20ರ ವರೆಗೆ ಹಂತ ಹಂತವಾಗಿ ನೀರು ಬಿಡುಗಡೆ ಮಾಡಲಾಗುವುದು. 14 ದಿನ ನೀರು ಹರಿಸಿ 8 ದಿನ ನೀರು ಬಂದ್ ಮಾಡಲಾಗುವುದು. ಇದರ ಜತೆ ಕೆರೆ, ಬಾಂದಾರ್ ಹಾಗೂ ಬ್ಯಾರೇಜ್​ಗಳಿಗೂ ನೀರು ಹರಿಸಲು ನಿರ್ಧರಿಸಲಾಗಿದೆ. ಮುಂದಿನ ಸಭೆಯಲ್ಲಿ ರೈತರಿಗೆ ಹೆಚ್ಚುವರಿ ನೀರು ಬಿಡಿಸಲು ಚರ್ಚೆ ನಡೆಸಲಾಗುವುದು ಎಂದು ಗೋವಿಂದ ಕಾರಜೋಳ ತಿಳಿಸಿದರು.

ಇದನ್ನೂ ಓದಿ: ಆದಿಲ್ ಶಾಹಿ ಕಾಲದ ಕೆರೆಗಳಿಗೆ ಎಂ.ಬಿ. ಪಾಟೀಲ್ ದಂಪತಿಯಿಂದ ಗಂಗಾಪೂಜೆ, ಬಾಗೀನ ಅರ್ಪಣೆ; ಯಾಕೆ ಗೊತ್ತಾ?

ಈ ಸಭೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ಬಿಜೆಪಿ ಶಾಸಕ ಶಿವನಗೌಡ ನಾಯಕ ಮಧ್ಯೆ ವಾರಾಬಂದಿ ಪದ್ಧತಿಯಡಿ ನೀರು ಬಿಡುಗಡೆ ಕುರಿತು ಮಾತಿನ ಚಕಮಕಿಯೂ ನಡೆಯಿತು.

ಈ ಸಭೆಯಲ್ಲಿ ಮುಂಬೈ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಶಾಸಕರಾದ ವೀರಣ್ಣ ಚರಂತಿಮಠ, ಶಿವಾನಂದ ಪಾಟೀಲ, ಬಸನಗೌಡ ರಾ. ಪಾಟೀಲ ಯತ್ನಾಳ, ದೊಡ್ಡನಗೌಡ ಪಾಟೀಲ, ಡಾ. ಅಜಯಸಿಂಗ್, ಶಿವನಗೌಡ ನಾಯಕ, ನರಸಿಂಹ ನಾಯಕ, ಸೋಮನಗೌಡ ಬಿ. ಪಾಟೀಲ ಸಾಸನೂರ, ಶರಬಸಪ್ಪ ದರ್ಶನಾಪೂರ, ಬಿ. ಎಸ್. ಹೂಲಗೇರಿ, ಕೆ. ಶಿವನಗೌಡ ನಾಯಕ, ಬಸವರಾಜ ದಡೆಸೂರ, ಕಳಕಪ್ಪ ಬಂಡಿ, ಅಮರೇಗೌಡ ಬೈಯ್ಯಾಪುರ, ಡಾ. ರಾಜಾ ಅಮರೇಶ್ವರ ನಾಯಕ ಮೊದಲಾದವರು ಉಪಸ್ಥಿತರಿದ್ದರು.(ವರದಿ: ಮಹೇಶ ವಿ. ಶಟಗಾರ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ