News18 India World Cup 2019

ಗಣಿನಾಡಿನ ರೈತರಿಗೆ ಮತ್ತಷ್ಟು ಸಂಕಷ್ಟ; ಎಚ್ ಎಲ್ ಸಿ ನೀರು ಬಂದ್!

ಭತ್ತ, ಮೆಣಸಿನಕಾಯಿ ಬೆಳೆಯ ಫಸಲಿನ ನಿರೀಕ್ಷೆಯಲ್ಲಿದ್ದ ಟಿ ಬಿ ಡ್ಯಾಂ ಅಚ್ಚುಕಟ್ಟು ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ. ಈ ಅನ್ಯಾಯಕ್ಕೆ ಟಿ ಬಿ ಬೋರ್ಡ್ ನ ನಮ್ಮ ರಾಜ್ಯದ ಅಧಿಕಾರಿಗಳೇ ವಿಲನ್ ಗಳಾಗಿದ್ದಾರೆ. ಪ್ರತಿಯಾಗಿ ರೈತರು ಬೀದಿಗಿಳಿದು ಹೋರಾಟ ಶುರು ಮಾಡಿದ್ದಾರೆ.

G Hareeshkumar | news18
Updated:December 6, 2018, 8:16 PM IST
ಗಣಿನಾಡಿನ ರೈತರಿಗೆ ಮತ್ತಷ್ಟು ಸಂಕಷ್ಟ; ಎಚ್ ಎಲ್ ಸಿ ನೀರು ಬಂದ್!
ಸಾಂಧರ್ಬಿಕ ಚಿತ್ರ
G Hareeshkumar | news18
Updated: December 6, 2018, 8:16 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಡಿ.06) :  ಹೈದ್ರಾಬಾದ್ ಕರ್ನಾಟಕದ ಜೀವನಾಡಿ ತುಂಗಭದ್ರಾ ನದಿಯನ್ನು  ನಂಬಿದ್ದ ರಾಜ್ಯದ ರೈತರಿಗೆ ಮತ್ತೊಂದು ಅನ್ಯಾಯವಾಗುತ್ತಿದೆ. ಎರಡನೇ ಬೆಳೆಗೆ ಭತ್ತ ಬೆಳೆಯಬೇಡಿ ಎಂದು ಡಂಗುರ ಒಡೆಸಿದ ಟಿ ಬಿ ಬೋರ್ಡ್ ಇದೀಗ ಐಸಿಸಿ ಸಭೆಯಲ್ಲೆ ತೆಗೆದುಕೊಂಡು ನಿರ್ಣಯವನ್ನೇ ಪಾಲಿಸುತ್ತಿಲ್ಲ. ಭತ್ತ, ಮೆಣಸಿನಕಾಯಿ ಬೆಳೆಯ ಫಸಲಿನ ನಿರೀಕ್ಷೆಯಲ್ಲಿದ್ದ ಟಿ ಬಿ ಡ್ಯಾಂ ಅಚ್ಚುಕಟ್ಟು ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ. ಈ ಅನ್ಯಾಯಕ್ಕೆ ಟಿ ಬಿ ಬೋರ್ಡ್ ನ ನಮ್ಮ ರಾಜ್ಯದ ಅಧಿಕಾರಿಗಳೇ ವಿಲನ್ ಗಳಾಗಿದ್ದಾರೆ. ಪ್ರತಿಯಾಗಿ ರೈತರು ಬೀದಿಗಿಳಿದು ಹೋರಾಟ ಶುರು ಮಾಡಿದ್ದಾರೆ.

ಅದ್ಯಾಕೋ ಗಣಿನಾಡು ಬಳ್ಳಾರಿಯ ರೈತರ ಪರಿಸ್ಥಿತಿಯೇ ಸರಿಯಿಲ್ಲ. ಮೊದಲೆ ಬರಗಾಲದಿಂದ ಬಸವಳಿದ ರೈತರಿಗೆ ಜಲಾಶಯದ ನೀರು ಒಂದು ಸಮಾಧಾನ ತಂದಿತ್ತು.  ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಎಂದೇಳಿ ಎಚ್ ಎಲ್ ಸಿ ಕಾಲುವೆಗೆ ಬಿಡಬೇಕಾಗಿದ್ದ ನೀರು ಬಿಡುತ್ತಿಲ್ಲ. ಈಗಾಗಲೇ ರೈತರು ಹತ್ತಿ, ಮೆಣಸಿನಕಾಯಿ ಸೇರಿದಂತೆ ನಾನಾ ಬೆಳೆಗಳನ್ನು ಹಾಕಿದ್ದಾರೆ. ತುಂಗಭದ್ರಾ ಜಲಾಶಯದ ಎಚ್ ಎಲ್ ಸಿ ಕಾಲುವೆ ನೀರೇ ಈ ಬೆಳೆಗಳಿಗೆ ಆಸರೆ. ಡಿಸೆಂಬರ್ ಕೊನೆಯವರೆಗೆ ಹರಿಸಬೇಕಾಗಿದ್ದ ನೀರು ಬಂದ್ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ

ಇದನ್ನು ಓದಿ : ನನ್ನನ್ನು ದೂರಲಿಲ್ಲ ಎಂದರೆ ಕೆಲವರಿಗೆ ನಿದ್ದೆ ಬರಲ್ಲ; ಎಚ್​. ಡಿ ರೇವಣ್ಣ

ಬಳ್ಳಾರಿ ಜಿಲ್ಲೆಯಲ್ಲೇ ತುಂಗಭದ್ರಾ ಜಲಾಶಯ ಇದ್ದರೂ, ಬೆಳೆದ ಬೆಳೆಗೆ ಸಮರ್ಪಕವಾಗಿ ನೀರು ಸಿಗದೇ, ಕೈ ಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ತುಂಗಭದ್ರಾ ಸಲಹಾ ಸಮಿತಿ ಸಭೆಯಲ್ಲಿ ಎಚ್ಎಲ್ ಸಿ ಕಾಲುವೆಗೆ ಡಿಸೆಂಬರ್ 31 ನೇ ತಾರಿಖಿನವರೆಗೆ ನೀರು ಹರಿಸಲಾಗುತ್ತದೆ ಎಂದು ತೀರ್ಮಾನ ಮಾಡಲಾಗಿತ್ತು. ಆದರೆ, ಇಂದು ಏಕಾ-ಏಕಿ ಕಾಲುವೆಯ ನೀರು ಬಂದ್ ಮಾಡಿದ್ದಾರೆ. ಎರಡನೇ ಬೆಳೆಗೂ ಸಹ ಈ ಬಾರಿ ನೀರು ಕೊಡುತ್ತೇವೆ ಎಂದು ಬಳ್ಳಾರಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ರೈತರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದರು.

ಎರಡನೇ ಬೆಳೆಗೆ ನೀರು ಕೊಡುವುದಿರಲಿ, ಮೊದಲ ಬೆಳೆಯ ಸ್ಟ್ಯಾಂಡಿಂಗ್ ಕ್ರಾಪ್ ಇನ್ನೂ ಕೈ ಗೆ ಬಾರದೇ, ಕಾಲುವೆಗೆ ಹರಿಯುತ್ತಿದ್ದ ನೀರು ಕಟ್ ಮಾಡಿರುವುದು ರೈತರ ಸಹನೆಯ ಕಟ್ಟೆ ಒಡೆದಿದೆ. ಬೋರ್ಡ್ ನಿರ್ಣಯದಂತೆ ನಡೆದುಕೊಳ್ಳದೆ ನೀರು ನಿಲ್ಲಿಸಿದ್ದಾರೆ. ಇದರಿಂದಾಗಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದ ರೈತರು ಈಗ ಎಲ್ಲಿಗೆ ಹೋಗಬೇಕು ಎನ್ನುವುದು ರೈತರ ಪ್ರಶ್ನೆಯಾಗಿದೆ.
Loading...

ಆಂಧ್ರಪ್ರದೇಶ ಹಾಗೂ ಕರ್ನಾಟಕ ಸರ್ಕಾರ ತುಂಗಭದ್ರ ಜಲಾಶಯದ ನೀರನ್ನು ಕಾಲುವೆಗೆ ಒಟ್ಟಿಗೆ ಹರಿಸಿಕೊಂಡರೆ ಕೊನೆಭಾಗದ ರೈತರಿಗೆ ನೀರು ಸಿಗುತ್ತದೆ. ಡಿಸೆಂಬರ್ ಅಂತ್ಯದವರೆಗೆ ಹರಿಸಬೇಕಾಗಿದ್ದ ಎಚ್ ಎಲ್ ಸಿ ಕಾಲುವೆ ನೀರನ್ನು ಟಿ ಬಿ ಬೋರ್ಡ್ ಬಂದ್ ಮಾಡಿದೆ. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಗಳು ಎಲ್ಲ ಗೊತ್ತಿದ್ದು ಸುಮ್ಮನಿದ್ದಾರೆ. ನೀರು ಸಿಗದೆ ರೈತರು ಈಗಾಗೇ ಹೋರಾಟ ಮಾಡುತ್ತಿದ್ದಾರೆ. ನ್ಯಾಯವಾಗಿ ಸಿಗಬೇಕಾಗಿದ್ದ ನೀರು ಸಿಗದೆ ಅನ್ನದಾತ ತಾಳ್ಮೆ ಕಳೆದುಕೊಂಡು ಆಕ್ರೋಶ ವ್ಯಕ್ತಪಡಿಸುವ ಮುನ್ನ ಐಸಿಸಿ ಸಭೆಯಲ್ಲಿ ನಿರ್ಣಯಿಸಿದಂತೆ ನೀರು ಬಿಡಲಿ ಎಂಬುದೇ ಅನ್ನದಾತನ ಆಗ್ರಹ.

ಇದನ್ನು ಓದಿ : ಕೊನೆಗೂ ಪತ್ತೆಯಾಯ್ತು! ಹುಲಿ ಸೆರೆ ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದ ಆನೆ



 
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...