• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Koppal: ಚುನಾವಣೆಗೂ ಮುನ್ನ ಗ್ರಾಮಕ್ಕೆ ಬಂದಿದ್ದ ನೀರು ಏಕಾಏಕಿ ಬಂದ್, ಜನರ ಪರದಾಟ!

Koppal: ಚುನಾವಣೆಗೂ ಮುನ್ನ ಗ್ರಾಮಕ್ಕೆ ಬಂದಿದ್ದ ನೀರು ಏಕಾಏಕಿ ಬಂದ್, ಜನರ ಪರದಾಟ!

ಹಳ್ಳಿಗೆ ಬಾರದ ನೀರಿನ ವ್ಯವಸ್ಥೆ

ಹಳ್ಳಿಗೆ ಬಾರದ ನೀರಿನ ವ್ಯವಸ್ಥೆ

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾಟಾಚಾರಕ್ಕೆ ಗ್ರಾಮಕ್ಕೆ ನೀರು ಸರಬರಾಜು ಮಾಡಿದ್ದರು. ಆದರೆ ಈಗ ನೀರು ಗ್ರಾಮಕ್ಕೆ ಬರುತ್ತಿಲ್ಲ. ಗ್ರಾಮದಲ್ಲಿನ ಕುಡಿಯುವ ನೀರಿಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಕೊಪ್ಪಳ(ಮೇ.20): ನಮ್ಮ ಗ್ರಾಮಕ್ಕೆ ನೀರು (Water) ಕೊಡಿ ಅಲ್ಲಿಯವರೆಗೂ ನಾವು ಮತದಾನ (Vote) ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾಟಾಚಾರಕ್ಕೆ ಗ್ರಾಮಕ್ಕೆ ನೀರು ಸರಬರಾಜು ಮಾಡಿದ್ದರು. ಆದರೆ ಈಗ ನೀರು ಗ್ರಾಮಕ್ಕೆ ಬರುತ್ತಿಲ್ಲ. ಗ್ರಾಮದಲ್ಲಿನ ಕುಡಿಯುವ ನೀರಿಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.


ಹೌದು ಕೊಪ್ಪಳ ತಾಲೂಕಿನ  ಬಿಸರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಸರಳ್ಳಿ. ಬಿಕನಳ್ಳಿ. ಮೈನಳ್ಳಿ ಗ್ರಾಮಕ್ಕೆ ನದಿ ಮೂಲದಿಂದ ಕುಡಿವ ನೀರು ಒದಗಿಸಲು ಸುಮಾರು 1.50 ಕೋಟಿ ರೂಪಾಯಿ ಯೋಜನೆ ಆರಂಭವಾಗಿ ಆರು ವರ್ಷವಾಗಿದೆ. ಆದರೆ ಇಲ್ಲಿಯವರೆಗೂ ಗ್ರಾಮಗಳಿಗೆ ನೀರು ಬಂದಿಲ್ಲ. ಮೂರು ಗ್ರಾಮಗಳ ಮಧ್ಯೆ ಸರಿ ಸುಮಾರು 15 ಸಾವಿರ ಜನಸಂಖ್ಯೆ ಇದೆ. ಈ ಜನರು ನಿತ್ಯ ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ. ಒಂದು ಯೋಜನೆ ಪೂರ್ಣಗೊಳ್ಳಲು 6-7 ವರ್ಷ ನಡೆಯುತ್ತಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.


ಇದನ್ನೂ ಓದಿ:  Karnataka CM Swearing-in Ceremony Live Updates: ಇಂದಿನಿಂದ ಸಿದ್ದರಾಮಯ್ಯ, ಡಿಕೆಶಿ ರಾಜ್ಯಭಾರ - ಪ್ರಮಾಣವಚನ ಸಮಾರಂಭಕ್ಕೆ ಅಭಿಮಾನಿಗಳ ದಂಡು


ಈ ಮಧ್ಯೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಬೇಸತ್ತ ಗ್ರಾಮಸ್ಥರು ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಹಿಷ್ಕರಿಸುವ ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮನವೊಲಿಸಿ ಮತದಾನ ಮಾಡುವಂತೆ ಕೇಳಿಕೊಂಡಿದ್ದರು. ಗ್ರಾಮಸ್ಥರು ನೀರು ನೀಡಿ ಅಲ್ಲಿಯವರೆಗೂ ಮತದಾನ ಮಾಡೋದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪಂಪುಸೆಟ್ಟುಗಳಿಗೆ ನೀಡುವ ವಿದ್ಯುತ್ ಸಂಪರ್ಕ ಕಲ್ಪಿಸಿ ಗ್ರಾಮಕ್ಕೆ ನೀರು ತಂದಿದ್ದರು.


ಗ್ರಾಮೀಣ ಭಾಗದಲ್ಲಿ ಈಗ ಕೇವಲ 7 ತಾಸು ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಈ ಮಧ್ಯೆ ಹಲವಾರು ಬಾರಿ ತಾಂತ್ರಿಕ ಕಾರಣಕ್ಕಾಗಿ ಕಡಿತವಾಗುತ್ತಿದೆ. ಇದರಿಂದಾಗಿ ಬಿಸರಳ್ಳಿ ಗ್ರಾಮಕ್ಕೆ ನೀರು ಬರುತ್ತಿಲ್ಲ. ಈಗ ಚುನಾವಣೆ ಮುಗಿದಿದೆ. ನಂತರದಲ್ಲಿ ಇಲ್ಲಿಯ ಕುಡಿಯುವ ನೀರಿಗಾಗಿ ನಿರಂತರ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅದಕ್ಕಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ 26 ಲಕ್ಷ ರೂಪಾಯಿ ಜೆಸ್ಕಾಂಗೆ ಪಾವತಿಸಬೇಕಾಗಿದೆ. ಈ ಹಣ ಪಾವತಿಸದೆ ಇರುವುದರಿಂದ ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ.
ಕಾಲಕ್ಕೆ ಜೆಸ್ಕಾಂಗೆ ಹಣ ಪಾವತಿಸದೆ ಇರುವುದರಿಂದ ಬಿಸರಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಚುನಾವಣೆಯ ಮುನ್ನ ಕಣ್ಣೊರೆಸುವ ತಂತ್ರ ಮಾಡಿದ ಅಧಿಕಾರಿಗಳು ನಂತರ ಇತ್ತ ನೋಡಿಲ್ಲ. ಇದೇ ಧೋರಣೆ ಮುಂದುವರಿದರೆ ಮತ್ತೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

top videos


  ಶರಣಪ್ಪ ಬಾಚಲಾಪುರನ್ಯೂಸ್ 18 ಕೊಪ್ಪಳ

  First published: