• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಒಂದೇ ಸಭೆ - ಒಂದೇ ಕೋರ್ಟ್ ಕಲಾಪ, ಬಿಲ್​ ಮಾತ್ರ 39 ಲಕ್ಷ: ನಿವೃತ್ತ ಐಎಎಸ್​ ಅಧಿಕಾರಿ ನಡೆಗೆ ಸರ್ಕಾರ ಸಂಶಯ

ಒಂದೇ ಸಭೆ - ಒಂದೇ ಕೋರ್ಟ್ ಕಲಾಪ, ಬಿಲ್​ ಮಾತ್ರ 39 ಲಕ್ಷ: ನಿವೃತ್ತ ಐಎಎಸ್​ ಅಧಿಕಾರಿ ನಡೆಗೆ ಸರ್ಕಾರ ಸಂಶಯ

ಪಿಬಿ ರಾಮಮೂರ್ತಿ ಮತ್ತು ಜಲ ಸಂಪನ್ಮೂಲ ಇಲಾಖೆಯ ಆದೇಶ ಪ್ರತಿ

ಪಿಬಿ ರಾಮಮೂರ್ತಿ ಮತ್ತು ಜಲ ಸಂಪನ್ಮೂಲ ಇಲಾಖೆಯ ಆದೇಶ ಪ್ರತಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ಐಎಎಸ್​ ಅಧಿಕಾರಿ ರಾಮಮೂರ್ತಿ, "ನನ್ನ ಸೇವಾವಧಿಯಲ್ಲಿ ಹೆಸರಿಗೆ ಕಳಂಕ ತಂದುಕೊಂಡವನಲ್ಲ," ಎನ್ನುವ ಮೂಲಕ ತಮ್ಮ ವಿರುದ್ದ ಕೇಳಿಬಂದಿರುವ  ಕರ್ತವ್ಯಲೋಪದ ಆರೋಪ ತಳ್ಳಿ ಹಾಕಿದ್ದಾರೆ.

 • Share this:

ಬೆಂಗಳೂರು: ಐಎಎಸ್​ ಅಧಿಕಾರಿಗಳು, ಐಪಿಎಸ್​ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು - ನ್ಯಾಯಮೂರ್ತಿಗಳು ಸೇರಿದಂತೆ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತಿ ಪಡೆದವರು, ನಂತರ ಹಲವಾರು ಆಯೋಗಗಳಲ್ಲಿ ಮತ್ತಿತರ ಹುದ್ದೆಗಳಲ್ಲಿ ಸ್ಥಾನ ಪಡೆಯುತ್ತಾರೆ. ಇದು ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆಯೂ ಕಂಡುಬರುವ ಸಾಮಾನ್ಯ ಸಂಗತಿ. ಜನಸಾಮಾನ್ಯರ ಉನ್ನತಿಗೆ ಶ್ರಮಿಸಿದ ಎಷ್ಟೋ ಗಣ್ಯ ಅಧಿಕಾರಿಗಳು ಈ ಹಿಂದೆ ನಿವೃತ್ತಿಯಾದ ನಂತರ ಇಂತಾ ಹುದ್ದೆ ಅಲಂಕರಿಸಿ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ ನಿದರ್ಶನಗಳಿವೆ. 


ಆದರೆ ಇತ್ತೀಚಿನ ಒಂದು ಘಟನೆ ಸರ್ಕಾರಕ್ಕೂ ಸಂಶಯ ಮೂಡಿಸಿದೆ. ನಿವೃತ್ತ ಐಎಎಸ್​ ಅಧಿಕಾರಿ ಪಿ.ಬಿ. ರಾಮಮೂರ್ತಿ ಅಂತರ್​ ರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ಸಲಹೆಗಾರರು ಮತ್ತು ಸಮನ್ವಯಕಾರರಾಗಿ ಆಯ್ಕೆಯಾಗಿದ್ದರು. ಸರ್ಕಾರ ಆದೇಶದ ಅನ್ವಯ ಕಾರ್ಯ ನಿಮಿತ್ತ ದಿನವೊಂದಕ್ಕೆ ಅವರಿಗೆ ರೂ. 8,000 ಮತ್ತು ಹೊರ ರಾಜ್ಯಗಳಿಗೆ ಭೇಟಿ ನೀಡುವುದಾದರೆ ದಿನವೊಂದಕ್ಕೆ ರೂ. 9,000 ನಿಗದಿ ಮಾಡಲಾಗಿತ್ತು. ಇತ್ತೀಚೆಗೆ ರಾಮಮೂರ್ತಿಯವರು ಒಟ್ಟೂ 199 ದಿನಗಳ ಕಾಲ ಅಂತರ್​ ರಾಜ್ಯ ಜಲ ವಿವಾದ ಸಂಬಂಧ ಕಾರ್ಯ ನಿರ್ವಹಿಸಿರುವುದಾಗಿ ಸರ್ಕಾರಕ್ಕೆ ಬಿಲ್​ ನೀಡಿದ್ದರು.


199 ದಿನಗಳ ಕಾಲಕ್ಕೆ ಅವರು ರೂ. 15,92,000 ಸರ್ಕಾರದಿಂದ ಪಾವತಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಈ ಅಂಕಿಅಂಶಗಳ ಬಗ್ಗೆ ಸರ್ಕಾರ ಸಂಶಯ ವ್ಯಕ್ತಪಡಿಸಿದೆ. ಅದರ ಜತೆಗೆ ಅವರ ಬಿಲ್​ ಅನ್ನು ಕಾಯ್ದಿರಿಸಿ, ಜಲವಿವಾದಗಳಿಗೆ ಸಲಹೆಗಾರರಾಗಿ ಮುಂದುವರೆಯುವ ಅವಶ್ಯಕತೆಯಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದೆ.


ದಿನಾಂಕ ಸೆಪ್ಟೆಂಬರ್​ 30, 2019ರಲ್ಲಿ ಜಲ ಸಂಪನ್ಮೂಲ ಇಲಾಖೆ ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿದ್ದು, ಮಹದಾಯಿ, ಕಾವೇರಿ ಸೇರಿದಂತೆ ಯಾವುದೇ ಜಲವಿವಾದದ ಸಂಬಂಧವಾಗಿಯೂ ರಾಮಮೂರ್ತಿ ಸಲಹೆ ನೀಡಿಲ್ಲ. ಕೇವಲ ಒಂದು ಬಾರಿ ಮಾತ್ರ ಸರ್ವೋಚ್ಛ ನ್ಯಾಯಾಲಯಕ್ಕೆ ರಾಮಮೂರ್ತಿ ಕಾನೂನು ತಜ್ಞರ ತಂಡದೊಂದಿಗೆ ಭೇಟಿ ನೀಡಿದ್ದಾರೆ. ಮತ್ತು 2017ರಿಂದ ಇದುವರೆಗಿನ ದಿನಚರಿಯನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಲಹೆಯಾಗಲಿ, ಸಮನ್ವಯವಾಗಲಿ ಅವಶ್ಯವಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ಆದೇಶ ಪತ್ರದಲ್ಲಿ ತಿಳಿಸಿದೆ.


ಸಲಹೆಗಾರರ ಜವಾಬ್ದಾರಿ ಏನು?:


 • ರಾಜ್ಯದ ಹಲವು  ಜಲವಿವಾದದ ಬಗ್ಗೆ ಸಲಹೆ ನೀಡಬೇಕು .

 • ಕಾವೇರಿ  ಸೇರಿದಂತೆ ಜಲವಿವಾದದ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು *

 • ಸರ್ವೋಚ್ಛ ನ್ಯಾಯಾಲಯದಲ್ಲಿನ ವಾದ-ಪ್ರತಿವಾದದದಲ್ಲಿ ಭಾಗಿಯಾಗಬೇಕು

 • ಜಲವಿವಾದದ ನ್ಯಾಯಮಂಡಳಿಯಲ್ಲಿ ಪಾಲ್ಗೊಂಡು ಸಲಹೆ ನೀಡಬೇಕು.

 • ರಾಜ್ಯವನ್ನು ಜಲವಿವಾದಗಳಲ್ಲಿ ಪ್ತತಿನಿಧಿಸುವ ವಕೀಲರಿಗೆ ಸಹಕಾರ ನೀಡಬೇಕು.

 • ಅಗತ್ಯಬಿದ್ದರೆ ದೆಹಲಿಯಲ್ಲೇ ಬೀಡುಬಿಟ್ಟು ಸಲಹೆ ನೀಡಬೇಕು.

 • ನ್ಯಾಯ ಮಂಡಳಿಯಲ್ಲಿ ವಿವಾದ ನಡೆದಾಗಲೆಲ್ಲಾ ಕಡ್ಡಾಯವಾಗಿ ಪಾಲ್ಗೊಳ್ಳಬೇಕು

 • ವಾದ-ಪ್ರತಿವಾದ ನಡೆಯುವಾಗ ಹಾಜರಿದ್ದು ಮಾಹಿತಿ ಕೊಡಬೇಕು.

 • ವಕೀಲರಿಗೆ ಪೂರಕವಾದ ದಾಖಲೆ ಒದಗಿಸಿ ವಾದ ಮಂಡನೆಗೆ ಸಹಕರಿಸಬೇಕು.

 • ಉತ್ತರ-ಪ್ರತ್ಯುತ್ತರ ತಯಾರಿಸುವ ವೇಳೆ ಖುದ್ದು ಹಾಜರಿರಬೇಕು.


ಆದರೆ ಈವರೆಗೆ, ಅಂದರೆ ಅಧಿಕಾರ ವಹಿಸಿಕೊಂಡ 19-06-2017 ರಿಂದ ಹಿಡಿದು ಅವರನ್ನು ಹುದ್ದೆಯಿಂದ ಕೆಳಗಿಳಿಸಿದ 30-09-2019ರ ವರೆಗೂ ಮೇಲ್ಕಂಡ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ಹೇಳಿದೆ. ವಾದ-ಪ್ರತಿವಾದದ ವೇಳೆ ಗೈರಾಗಿದ್ದೇ ಹೆಚ್ಚು ಎಂದು ಇಲಾಖೆ ಅಭಿಪ್ರಾಯ ಪಟ್ಟಿದೆ.


ನಿವೃತ್ತಿ ಅಧಿಕಾರಿ ಬಿಲ್​ನಲ್ಲಿ ಏನಿದೆ?:


2017 ರಲ್ಲಿ 125 ದಿನಗಳಷ್ಟು ಕಾರ್ಯ ನಿರ್ವಹಿಸಿರುವುದಾಗಿ ತಿಳಿಸಿರುವ ರಾಮಮೂರ್ತಿ ಅವರು, ಅದಕ್ಕೆ  10.08 ಲಕ್ಷ ಭತ್ಯೆ ನೀಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇನ್ನು 2018 ರಲ್ಲಿ 11 ತಿಂಗಳ ಅವಧಿಯಲ್ಲಿ 171 ದಿನ ಕೆಲಸ ಮಾಡಿದ್ದೇನೆ ಇದಕ್ಕೆ 13.68 ಲಕ್ಷ ಭತ್ಯೆ ಕೊಡಿ ಎಂದು ಮನವಿ ಮಾಡಿದ್ದಾರೆ. 2019ರ 11 ತಿಂಗಳಲ್ಲಿ 199 ದಿನ ಕೆಲಸ ಮಾಡಿದ್ದೇನೆ. ಇದಕ್ಕಾಗಿ 15.92 ಲಕ್ಷ ಹಣ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.


ಆದರೆ ಇದೆಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿದ ಸರ್ಕಾರಕ್ಕೆ ರಾಮಮೂರ್ತಿ ಹೇಳುತ್ತಿರುವುದನ್ನು ಸಂಶಯಿಸಿದೆ. ಅದಕ್ಕಾಗಿಯೇ ಭತ್ಯೆ ಕಾಯ್ದಿರಿಸಿ ಸೂಕ್ತ ವಿವರಣೆ ನೀಡುವವರೆಗೂ ಮಂಜೂರಾತಿ ನೀಡದಂತೆ ಆದೇಶಿಸಲಾಗಿದೆ.


ಇದನ್ನೂ ಓದಿ: ತಂದೆಗೆ ಮದ್ಯಕುಡಿಸಿ, ಮಗಳ ಮೇಲೆ ಅತ್ಯಾಚಾರ ಎಸಗಿದ ಕಿರಾತಕರು


ರಾಮಮೂರ್ತಿ ಸ್ಪಷ್ಟನೆ ಏನು?:


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ಐಎಎಸ್​ ಅಧಿಕಾರಿ ರಾಮಮೂರ್ತಿ, "ನನ್ನ ಸೇವಾವಧಿಯಲ್ಲಿ ಹೆಸರಿಗೆ ಕಳಂಕ ತಂದುಕೊಂಡವನಲ್ಲ," ಎನ್ನುವ ಮೂಲಕ ತಮ್ಮ ವಿರುದ್ದ ಕೇಳಿಬಂದಿರುವ  ಕರ್ತವ್ಯಲೋಪದ ಆರೋಪ ತಳ್ಳಿ ಹಾಕಿದ್ದಾರೆ.


ಇದನ್ನೂ ಓದಿ: ಜ. 29ಕ್ಕೆ ಸಂಪುಟ ವಿಸ್ತರಣೆ ಬಹುತೇಕ ಖಚಿತ; ಹೈಕಮಾಂಡ್​ನಿಂದಲೂ ಗ್ರೀನ್ ಸಿಗ್ನಲ್


ನ್ಯೂಸ್​18 ಅವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿತಾದರೂ ಅವರು ಲಭ್ಯರಾಗದ ಕಾರಣ ವಾಟ್ಸ್​ಆ್ಯಪ್​ ಮೂಲಕ ಅವರ ಮೊಬೈಲ್​ ಸಂಖ್ಯೆಗೆ ಸಂದೇಶ ರವಾನಿಸಿತು. ಸಂದೇಶದಲ್ಲೇ ಪ್ರತಿಕ್ರಿಯೆ ನೀಡಿದ ಅವರು, "ನನ್ನಿಂದ ಯಾವುದೇ ಲೋಪ ಆಗಿಲ್ಲ. ಸರ್ಕಾರದ ನಂಬಿಕೆಗೆ ದ್ರೋಹ ಎಸಗಿಲ್ಲ. ಎರಡೂವರೆ ವರ್ಷದಲ್ಲಿ ನಯಾಪೈಸೆ ಗೌರವಧನ ಪಡೆದಿಲ್ಲ. ಈ ಅವಧಿಯಲ್ಲಿ ನನ್ನ ಖಾಸಗಿ ವಾಹನದಲ್ಲೇ ತಿರುಗಿ ಕೆಲಸ ಮಾಡಿದ್ದೇನೆ. ನಿಯಾಮವಳಿ ಪ್ರಕಾರವೇ ಕಚೇರಿಯಿಂದ ಬಿಲ್ ಸಿದ್ಧವಾಗಿದೆ. ಇದನ್ನು ಸಿದ್ಧಮಾಡಿದವನು ನಾನಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಬಿಲ್ ಕ್ಲಿಯರ್ ಆಗಿಲ್ಲ. ನನ್ನ ಅಧಿಕಾರಾವಧಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಸುಪ್ರಿಂಕೋರ್ಟ್​ನ ಹಿಯರಿಂಗ್​, ನ್ಯಾಯಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದೇನೆ," ಎಂದು ಉತ್ತರಿಸಿದ್ದಾರೆ.

top videos
  First published: