ಹಿಡಕಲ್ ಡ್ಯಾಂ ಶೇ.95 ರಷ್ಟು ಭರ್ತಿ; ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುಗಡೆ

ಇಂದು ಬೆಳಿಗ್ಗೆಯೆ ಅಧಿಕಾರಿಗಳು ಜಲಾಶಯಕ್ಕೆ ಪೂಜೆ ಸಲ್ಲಿಸಿ 10 ಕ್ರಸ್ಟ್‌ ಗೇಟ್ ಗಳ ಮೂಲಕ ಒಟ್ಟು 5 ಸಾವಿರ ಕ್ಯೂಸೆಕ್ ನೀರನ್ನ ಘಟಪ್ರಭಾ ನದಿಗೆ ಬಿಟ್ಟಿದ್ದಾರೆ. ಘಟಪ್ರಭಾ ಎಡದಂಡೆ ಕಾಲುವೆ ಮೂಲಕ 2 ಸಾವಿರ ಹಾಗೂ  ಪವರ್ ಹೌಸ್  ಮೂಲಕ 2 ಸಾವಿರ ಒಟ್ಟು 9 ಸಾವಿರ ಕ್ಯೂಸೆಕ್ ನೀರನ್ನ ಘಟಪ್ರಭಾ ನದಿಗೆ ಬಿಡಲಾಗುತ್ತಿದೆ.

ಹಿಡಕಲ್ ಜಲಾಶಯ

ಹಿಡಕಲ್ ಜಲಾಶಯ

  • Share this:
ಹುಕ್ಕೇರಿ(ಆ.10): ಮಹಾರಾಷ್ಟ್ರ ಹಾಗೂ ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಶುರುವಾಗಿದ್ದು, ರಾಜ್ಯಕ್ಕೆ ಹರಿದು ಬರುವ ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳ ಒಳ ಹರಿವಿನ ಪ್ರಮಾಣದಲ್ಲಿ ಮತ್ತೆ ಹೆಚ್ಚಳವಾಗಿದೆ.

ಅಲ್ಲದೆ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಡಕಲ್ ನ ರಾಜಾ ಲಕಮಗೌಡ ಜಲಾಶಯ ಭರ್ತಿಯಾಗಿದ್ದು ಇಂದು 10 ಕ್ರಸ್ಟ್‌ ಗೇಟ್ ಗಳ ಮೂಲಕ ನೀರು ಹೊರ ಬಿಡಲಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ಹುಕ್ಕೇರಿ ಹಾಗೂ ಬಾಗಲಕೋಟೆಯ ಜೀವನಾಡಿ ಈ ಹಿಡಕಲ್ ಜಲಾಶಯ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಜಲಾಶಯ 51 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವನ್ನ ಹೊಂದಿದೆ. ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಬಂದಿದ್ದರಿಂದ ಶೇ 95ರಷ್ಟು ಜಲಾಶಯ ಭರ್ತಿಯಾಗಿ, ಇಂದು ಹಿಡಕಲ್ ಜಲಾನಯನ ಪ್ರದೇಶದ ಅಧಿಕಾರಿಗಳ ಸಭೆ ನಡೆಸಿ ಬಳಿಕ ಇಂದಿನಿಂದಲೆ ನೀರು ಬಿಡುಗಡೆ ಮಾಡುವ ನಿರ್ಧಾರ ಮಾಡಲಾಯಿತು.

ಇಳಿ ವಯಸ್ಸಿನಲ್ಲಿ ಪ್ರಾಣದ ಹಂಗು ತೊರೆದು ಸೋಂಕಿತ ವ್ಯಕ್ತಿಗಳ ನೆರವಿಗೆ ನಿಂತ ವೃದ್ಧ

ಇಂದು ಬೆಳಿಗ್ಗೆಯೆ ಅಧಿಕಾರಿಗಳು ಜಲಾಶಯಕ್ಕೆ ಪೂಜೆ ಸಲ್ಲಿಸಿ 10 ಕ್ರಸ್ಟ್‌ ಗೇಟ್ ಗಳ ಮೂಲಕ ಒಟ್ಟು 5 ಸಾವಿರ ಕ್ಯೂಸೆಕ್ ನೀರನ್ನ ಘಟಪ್ರಭಾ ನದಿಗೆ ಬಿಟ್ಟಿದ್ದಾರೆ. ಘಟಪ್ರಭಾ ಎಡದಂಡೆ ಕಾಲುವೆ ಮೂಲಕ 2 ಸಾವಿರ ಹಾಗೂ  ಪವರ್ ಹೌಸ್  ಮೂಲಕ 2 ಸಾವಿರ ಒಟ್ಟು 9 ಸಾವಿರ ಕ್ಯೂಸೆಕ್ ನೀರನ್ನ ಘಟಪ್ರಭಾ ನದಿಗೆ ಬಿಡಲಾಗುತ್ತಿದೆ. ಸದ್ಯ ಘಟಪ್ರಭಾ ನದಿಗೆ 19 ಸಾವಿರ ಕ್ಯೂಸೆಕ್ ನ ನೀರಿನ ಒಳ ಹರಿವಿದೆ. ಅದರಲ್ಲಿ 9 ಸಾವಿರ ಕ್ಯೂಸೆಕ್ ನೀರನ್ನ ಬಿಡಲಾಗುತ್ತಿದೆ. ಬರುವ ಒಂದು ವಾರದ ವರೆಗೂ ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸುರಿಯುವ ಸಂಭವಿದ್ದು ಇನ್ನು ಹೆಚ್ಚಿನ ನೀರು ಬಂದರೆ ಸಮಸ್ಯೆಯಾಗುತ್ತಿದೆ ಹಾಗಾಗಿ ಈಗಿನಿಂದಲೆ ಕ್ರಮೇಣ ನೀರು ಬಿಡಲು ನಿರ್ಧರಿಸಲಾಗಿದೆ ಎಂದು ಪ್ರಭಾರ ಮುಖ್ಯ ಇಂಜಿನಿಯ ಸಿ.ಡಿ.ಪಾಟೀಲ ಮಾಹಿತಿ ನೀಡಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ನೀರು ಕಮ್ಮಿ

ಇನ್ನು ಕಳೆದ ವರ್ಷ ಅಗಸ್ಟ ಮೊದಲ ವಾರದಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯೊಂದಾಗಿಗೆ ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿ ಹರಿದಿದ್ದವು. ಅಂದು  90 ಸಾವಿರ ಕ್ಯೂಸೆಕ್ ನಷ್ಟು ನೀರನ್ನ ಜಲಾಶಯದಿಂದ ಬಿಡಲಾಗಿತ್ತು ಪರಿಣಾಮ ಗೋಕಾಕ ನಗರ ಸೇರಿದಂತೆ ತಾಲೂಕಿನ ಹಲವು ಹಳ್ಳಿಗಳಿಗೆ ನೀರು ನುಗ್ಗಿ ಪ್ರವಾಹ ಉಂಟಾಗಿತ್ತು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅಂತಹ ಯಾವುದೆ ಪರಿಸ್ಥಿತಿ ಬರಲ್ಲ. ಈಗಿನಿಂದಲೇ ನೀರು ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲದೆ ಘಟಪ್ರಭಾ ನದಿಯ ಪಾತ್ರದಲ್ಲಿ ಬರುವ ಜನರಿಗೆ ನೋಟೀಸ್ ಮೂಲಕ ಮುನ್ನೆಚ್ಚರಿಕಾ ಎಚ್ಚರಿಕೆಯನ್ನು ಸಹ ನೀಡಲಾಗಿದೆ ಎಂದು ಇಲ್ಲಿನ ಸಹಾಯಕ ಇಂಜಿನಿಯರ್ ಮಡಿವಾಲೆ ಮಾಹಿತಿ ನೀಡಿದ್ದಾರೆ.
Published by:Latha CG
First published: