Jaggesh Tweet: ನಟ ಜಗ್ಗೇಶ್ ಮನೆ ಜಲಾವೃತ; ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ ರಾಜ್ಯಸಭಾ ಸದಸ್ಯ

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತಗೊಂಡಿದೆ. ಸ್ವಲ್ಪ ಗಮನಹರಿಸಿ ಎಂದು ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಜಗ್ಗೇಶ್​ ಮನೆ ಜಲಾವೃತ

ಜಗ್ಗೇಶ್​ ಮನೆ ಜಲಾವೃತ

  • Share this:
ರಾಜ್ಯಾದ್ಯಂತ (Karnataka)  ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಎರಡು-ಮೂರು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ (Heay Rain). ಇದ್ರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ನೂರಾರು ರೈತರ ಬೆಳೆ ಹಾನಿಯಾಗಿದೆ. ಹಾಗೇ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ (Rajya Sabha Member Jaggesh) ಅವರ ಮಾಯಸಂದ್ರ ಮನೆ ಜಲಾವೃತಗೊಂಡಿದೆ. ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ನೀರು (Water) ತುಂಬಿಕೊಂಡಿರೋ ಫೋಟೋ ಅಪ್ಲೋಡ್​ ಮಾಡಿರೋ ನಟ ಜಗದೀಶ್​, ಸಮಸ್ಯೆಯ (Problem) ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ.  ನನ್ನ ಮನೆ ಸಂಪೂರ್ಣ ಜಲಾವೃತ

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತಗೊಂಡಿದೆ. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ. ಮಾಯಸಂದ್ರ ತಳದಲ್ಲಿ ಇರುವ ಸುಮಾರು 20 ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿ ನಿಗಮ ಗಮನ ಹರಿಸಿ ಎಂದು ನಟ ಜಗ್ಗೇಶ್ ವಿನಂತಿಸಿಕೊಂಡಿದ್ದಾರೆ.  ಟ್ವೀಟ್​ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಅವರಿಗೂ ಜಗ್ಗೇಶ್ ಮನವಿ ಮಾಡಿದ್ದಾರೆರಾಜ್ಯಸಭಾ ಸದಸ್ಯ  ಜಗ್ಗೇಶ್​

ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಚಿತ್ರ ನಟಜಗ್ಗೇಶ್ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಲೆಹರ್ ಸಿಂಗ್ (ಮೂವರೂ ಬಿಜೆಪಿ) ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ (ಕಾಂಗ್ರೆಸ್) ಜುಲೈ 8ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದರು. ಜಗ್ಗೇಶ್ ಕನ್ನಡದಲ್ಲಿ, ತಮ್ಮ ಆರಾದ್ಯ ದೈವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

ಜಗ್ಗೇಶ್ ಸಿನಿ ಜರ್ನಿ

ಸ್ಯಾಂಡಲ್‌ವುಡ್‌ನಲ್ಲಿ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಜಗ್ಗೇಶ್ 1982 ರಲ್ಲಿ ನಿರ್ದೇಶಕ ಕೆ.ವಿ ರಾಜು ಮತ್ತು ರಾಜಕಿಶೋರ್ ಅವರ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು. ನಂತರ ಕೆಲ ಚಿತ್ರಗಳಲ್ಲಿ ಖಳನಾಯಕ ಮತ್ತು ಪೋಷಕ ನಟನಾಗಿ ನಟಿಸಿದರು. ಇವುಗಳಲ್ಲಿ ರಣಧೀರ, ಸಾಂಗ್ಲಿಯಾನ, ರಣರಂಗ, ಯುದ್ಧಕಾಂಡ, ಪರಶುರಾಮ್, ರಾಣಿ ಮಹಾರಾಣಿ ,ಸೋಲಿಲ್ಲದ ಸರದಾರ ಚಿತ್ರಗಳು ಪ್ರಮುಖವಾದವು.

1992 ಭಂಡ ನನ್ನ ಗಂಡ ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಅದೇ ವರ್ಷದಲ್ಲಿ ತೆರೆಕಂಡ ತರ್ಲೆ ನನ್ಮಗ ಚಿತ್ರ ಇವರಿಗೆ ನಾಯಕನಾಗಿ ಬಿಗ್‌ ಬ್ರೇಕ್ ನೀಡಿತು. ನಂತರ ಸರ್ವರ್ ಸೋಮಣ್ಣ , ರೂಪಾಯಿ ರಾಜ ,ಇಂದ್ರನ ಗೆದ್ದ ನರೇಂದ್ರ, ಪಟೇಲ, ಕುಬೇರ ಮುಂತಾದಲವು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯದ ಛಾಪು ಮೂಡಿಸಿದರು.

ಇದನ್ನೂ ಓದಿ: Samanth: ಜ್ಯೂ. NTR ಚಿತ್ರದ ಆಫರ್ ರಿಜೆಕ್ಟ್ ಮಾಡಿದ ಸಮಂತಾ, ಸಂಭಾವನೆ ಕೇಳಿ ಶಾಕ್ ಆದ ಡೈರೆಕ್ಟರ್!

2006 ರಲ್ಲಿ ಇವರ ನೂರನೇ ಚಿತ್ರ ಮಠ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರ ಮನುಷ್ಯನಲ್ಲಿರುವ ಅವಗುಣಗಳ ಅನಾವರಣಗೊಳಿಸಿ ಅವುಗಳ ತ್ಯಾಗದಿಂದ ಹೇಗೆ ನೆಮ್ಮದಿ ಬದುಕು ಬಾಳಬಹುದು ಎಂದು ಬಿಂಬಿಸಿತು. 2012 ರಲ್ಲಿ ತಮ್ಮ ಪುತ್ರ ಗುರುರಾಜ್‌ರ ಗುರು ,2017 ರಲ್ಲಿ ತೆರೆಕಂಡ ಮೇಲುಕೋಟೆ ಮಂಜ ಚಿತ್ರಗಳನ್ನು ನಿರ್ದೇಶನ ಮಾಡಿ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದರು. ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳ ತೀರ್ಪುಗಾರರಾಗಿದ್ದರು.
Published by:Pavana HS
First published: