ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ...

2 ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಪ್ರವಾಹವೂ ಇಳಿಮುಖವಾಗಿದೆ. ಜನರು ಪರಿಹಾರ ಕೇಂದ್ರಗಳಿಂದ ತಮ್ಮೂರಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಕೊಚ್ಚಿಹೋದ ಮನೆಗಳು, ಜಮೀನುಗಳಿಂದ ಬದುಕು ಕಟ್ಟಿಕೊಳ್ಳುವುದು ಹೇಗೆಂಬ ಚಿಂತೆಯಲ್ಲಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.

Sushma Chakre | news18
Updated:August 16, 2019, 1:21 PM IST
ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ...
ಫೈಲ್​ ಫೋಟೊ: ಕೆಆರ್​ಎಸ್​ ಡ್ಯಾಮ್​
  • News18
  • Last Updated: August 16, 2019, 1:21 PM IST
  • Share this:
2 ವಾರಗಳಿಂದ ರಾಜ್ಯದ ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು, ಕೊಡಗಿನಲ್ಲಿ ಸುರಿದ ಮಳೆಯಿಂದ ಪ್ರವಾಹ ಉಂಟಾಗಿತ್ತು. ನದಿಗಳು ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಸಾವಿರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದವು. 64 ಮಂದಿ ಪ್ರಾಣ ಕಳೆದುಕೊಂಡಿದ್ದರು. ಉಗ್ರರೂಪ ತಾಳಿರುವ ಜೀವನದಿಗಳಿಂದ ರಾಜ್ಯದ ಬಹುಪಾಲು ಭಾಗ ಮುಳುಗಡೆಯಾಗಿತ್ತು. 2 ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಪ್ರವಾಹವೂ ಇಳಿಮುಖವಾಗಿದೆ. ಜನರು ಪರಿಹಾರ ಕೇಂದ್ರಗಳಿಂದ ತಮ್ಮೂರಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಕೊಚ್ಚಿಹೋದ ಮನೆಗಳು, ಜಮೀನುಗಳಿಂದ ಬದುಕು ಕಟ್ಟಿಕೊಳ್ಳುವುದು ಹೇಗೆಂಬ ಚಿಂತೆಯಲ್ಲಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಏರಿಕೆಯಾಗಿದ್ದ ಜಲಾಶಯಗಳ ನೀರಿನ ಮಟ್ಟ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು, ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಕೆ.ಆರ್.ಎಸ್​ ಜಲಾಶಯ
ಗರಿಷ್ಟ ಮಟ್ಟ-124.80

ಪ್ರಸ್ತುತ ಮಟ್ಟ-124.80
ಒಳಹರಿವು-18500
ಹೊರಹರಿವು-21746
ಪ್ರಸ್ತುತ ಸಂಗ್ರಹ-49.452 ಟಿಎಂಸಿ
Loading...

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ- 2,859 ಅಡಿ
ಇಂದಿನ ನೀರಿನ ಮಟ್ಟ- 2857.73 ಅಡಿ
ನೀರಿನ ಒಳಹರಿವು- 7022 ಕ್ಯೂಸೆಕ್​
ಹೊರ ಹರಿವು ನದಿಗೆ 4722 ಕ್ಯೂಸೆಕ್​
ಪ್ರಸ್ತುತ ಸಂಗ್ರಹ- 8.07022 ಟಿಎಂಸಿ

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 519.60 ಮೀ.
ಇಂದಿನ ಮಟ್ಟ- 518.27 ಮೀ
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 101.667 ಟಿಎಂಸಿ
ಒಳಹರಿವು- 489730 ಕ್ಯೂಸೆಕ್
ಹೊರ ಹರಿವು- 520991 ಕ್ಯೂಸೆಕ್​

ಕಬಿನಿ ಜಲಾಶಯ
ಒಳಹರಿವು 12,378 ಕ್ಯೂಸೆಕ್
ಹೊರಹರಿವು 6,292 ಕ್ಯೂಸೆಕ್
ಇಂದಿನ ನೀರಿನ ಮಟ್ಟ 2283.61 ಅಡಿ
ಗರಿಷ್ಠ ನೀರಿನ ಮಟ್ಟ 2284 ಅಡಿ.
ಒಟ್ಟು ನೀರಿನ ಸಂಗ್ರಹ ಸಾರ್ಮಥ್ಯ 19.52  ಟಿಎಂಸಿ
ಇಂದಿನ ನೀರಿನ ಸಂಗ್ರಹ 19.26 ಟಿಎಂಸಿ

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ 2079. 50 ಅಡಿ.
ಇಂದಿನ ನೀರಿನ‌ ಮಟ್ಟ 2078.50 ಅಡಿ.
ಒಳ ಹರಿವು 7869 ಕ್ಯೂಸೆಕ್
ಹೊರ ಹರಿವು 1514 ಕ್ಯೂಸೆಕ್
ಸಂಗ್ರಹ ಸಾಮರ್ಥ್ಯ 37.35 ಟಿಎಂಸಿ

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ 2175 ಅಡಿ
ಇಂದಿನ ಮಟ್ಟ 2174.30 ಅಡಿ
ಒಳ ಹರಿವು  5593 ಕ್ಯೂಸೆಕ್​
ಹೊರ ಹರಿವು 21632 ಕ್ಯೂಸೆಕ್​

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ಮಾಡಲು ಇಲ್ಲಿ ಕ್ಲಿಕ್ಮಾಡಿ
First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...