HOME » NEWS » State » WATER EXPORT DEVARAJA REDDY IS MAKING RAIN WATER HARVEST WORK IN CHITRADURGA DISTRICT TO SAVE WATER HG

ಕೋಟೆನಾಡಲ್ಲಿ ಆಧುನಿಕ ಭಗೀರಥ; ಮಳೆ ನೀರು ಇಂಗಿಸುವ ಕೆಲಸ ಮಾಡುತ್ತಿದ್ದಾರೆ ಜಲತಜ್ಞ ದೇವರಾಜ್​​​​​ ರೆಡ್ಡಿ

ಕೋಟೆನಾಡು ಚಿತ್ರದುರ್ಗ ಜಿಲ್ಲೆ  ಅಂದರೆ ಬರ, ಹನಿ ನೀರಿಗೂ ತತ್ವಾರ. ಮಳೆಯಿಲ್ಲದೆ ಕೃಷಿ ಜೀವನಕ್ಕೆ ಕಷ್ಟವಾಗಿರುವ ಚಿತ್ರದುರ್ಗ ಜಿಲ್ಲೆಯ ರೈತರ ಪಾಡು ಆ ದೇವರಿಗೇ ಪ್ರೀತಿ. ಜಿಲ್ಲೆಯ ಬಹುತೇಕ ಜನರು ಮಳೆಯಾಶ್ರಿತ ಬೆಳೆಗಳನ್ನೇ ಬೆಳೆಯೋದು ಹೆಚ್ಚು. ಆದರೆ ಕಳೆದ ಎಂಟತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯೇ ಆಗುತ್ತಿಲ್ಲ. ಇಂತಹ ಕಷ್ಟದ ಸಂದರ್ಭದಲ್ಲಿ ಬೋರ್​ವೆಲ್​​ ತೆಗೆದರು ನೀರು ಬರೋದು ಅಷ್ಟಕ್ಕಷ್ಟೆ. ಆದ್ದರಿಂದ ದೇವರಾಜ್ ರೆಡ್ಡಿಯವರು ಅನಗತ್ಯ ಹರಿದು ಹೋಗುವ ನೀರನ್ನು ಭೂಮಿಗೆ ಇಂಗಿಸಲು ಅನೇಕ ಕಾರ್ಯಗಳನ್ನ ಮಾಡಿದ್ದಾರೆ.

news18-kannada
Updated:May 27, 2020, 8:08 PM IST
ಕೋಟೆನಾಡಲ್ಲಿ ಆಧುನಿಕ ಭಗೀರಥ; ಮಳೆ ನೀರು ಇಂಗಿಸುವ ಕೆಲಸ ಮಾಡುತ್ತಿದ್ದಾರೆ ಜಲತಜ್ಞ ದೇವರಾಜ್​​​​​ ರೆಡ್ಡಿ
ಜಲತಜ್ಞ ದೇವರಾಜ್ ರೆಡ್ಡಿ
  • Share this:
ಚಿತ್ರದುರ್ಗ(ಮೇ.27): ಕೋಟೆನಾಡು ಚಿತ್ರದುರ್ಗ ಜಿಲ್ಲೆ  ಸತತ ಬರಕ್ಕೆ ತುತ್ತಾಗಿ ಜಿಲ್ಲೆಯ ಜನರು ಮಳೆಯಿಲ್ಲದೆ ತತ್ತರಿಸುತ್ತಿದ್ದಾರೆ. ಆದರೆ ಈ ಬರದ ನಾಡಲ್ಲಿ ನೀರಿನ ಆಹಾಕಾರ ಎದುರಿಸುತ್ತಿರುವವರ ನಡುವೆ ಬತ್ತಿ ಹೋದ ಅಂತರ್ಜಲ ಹೆಚ್ಚಿಸಿ ನೀರು ಉಳಿಸಲು ಜಲ ತಜ್ಞ ದೇವರಾಜ್ ರೆಡ್ಡಿಯವರ ಪ್ರಯತ್ನ ಅಪಾರ. ಇವರ ಈ ಕೆಲಸ ತನ್ನ ಮನೆಯಲ್ಲಿಯೇ ಮಳೆ ನೀರನ್ನ ಸಂಗ್ರಹಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅಷ್ಟೆ ಅಲ್ಲ, ಬತ್ತಿ ಹೋದ ಬೋರ್​ವೆಲ್ ಗಳಲ್ಲಿ ನೀರು ಬರಿಸಿ ಬರದ ಜಿಲ್ಲೆಯ ರೈತರ ಪಾಲಿಗೆ ಭಗೀರಥರಾಗಿದ್ದಾರೆ. 

ಕೋಟೆನಾಡು ಚಿತ್ರದುರ್ಗ ಜಿಲ್ಲೆ  ಅಂದರೆ ಬರ, ಹನಿ ನೀರಿಗೂ ತತ್ವಾರ. ಮಳೆಯಿಲ್ಲದೆ ಕೃಷಿ ಜೀವನಕ್ಕೆ ಕಷ್ಟವಾಗಿರುವ ಚಿತ್ರದುರ್ಗ ಜಿಲ್ಲೆಯ ರೈತರ ಪಾಡು ಆ ದೇವರಿಗೇ ಪ್ರೀತಿ. ಜಿಲ್ಲೆಯ ಬಹುತೇಕ ಜನರು ಮಳೆಯಾಶ್ರಿತ ಬೆಳೆಗಳನ್ನೇ ಬೆಳೆಯೋದು ಹೆಚ್ಚು. ಆದರೆ ಕಳೆದ ಎಂಟತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯೇ ಆಗುತ್ತಿಲ್ಲ. ಇಂತಹ ಕಷ್ಟದ ಸಂದರ್ಭದಲ್ಲಿ ಬೋರ್​ವೆಲ್​​ ತೆಗೆದರು ನೀರು ಬರೋದು ಅಷ್ಟಕ್ಕಷ್ಟೆ. ಆದ್ದರಿಂದ ದೇವರಾಜ್ ರೆಡ್ಡಿಯವರು ಅನಗತ್ಯ ಹರಿದು ಹೋಗುವ ನೀರನ್ನು ಭೂಮಿಗೆ ಇಂಗಿಸಲು ಅನೇಕ ಕಾರ್ಯಗಳನ್ನ ಮಾಡಿದ್ದಾರೆ. ಹಾಗಾಗಿ  ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲತಜ್ಞ ದೇವರಾಜ್ ರೆಡ್ಡಿಯವರ ಕೊಡುಗೆ ಅಪಾರ.

ಮೂಲತಃ ಚಿತ್ರದುರ್ಗದ ಕೃಷಿ ಕುಟುಂಬದಿಂದ ಬಂದಿರುವ ದೇವರಾಜ್ ರೆಡ್ಡಿ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಸರ್ಕಾರಿ ನೌಕರಿ ಬಂದರೂ ಅದನ್ನು ತ್ಯಜಿಸಿ ಜಿಯೋ ರೈನ್ ವಾಟರ್ ಎಂಬ ಸ್ವಯಂ ಸಂಸ್ಥೆಯ ಮೂಲಕ ಮಳೆ ನೀರು ಕೊಯ್ಲು ಹಾಗೂ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸಲು ಜಾಗೃತಿ ಮೂಡಿಸುತ್ತಿದ್ದಾರೆ.

ತನ್ನ ಮನೆಯಿಂದಲೇ ಮಳೆ ನೀರು ಕೊಯ್ಲು ಜಾಗೃತಿ ಪ್ರಾರಂಭಿಸಿದ್ದಾರೆ ದೇವರಾಜ್ ರೆಡ್ಡಿ. ಇವರು ತನ್ನ ಮನೆಯ ಮೇಲ್ಚಾವಣಿಗೆ ಪಿವಿಸಿ ಪೈಪ್​​ಗಳನ್ನ ಹಾಕಿ ಶುದ್ಧೀಕರಣ ಜಾಲಗಳನ್ನ ಅಳವಡಿಸಿ ಮನೆಯ  ಎರಡು ಸಂಪ್ ಗಳನ್ನ ತುಂಬಿಸಿದ್ದಾರೆ. ನೀರಿಗಾಗಿ ಪರದಾಡುವ  ಚಿತ್ರದುರ್ಗ ನಗರದಲ್ಲಿ ತನ್ನ ಮನೆಯ ಮೇಲೆ ಬಿದ್ದ ಒಂಬತ್ತು ವರ್ಷದ ಮಳೆಯ ನೀರನ್ನು ಸಂಗ್ರಹಿಸಿ ಮಾದರಿಯಾಗಿದ್ದಾರೆ.

ಹೀಗೆ ಸಂಗ್ರಹಿಸಿರುವ ಮಳೆ ನೀರು ಇನ್ನೂ ಒಂದು ವರ್ಷ ಕುಡಿಯಲು, ಅಡುಗೆಗೆ, ಸೇರಿದಂತೆ ಇತರೆ ಬಳಕೆಗೆ  ಬಳಸಬಹುದಾಗಿದೆ. ಇದು ಫಿಲ್ಟರ್ ವಾಟರ್ ಗಿಂತ ಶುದ್ದವಾಗಿದೆ ಎನ್ನುತ್ತಾರೆ ದೇವರಾಜ್ ರೆಡ್ಡಿ. ಇನ್ನೂ ಜಿಲ್ಲೆಯ ಬರದ ಬವಣೆ ನೀಗಿಸಲು ಕಳೆದ 25 ವರ್ಷಗಳಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ರೈತರ ಜಮೀನುಗಳಲ್ಲಿ ಬತ್ತಿಹೋದ  ಕೊಳವೆ ಬಾವಿಗಳಿಗೆ  ಮಳೆ ನೀರು ಹಿಂಗಿಸಲು ಸುತ್ತಲೂ ಗುಂಡಿ ನಿರ್ಮಿಸಿ ಹರಿದು ಹೋಗುತ್ತಿದ್ದ ಮಳೆ ನೀರನ್ನ ಭೂಮಿ ಸೇರುವಂತೆ ಮಾಡುತ್ತಿದ್ದಾರೆ.

ನೀರಿಲ್ಲದೆ ಬರಿದಾಗಿರುವ ಜಿಲ್ಲೆಯ ಹಲವು ಜಮೀನುಗಳಲ್ಲಿ ಚೆಕ್ ಡ್ಯಾಂ ಮತ್ತು  ಕೃಷಿ ಹೊಂಡಗಳ ನಿರ್ಮಾಣ ಮಾಡಲು ಸಲಹೆಗಳನ್ನ ನೀಡಿ ನೀರು ಸಂಗ್ರಹಿಸಲು ರೈತರಿಗೆ ಮಾರ್ಗ ದರ್ಶನ ನೀಡುತ್ತಿದ್ದಾರೆ. ಇವರ ಮಾರ್ಗದರ್ಶನ ಕಾರ್ಯದಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಬತ್ತಿಹೋದ ಕೊಳವೆ ಬಾವಿಗಳಲ್ಲಿ ನೀರು ಬರಿಸಿ ಜಿಲ್ಲೆಯ ರೈತರ ಪಾಲಿಗೆ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.

ಒಟ್ಟಾರೆ ಬರದ ಹಣೆ ಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ನೀರಿನ ಆಹಾಕಾರ ತಣಿಸಲು ದೇವರಾಜ್ ರೆಡ್ಡಿಯವರ ಕಾರ್ಯ ಅಪಾರ. ಇವರು ಮಾಡುತ್ತಿರುವ ನೀರು ಉಳಿಸುವ ಪ್ರಯತ್ನದ ಕಾರ್ಯಕ್ಕೆ ಸಾರ್ವಜನಿಕರು ಕೈ ಜೋಡಿಸಿ ನೀವು ನೀರು ಉಳಿಸಿ ಅಂತರ್ಜಲ ಹೆಚ್ಚಿಸಲಿ ಅನ್ನೋದು ನಮ್ಮ ಆಶಯ.Jio Fiber: ಜಿಯೋ ಫೈಬರ್​ ಬಳಕೆದಾರರಿಗೆ ಡಬಲ್​ ಡೇಟಾ ಆಫರ್​!
Youtube Video
First published: May 27, 2020, 7:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories