ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ ಗೆ ಬಂಧನದ ಭೀತಿ

G Hareeshkumar | news18
Updated:October 8, 2018, 4:21 PM IST
ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ ಗೆ ಬಂಧನದ ಭೀತಿ
G Hareeshkumar | news18
Updated: October 8, 2018, 4:21 PM IST
  - ಲೋಹಿತ್ ಶಿರೋಳ, ನ್ಯೂಸ್ 18 ಕನ್ನಡ 

ಚಿಕ್ಕೋಡಿ ( ಅ.08) :  ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ ಅವರಿಗೆ ಬಂಧನದ ಭೀತಿ ಎದುರಾಗಿದೆ. 2016ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಪಿ. ರಾಜೀವ್ ವಿರುದ್ಧ ವಾರಂಟ್ ಜಾರಿ ಮಾಡಿದೆ.

ಪ್ರಕರಣ ಏನು ?

2016ರಲ್ಲಿ ಶಾಸಕರಾಗಿದ್ದ ಪಿ.ರಾಜೀವ್ ಅವರು ಸಕ್ಕರೆ ಕಾರ್ಖಾನೆಗಳಿಂದ ಹಣ ಪಡೆದು ರೈತ ಪರ ನಿಲ್ಲುವುದನ್ನು ಬಿಟ್ಟು ಪ್ರತಿಭಟನೆ ಮಾಡುವುದನ್ನ ನಿಲ್ಲಿಸಿದ್ದಾರೆ ಎಂದು ಕುಡಚಿ ಕ್ಷೇತ್ರದ ಮಾಜಿ ಶಾಸಕ ಶಾಮ ಘಾಟಗೆ ಆರೋಪ ಮಾಡಿದ್ದರು.

ಆರೋಪ ಮಾಡಿದ ಹಿನ್ನೆಲೆಯಲ್ಲಿ ಶಾಸಕ ರಾಜೀವ್ ನೇರವಾಗಿ ಶಾಮ ಘಾಟಗೆ ಅವರ ಮನೆಗೆ ಹೋಗಿ ಅಭಿವೃದ್ಧಿ ಹಾಗೂ ಹಣ ಪಡೆದ ಬಗ್ಗೆ ಬಹಿರಂಗ ಚರ್ಚೆ ಮಾಡಲು ಆಮಂತ್ರಣ ನೀಡಲು ಹೋದ ಸಂದರ್ಭದಲ್ಲಿ ಶಾಮ ಘಾಟಗೆ ಇಲ್ಲದಿದ್ದರೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ .

ಶಾಸಕ ಪಿ.ರಾಜೀವ್ ಸೇರಿದಂತೆ ಅವರ ಬೆಂಬಲಿಗರ ಮೇಲೆ ಘಾಟಗೆ ಕುಟುಂಬ ಕುಡಚಿ ಪೊಲೀಸ್ ಠಾಣೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದನೆ ಸೇರಿದಂತೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಾರೆ. ಪ್ರಕರಣ ದಾಖಲಾದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಬೆಂಗಳೂರಿನ ವಿಶೇಷ ನ್ಯಾಯಾಲಯ ವಾರಂಟ್​ ಜಾರಿ ಮಾಡಿದೆ.
Loading...

ನನಗೆ 30 ಕೋಟಿ... ಸಚಿವ ಸ್ಥಾನದ ಆಫರ್ ಬಂದಿತ್ತು- ಹೆಬ್ಬಾಳ್ಕರ್ ಬಾಂಬ್..!

ಸುದೀಪ್ ಗೆ ಐ ಯಾಮ್ ಸೋ ಸಾರಿ ಎಂದ ರಮ್ಯಾ
First published:October 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626