ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಚುನಾವಣೆಗೆ ಸಿದ್ಧವಾಗುತ್ತಿದ್ದು, ಮೊದಲ ಹಂತದಲ್ಲಿ ಸ್ಥಳೀಯ ನಾಯಕರನ್ನು (Local Leaders) ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದತ್ತ (Kalyana Rajya Pragati Paksha) ಸಳೆಯುತ್ತಿದ್ದಾರೆ. ಗಂಗಾವತಿಯಿಂದ (Gangavati) ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ನಗರ (Bellary City) ಕ್ಷೇತ್ರದಿಂದ ಅರುಣಾ ಲಕ್ಷ್ಮಿ (Aruna Laxmi) ಸ್ಪರ್ಧೆ ಮಾಡೋದು ಖಚಿತವಾಗಿದೆ. ಈಗಾಗಲೇ ಮೊದಲ ಹಂತವಾಗಿ ಐದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದಾರೆ. ಸಿರಗುಪ್ಪ, ಕನಕಗಿರಿ, ನಾಗಠಾಣ, ಸಿಂಧನೂರು ಮತ್ತು ಹಿರಿಯೂರು ವಿಧಾನಸಭಾ ಕ್ಷೇತ್ರಗಳಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇಂದು ಟ್ವೀಟ್ ಮಾಡಿರುವ ಜನಾರ್ದನ ರೆಡ್ಡಿ ಟಿಕೆಟ್ಗಾಗಿ ಮನೆಗೆ ಬರೋದು ಬೇಡ ಎಂದಿದ್ದಾರೆ.
ಜನಾರ್ದನ ರೆಡ್ಡಿ ಟ್ವೀಟ್
ಆತ್ಮೀಯರೇ ಕಳೆದ ಡಿಸೆಂಬರ್ 25ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆಯಾದ ಮೇಲೆ ನಾಡಿನ ಎಲ್ಲೆಡೆ ಸಿಗುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಕಲ್ಯಾಣ ರಾಜ್ಯದ ಹಲವಾರು ಕ್ಷೇತ್ರಗಳಿಂದ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ನೂರಾರು ಅಭಿಮಾನಿಗಳೊಂದಿಗೆ ದಿನನಿತ್ಯ ಆಗಮಿಸುತ್ತಿದ್ದು ಪಕ್ಷದ ಮೇಲೆ ತಾವು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ.
ಆದರೆ ಬಂದವರ ಎಲ್ಲರೊಂದಿಗೆ ನಾನು ಹೆಚ್ಚಿನ ಸಮಯ ಕಳೆಯಲು ಆಗುತ್ತಿಲ್ಲ. ದೂರದ ಊರುಗಳಿಂದ ಕಷ್ಟಪಟ್ಟು ಬರುತ್ತಿರುವವರಲ್ಲಿ ನನ್ನ ಕಳಕಳಿಯ ಮನವಿ ತಾವು ಯಾರು ಖುದ್ದಾಗಿ ನೂರಾರು ಜನರೊಂದಿಗೆ ಆಗಮಿಸುವುದು ಬೇಡ. ಗಂಗಾವತಿಯ ನಿವಾಸದ ಹತ್ತಿರ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಎಲ್ಲರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಆಗುತ್ತಿಲ್ಲ.
ಎಲ್ಲಾ ಕ್ಷೇತ್ರಗಳಲ್ಲಿ ಸಮೀಕ್ಷೆ
ದಯವಿಟ್ಟು ಟಿಕೆಟ್ ಆಕಾಂಕ್ಷಿಗಳು ಕೆಳಗಿನ ಮೇಲ್ ಐಡಿಗೆ ತಮ್ಮ ವಿವರಗಳನ್ನು ಕಳುಹಿಸಿರಿ. ನಾನು ಈಗಾಗಲೇ ಕ್ಷೇತ್ರಗಳ ಸಮೀಕ್ಷೆಯನ್ನು ಮಾಡುತ್ತಿದ್ದೇನೆ. ವರದಿಯ ಆಧಾರದ ಮೇಲೆ ಆಯಾ ಕ್ಷೇತ್ರಗಳಲ್ಲಿ ಸ್ಪರ್ಧೆ ಬಗ್ಗೆ ನಿರ್ಧರಿಸಿ ನಿಮ್ಮನ್ನು ಕರೆದು ಚರ್ಚಿಸುತ್ತೇನೆ ಅನ್ಯತಾ ಭಾವಿಸಬೇಡಿ ಎಂದು ಜನಾರ್ದನ ರೆಡ್ಡಿ ಕೇಳಿಕೊಂಡಿದ್ದಾರೆ.
ಮೇಲ್ ಐಡಿ: contactatkrpp@gmail.com
ಐದು ಕ್ಷೇತ್ರದ ಅಭ್ಯರ್ಥಿಗಳು ಇವರೇ
1.ಸಿರಗುಪ್ಪ: ಧರೆಪ್ಪ ನಾಯಕ್
2.ಕನಕಗಿರಿ: ಡಾ.ಚಾರುಲ್ ದಾಸರಿ
3.ನಾಗಠಾಣಾ: ಶ್ರೀಕಾಂತ್
4.ಸಿಂಧನೂರು: ನೆಕ್ಕಂಟಿ ಮಲ್ಲಿಕಾರ್ಜುನ್
5.ಚಿತ್ರದುರ್ಗ: ಮಹೇಶ್
‘ದಳ’ದಲ್ಲಿ ಟಿಕೆಟ್ ತಳಮಳ
Hassan JDS ticket Fight: ಹಾಸನದಲ್ಲಿ ಜೆಡಿಎಸ್ ಟಿಕೆಟ್ ದಂಗಲ್ ಬಗೆಹರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಶಿವರಾತ್ರಿ ಕಳೆದರೂ ಹಾಸನದ ಕದನಕಲಿ ಗುಟ್ಟು ಇತ್ಯರ್ಥವಾಗ್ತಿಲ್ಲ. ಸ್ವರೂಪ್ ಪರ ಕುಮಾರಸ್ವಾಮಿ ಒಲವು ತೋರಿಸಿದ್ದಾರೆ. ಸ್ವರೂಪ್ ತಂದೆ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕುಮಾರಸ್ವಾಮಿ ಕಸರತ್ತು ಮಾಡ್ತಿದ್ದಾರೆ.
ತಮ್ಮ ವಿವರಗಳನ್ನು ಕೆಳಕಂಡ ಮೇಲ್ ಗೆ ಕಳುಹಿಸಿ
contactatkrpp@gmail.com
Kindly send your details to the below mentioned mail id: contactatkrpp@gmail.com#KRPP @krppofficial pic.twitter.com/SZWvv4GXfi
— Gali Janardhana Reddy (@GaliJanardhanar) February 19, 2023
ಇದನ್ನೂ ಓದಿ: Pramod Mutalik: ಸಚಿವ ಸುನೀಲ್ ಕುಮಾರ್ ಸುತ್ತಮುತ್ತ ಇರುವವರೆಲ್ಲ ಕಾಂಗ್ರೆಸ್ಸಿನವರು: ಪ್ರಮೋದ್ ಮುತಾಲಿಕ್ ಕಿಡಿ
ಆನಂದ್ ಸಿಂಗ್ಗೆ ಅಕ್ಕನ ಸವಾಲ್
ವಿಜಯನಗರ ಜಿಲ್ಲೆ ಸ್ಥಾಪನೆ ರೂವಾರಿಗೆ ಜಿಲ್ಲೆಯಲ್ಲೇ ಸವಾಲ್ ಎದುರಾಗಿದೆ. ಅದರಲ್ಲೂ ಆನಂದ್ ಸಿಂಗ್ (Anand Singh) ಟಿಕೆಟ್ಗೆ ಸಹೋದರಿಯೇ ಅಡ್ಡಗಾಲು ಹಾಕ್ತಿದ್ದಾರೆ. ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ವಿಜಯನಗರ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ