HOME » NEWS » State » WALLS ARE TEXT BOOK SCHOOL CHILDREN BECOME TEACHERS AT THIS GOVERNMENT SCHOOL IN BELAGAVI HG

ಕಿಟಕಿ ಗೋಡೆಗಳೇ ಪುಸ್ತಕ, ಶಾಲಾ ವಿದ್ಯಾರ್ಥಿಗಳೇ ಶಿಕ್ಷಕರು; ಇಲ್ಲಿದೆ ವಿಶೇಷ ಸರ್ಕಾರಿ ಶಾಲೆ

ಶಾಲೆಯ ಪ್ರತಿ ಕಿಟಕಿಗಳ ಮೇಲೆ ಹರಡಿಕೊಂಡಿರುವ ಕನ್ನಡದ ವರ್ಣಮಾಲೆ, ಇಂಗ್ಲಿಷ್ ವರ್ಣಮಾಲೆ,  ಕನ್ನಡ , ಹಿಂದಿ, ಇಂಗ್ಲೀಷ್ ಮತ್ತು ರೋಮನ್ ಅಕ್ಷರಗಳು.  ಒಟ್ಟಾರೆಯಾಗಿ ಈ ಶಾಲೆಯೇ ತೆರೆದಿಟ್ಟ ಪುಸ್ತಕದಂತೆ ಕಾಣಿಸುತ್ತದೆ.

Harshith AS | news18-kannada
Updated:December 23, 2019, 6:12 PM IST
ಕಿಟಕಿ ಗೋಡೆಗಳೇ ಪುಸ್ತಕ, ಶಾಲಾ ವಿದ್ಯಾರ್ಥಿಗಳೇ ಶಿಕ್ಷಕರು; ಇಲ್ಲಿದೆ ವಿಶೇಷ ಸರ್ಕಾರಿ ಶಾಲೆ
ಬಡಕಂಬಿ ತೋಟದ ಶಾಲ, ಅಥಣಿ
  • Share this:
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದರೆ ನೆನಪಾಗೋದು ಒಡೆದ ಹೆಂಚು, ಮುರಿದ ಕಿಟಕಿ, ಮತ್ತು ಬಿರುಕು ಬಿಟ್ಟ ಗೋಡೆ. ಆದರೆ ಇಲ್ಲೊಂದು ಶಾಲೆ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ನಿತ್ಯವೂ ಕಂಗೊಳಿಸುತ್ತದೆ. ಅರೆ ಅದ್ಯಾವ ಶಾಲೆ ಎಲ್ಲಿದೆ ಅಂತೀರಾ ಈ ಸ್ಟೋರಿ ನೋಡಿ.

ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಡಕಂಬಿ ತೋಟದ ಶಾಲೆ. ಗಡಿಭಾಗದ ತಾಲ್ಲುಕು ಕೇಂದ್ರದಲ್ಲಿರುವ ಈ ಕನ್ನಡ ಶಾಲೆಯಲ್ಲಿ ಗೋಡೆಯ ಮೇಲೆಲ್ಲಾ ರಾಜ್ಯ, ಜಿಲ್ಲೆ, ಮತ್ತು ತಾಲ್ಲೂಕಿನ ಹೆಸರುಗಳು. ಕಾಲ ಚಕ್ರ, ರಾಷ್ಟ್ರೀಯ ಲಾಂಛನಗಳು, ಮತ್ತು ರಾಷ್ಟ್ರ ಪುರುಷರ ಚಿತ್ರಗಳು.

ಶಾಲೆಯ ಪ್ರತಿ ಕಿಟಕಿಗಳ ಮೇಲೆ ಹರಡಿಕೊಂಡಿರುವ ಕನ್ನಡದ ವರ್ಣಮಾಲೆ, ಇಂಗ್ಲಿಷ್ ವರ್ಣಮಾಲೆ,  ಕನ್ನಡ , ಹಿಂದಿ, ಇಂಗ್ಲೀಷ್ ಮತ್ತು ರೋಮನ್ ಅಕ್ಷರಗಳು.  ಒಟ್ಟಾರೆಯಾಗಿ ಈ ಶಾಲೆಯೇ ತೆರೆದಿಟ್ಟ ಪುಸ್ತಕದಂತೆ ಕಾಣಿಸುತ್ತದೆ.

ಒಂದೊಮ್ಮೆ ಶಿಕ್ಷಕರು ಕಾರಣಾಂತರಗಳಿಂದ ಶಾಲೆಗೆ ಬರುವುದು ವಿಳಂಬವಾದಾಗ ಈ ಶಾಲೆಯ ಗೋಡೆ ಕಿಟಕಿಗಳು ಇಲ್ಲಿನ ಮಕ್ಕಳಿಗೆ ಪಾಠ ಹೇಳುತ್ತವೆ.

ಇಲ್ಲಿನ ಇನ್ನೊಂದು ವಿಶೇಷ ಎಂದರೆ ಸುತ್ತ ಮುತ್ತಲಿನ ತೋಟದ ವಿದ್ಯಾರ್ಥಿಗಳು ಸೇರಿದಂತೆ ಅಥಣಿ ಪಟ್ಟಣದಿಂದ ಕೂಡ ಮಕ್ಕಳು ಈ ಶಾಲೆಗೆ ದಾಖಲಾಗಿರುವದು.
ವಿದ್ಯಾದಾನ ಶ್ರೇಷ್ಠ ದಾನ ಎನ್ನುವ ಮಾತನ್ನು ಮನವರಿಕೆ ಮಾಡಿಕೊಂಡಿರುವ ಸಮಾನ ಮನಸ್ಕ ಶಿಕ್ಷಕ ರಿಂದ ಕೂಡಿರುವ ಸರ್ಕಾರಿ ಕನ್ನಡ ಶಾಲೆಯೊಂದು ಕಾನ್ವೆಂಟ್ ಮತ್ತು ಖಾಸಗಿ ಶಾಲೆಗಳನ್ನು ಮೀರಿಸುತ್ತಿದ್ದು ಒಂದರಿಂದ ಎಂಟನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ ಎರಡುನೂರಕ್ಕೂ ಅಧಿಕ ಮಕ್ಕಳು ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ.

ಇನ್ನೂ ಶಾಲೆಯಲ್ಲಿ ನಾವು ಸೇವೆ ಸಲ್ಲಿಸಿ ನಿವೃತ್ತರಾದರು ಕೂಡ ಶಾಲೆಯ ಮಕ್ಕಳಿಗೆ ನಮ್ಮ ನೆನಪು ಉಳಿಯಬೇಕು, ಈ ಶಾಲೆ ಮಾದರಿ ಶಾಲೆ ಆಗಬೇಕು ಅನ್ನುವ ನಿಟ್ಟಿನಲ್ಲಿ ಇಂತಹದ್ದೊಂದು ವಿಚಾರ ಇಟ್ಟುಕೊಂಡು ಶಾಲೆಯ ಅನುದಾನದ ಜೊತೆಗೆ ನಮ್ಮ ಸಂಬಳ ಮತ್ತು ಮಕ್ಕಳ ಪೋಷಕರ ಸಹಕಾರದಿಂದ ಇದನ್ನೆಲ್ಲ ಮಾಡಿದ್ದೇವೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ವರದಿ: ಲೋಹಿತ್ ಶಿರೋಳ
ಚಿಕ್ಕೋಡಿ
Published by: Harshith AS
First published: December 23, 2019, 6:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories