ಉರುಳಿ ಬಿದ್ದ ಹಂಪಿ ನದಿ ಪಾತ್ರದ ಮಂಟಪ ; ಕೋದಂಡರಾಮ ದೇವಸ್ಥಾನದ ತಡೆಗೋಡೆ ಕುಸಿಯಿತು !

news18
Updated:September 6, 2018, 8:19 PM IST
ಉರುಳಿ ಬಿದ್ದ ಹಂಪಿ ನದಿ ಪಾತ್ರದ ಮಂಟಪ ; ಕೋದಂಡರಾಮ ದೇವಸ್ಥಾನದ ತಡೆಗೋಡೆ ಕುಸಿಯಿತು !
news18
Updated: September 6, 2018, 8:19 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.06) :  ತುಂಗಭದ್ರ ಜಲಾಶಯದಿಂದ ನಿರಂತರವಾಗಿ ನೀರು ಬಿಟ್ಟ ಪರಿಣಾಮ ಹಂಪಿ ನದಿಪಾತ್ರದ ದೇವಸ್ಥಾನದ ಮಂಟಪ ಉರುಳಿಬಿದ್ದಿದೆ.

ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಬಳಿ ನದಿ ತೀರದಲ್ಲಿರುವ ಮಂಟಪಕ್ಕೆ ನದಿ ನೀರು ಹಾಗೂ ಕಸಕಡ್ಡಿಯೆಲ್ಲ ಮಂಟಪಕ್ಕೆ ಬಂದ ಕಾರಣ ಮಂಟಪದ 12 ಕಂಬಗಳು ಉರುಳಿಬಿದ್ದಿವೆ. ಈ ಮಂಟಪಗಳು ಕೇಂದ್ರ ಪುರಾತತ್ವ ಇಲ್ಲವೇ ರಾಜ್ಯ ಪುರಾತತ್ವ ಇಲಾಖೆಗೆ ಸೇರಿದೆಯೋ ಎಂಬ ಬಗ್ಗೆ ಗೊಂದಲಗಳಿವೆ.

ಕಳೆದೊಂದು ತಿಂಗಳಿನಿಂದ ನದಿ ನೀರು ಮಂಟಪದ ತುಂಬೆಲ್ಲ ಹರಿದ ಕಾರಣ ಮಂಟಪದ ಕಂಬಗಳು ಉರುಳಿ ಬಿದ್ದಿದೆ. ಕೆಲ ದಿನಗಳ ಹಿಂದೆ ಹಂಪಿಯ ಕೋದಂಡರಾಮ ದೇವಸ್ಥಾನದ ಮುಂಭಾಗದ ತಡೆಗೋಡೆ ಕಲ್ಲುಗಳು ಬಿದ್ದಿದ್ದವು. ಜಲಾಶಯದಿಂದ ಎರಡುವರೆ ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟ ಪರಿಣಾಮ ದೇವಸ್ಥಾನ ಬಹುತೇಕ ಮುಳುಗಡೆಯಾಗಿತ್ತು.

ರಾಮಲಕ್ಷ್ಮಣ ವಿಗ್ರಹಗಳು ನದಿ ನೀರಿನಿಂದ ಅರ್ದ ಭಾಗ ಮುಳುಗಿದ್ದವು. ಈ ಕಾರಣದ ದೇವಸ್ಥಾನದ ಮುಂಭಾಗದ ತಡೆಗೋಡೆಯ ಕಲ್ಲುಗಳು ಅರ್ದದಷ್ಟು ಪ್ರಮಾಣ ಕುಸಿದು ಬಿದ್ದಿವೆ. ತಡೆಗೋಡೆಯ ಒಳಭಾಗದ ಮಣ್ಣು ಕುಸಿಯುತ್ತಿದ್ದು ರಕ್ಷಣೆಯ ಅಗತ್ಯತೆಯಿದೆ.

 
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...