‘ಫೆ. 27, ನನ್ನ ಕೊನೆಯ ದಿನ’ – ವಿಶ್ವದ ಅತಿ ಭಯಾನಕ ಜಲಪಾತಕ್ಕೆ ಜಿಗಿಯುವ ಮುನ್ನ ಚಿತ್ರದುರ್ಗದ ಸ್ಪೈಡರ್​ಮ್ಯಾನ್ ಜ್ಯೋತಿರಾಜ್ ಭಾವುಕ ಮಾತುಗಳು

ಮುಂದುವರೆದ ಅವರು, ಆ ದಿನ ನಾನು ಬದುಕುವುದು ಬಹಳ ಕಷ್ಟ. ಹಾಗಾಗಿ ನಾನೊಂದು ವೇಳೆ ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕಾರಣ ನಾನು ಸಂಪಾದನೆ ಮಾಡಿರುವುದು ಕನ್ನಡಿಗರ ಪ್ರೀತಿ ಮಾತ್ರ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ. ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. 

Latha CG | news18-kannada
Updated:November 20, 2019, 9:38 PM IST
‘ಫೆ. 27, ನನ್ನ ಕೊನೆಯ ದಿನ’ – ವಿಶ್ವದ ಅತಿ ಭಯಾನಕ ಜಲಪಾತಕ್ಕೆ ಜಿಗಿಯುವ ಮುನ್ನ ಚಿತ್ರದುರ್ಗದ ಸ್ಪೈಡರ್​ಮ್ಯಾನ್ ಜ್ಯೋತಿರಾಜ್ ಭಾವುಕ ಮಾತುಗಳು
ಜ್ಯೋತಿ ರಾಜ್
  • Share this:
ಕೋತಿರಾಜ್​ ಎಂಬ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಚಿತ್ರದುರ್ಗ ಕೋಟೆಯಲ್ಲಿ ಕೋತಿಯಂತೆ ಲೀಲಾಜಾಲವಾಗಿ ಬಂಡೆಗಳನ್ನು ಏರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ನಮ್ಮ ಕರ್ನಾಟಕದ ಜನರ ಮನಸ್ಸು ಗೆದ್ದಿದ್ದಾರೆ. ಈ ಸಾಹಸಿ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ಇದು ಪ್ರಾಣಕ್ಕೆ ಕುತ್ತು ತರುವಂತಹ ಸಾಹಸ. ಜ್ಯೋತಿರಾಜ್​ ಇದನ್ನು ಮಾಡುತ್ತಿರುವುದು ತಮ್ಮ ಸ್ವಾರ್ಥಕ್ಕಲ್ಲ. ಚಿತ್ರದುರ್ಗ ಕೋಟೆಯ ಅಭಿವೃದ್ಧಿಗೆ ಹಣ ಸಂಗ್ರಹಿಸಲು. ಅಷ್ಟಕ್ಕೂ ಆ ಸಾಹಸ ಏನು ಅಂತೀರಾ? ಮುಂದೆ ಓದಿ.

ಜಗತ್ತಿನ ಅತೀ ಎತ್ತರದ ಅಮೆರಿಕದ ಏಂಜಲ್​​ ಫಾಲ್ಸ್​​ ಹತ್ತುವ ಸಾಹಸಕ್ಕೆ ಕೋತಿರಾಜ್​ ಮುಂದಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಶಾಲಾ ಕಾರ್ಯಕ್ರಮವೊಂದರಲ್ಲಿ ಕೋತಿರಾಜ್​​ ಭಾಗವಹಿಸಿದ್ದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದೇನೆ. ಅದು ಫೆಬ್ರವರಿ 26-27 ನನ್ನ ಕೊನೆಯ ದಿನವಾಗಬಹುದು," ಎನ್ನುವ ಮೂಲಕ ಭಾವುಕರಾಗಿದ್ದಾರೆ.

ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ನೈಟ್ ಶಿಫ್ಟ್ ಅವಕಾಶ; ರಾಜ್ಯ ಸರ್ಕಾರ ಅಧಿಸೂಚನೆ

"ಸರ್ಕಾರದಿಂದ ಚಿತ್ರದುರ್ಗದ ಅಭಿವೃದ್ದಿಗೆ ಯಾವುದೇ ಪ್ರಯೋಜನಗಳು ಆಗಿಲ್ಲ. ಆದ್ದರಿಂದ ನಾನು ಮುಂಬರುವ ಫೆಬ್ರವರಿಯ 26 ಮತ್ತು 27 ರಂದು ಜಗತ್ತಿನ ಅತೀ ಎತ್ತರದ ಅಮೇರಿಕಾದ 3221 ಅಡಿ ಎತ್ತರದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ದಿಗೆ ಹಾಗೂ ನನ್ನ ಶಿಷ್ಯರ ಜೀವನೋಪಾಯಕ್ಕೆ ಬಳಕೆ ಮಾಡುವುದಾಗಿ," ಜ್ಯೋತಿರಾಜ್ ತಿಳಿಸಿದರು.

ಏಂಜಲ್​ ಫಾಲ್ಸ್​​


ಮುಂದುವರೆದ ಅವರು, "ಆ ದಿನ ನಾನು ಬದುಕುವುದು ಬಹಳ ಕಷ್ಟ. ಹಾಗಾಗಿ ನಾನೊಂದು ವೇಳೆ ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕಾರಣ ನಾನು ಸಂಪಾದನೆ ಮಾಡಿರುವುದು ಕನ್ನಡಿಗರ ಪ್ರೀತಿ ಮಾತ್ರ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ. ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. 

ಇನ್ನು, ನೆಲಮಂಗಲದ ಖಾಸಗಿ ಶಾಲೆಯ ಪುಟಾಣಿ ಮಕ್ಕಳು ಚಿತ್ರದುರ್ಗದ ಕೋಟೆಯ ಗತವೈಭವವನ್ನು ತೋರುವ ಒನಕೆ ಓಬವ್ವಳ ಕಿಂಡಿ, ಬಂದಿಖಾನೆ, ಏಳುಸುತ್ತಿನ ಕೋಟೆ ದೇವಾಲಯಗಳನ್ನು ತದ್ರೂಪವನ್ನ ನೋಡಿ ಇನ್ನಷ್ಟು ಭಾವುಕರಾಗಿ, ಮಕ್ಕಳ ಜೊತೆ ತಮ್ಮ ಹಳೆಯ ಅನುಭವವನ್ನ ಜ್ಯೋತಿರಾಜ್ ಹಂಚಿಕೊಂಡರು.ಒಟ್ಟಾರೆ ಮದಕರಿ ನಾಯಕರು ಆಳ್ವಿಕೆ ನಡೆಸಿದ ಚಿತ್ರದುರ್ಗದ ಕಲ್ಲಿನ ಕೋಟೆ, ರಾಜ್ಯ ಹಾಗೂ ದೇಶದ ಎತ್ತರದ ಶಿಖರಗಳನ್ನೇರಿ ಸಾಹಸ ಮೆರೆದಿರುವ ಜ್ಯೋತಿರಾಜ್. ಈಗ ವಿಶ್ವದ ಎತ್ತರದ ಅಪಾಯಕಾರಿ ಪಾಲ್ಸ್ ಏರಲು ಮುಂದಾಗಿ ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆ ಗಗನಕ್ಕೇರಿಸಲು ಮುಂದಾಗಿದ್ದಾರೆ. 
First published: November 20, 2019, 9:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading