HOME » NEWS » State » WALK PATH BUILT IN MANGROVE FOREST IN HONNAVARA SESR DKK

ಕಾಂಡ್ಲಾವನದಲ್ಲಿ ಒಂದು ನಡಿಗೆ; ಪ್ರವಾಸೋದ್ಯಮ ಉತ್ತೇಜನಕ್ಕೆ ನಿರ್ಮಾಣಗೊಂಡಿದೆ ಮ್ಯಾಂಗ್ರೋವ್​ ವಾಕಿಂಗ್​ ಪಾಥ್​

ಈ ಮ್ಯಾಂಗ್ರೋವ್ ಬೋರ್ಡ್ ವಾಕ್ ಸುಮಾರು 2 ಕಿಲೋ ಮೀಟರ್‌ನಷ್ಟು ಉದ್ದವಿದ್ದು ಕಾಂಡ್ಲಾ ಗಿಡಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ರೂಪಿಸಲಾಗಿದೆ

news18-kannada
Updated:January 13, 2021, 8:29 PM IST
ಕಾಂಡ್ಲಾವನದಲ್ಲಿ ಒಂದು ನಡಿಗೆ; ಪ್ರವಾಸೋದ್ಯಮ ಉತ್ತೇಜನಕ್ಕೆ ನಿರ್ಮಾಣಗೊಂಡಿದೆ ಮ್ಯಾಂಗ್ರೋವ್​ ವಾಕಿಂಗ್​ ಪಾಥ್​
ಕಾಂಡ್ಲಾವನ ನಡಿಗೆ
  • Share this:
ಕಾರವಾರ (ಜ. 13): ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿಯ ಅಂಚಿನಲ್ಲಿ ಹೇರಳ ಪ್ರಮಾಣದಲ್ಲಿ ಬೆಳೆದು ನಿಂತಿರುವ ಕಾಂಡ್ಲಾ ಗಿಡಗಳ ನಡುವೆ ಇದೀಗ ವಾಕಿಂಗ್ ಪಾಥ್ ತಲೆ ಎತ್ತಿದ್ದು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಪಟ್ಟಣದ ಇಕೋ ಬೀಚ್ ಸಮೀಪದಲ್ಲೇ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಶರಾವತಿ ಮ್ಯಾಂಗ್ರೋವ್ ಬೋರ್ಡ್‌ವಾಕ್‌ನ್ನು ನಿರ್ಮಾಣ ಮಾಡಲಾಗಿದೆ. ಅಳಿವಿನಂಚಿನಲ್ಲಿರುವ ಕಾಂಡ್ಲಾ ಸಸ್ಯಗಳ ಕುರಿತು ಜನರಿಗೆ ತಿಳಿಸಿಕೊಡುವುದರ ಜೊತೆಗೆ ಕಾಂಡ್ಲಾ ವನದಲ್ಲಿ ವಿಹರಿಸುವ ಆನಂದವನ್ನ ಪ್ರವಾಸಿಗರಿಗೆ ಒದಗಿಸಿಕೊಡುವ ಉದ್ದೇಶದಿಂದಲೇ ಅರಣ್ಯ ಇಲಾಖೆ ಈ ಮ್ಯಾಂಗ್ರೋವ್ ಬೋರ್ಡ್ ವಾಕ್‌ನ್ನ ನಿರ್ಮಿಸಿದೆ. ಕಾಡು ಜಂಬೆ ಮರದ ಹಲಗೆಗಳನ್ನ ಬಳಸಿ ನಿರ್ಮಿಸಲಾಗಿರುವ ವಾಕಿಂಗ್‌ಪಾಥ್ ಶರಾವತಿ ನದಿಯಂಚಿಗೆ ಹೊಂದಿಕೊಂಡಿರುವ ಕಾಂಡ್ಲಾ ವನದ ದರ್ಶನವನ್ನ ಪ್ರವಾಸಿಗರಿಗೆ ಮಾಡಿಸಲಿದೆ. ಹಚ್ಚ ಹಸಿರಿನ ತಂಪಾದ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಾಲ ಕಳೆಯುವ ಮೂಲಕ ರಿಲ್ಯಾಕ್ಸ್ ಮಾಡಲು ಇದು ಸಹಕಾರಿಯಾಗಿದೆ.



 ಪ್ರವಾಸೋದ್ಯಮಕ್ಕೆ ಸಿಕ್ತು ಉತ್ತೇಜನ

ಇನ್ನು ಈ ಮ್ಯಾಂಗ್ರೋವ್ ಬೋರ್ಡ್ ವಾಕ್ ಸುಮಾರು 2 ಕಿಲೋ ಮೀಟರ್‌ನಷ್ಟು ಉದ್ದವಿದ್ದು ಕಾಂಡ್ಲಾ ಗಿಡಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ರೂಪಿಸಲಾಗಿದೆ. ಜೊತೆಗೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕುಳಿತು ವಿಶ್ರಾಂತಿ ಮಾಡಲು ಹಾಗೂ ಸೆಲ್ಫೀ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದು ಪ್ರವಾಸಿಗರಿಂದ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಇಲ್ಲಿನ ಇಕೋ ಬೀಚ್‌ಗೆ ಬ್ಲೂಫ್ಲ್ಯಾಗ್ ಮಾನ್ಯತೆ ದೊರೆತಿ, ದ್ದು ಇದೀಗ ಮ್ಯಾಂಗ್ರೋವ್ ವಾಕ್ ಸಹ ಸಮೀಪದಲ್ಲೇ ನಿರ್ಮಾಣವಾಗಿರೋದ್ರಿಂದಾಗಿ ಪ್ರವಾಸಿಗರಿಗೂ ವೀಕ್ಷಣೆಗೆ ಸಾಕಷ್ಟು ಅನುಕೂಲಕರವಾಗಿದೆ. ಜೊತೆಗೆ ಮ್ಯಾಂಗ್ರೋವ್ ಕಾಡುಗಳ ಕುರಿತು ಸಂಶೋಧನೆ, ಅಧ್ಯಯನ ಮಾಡುವವರಿಗೂ ಇದು ಸಾಕಷ್ಟು ಸಹಕಾರಿಯಾಗಲಿದೆ.

ಇದನ್ನು ಓದಿ: ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಂಡು ಜನರ ಮೇಲೆ ಸವಾರಿ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್​ ಕಿಡಿ

ಮುಂಬೈ ಬಿಟ್ರೆ ಇಲ್ಲಿಯೇ ಕಾಂಡ್ಲಾ ವನ

ಈ ಕಾಂಡ್ಲಾವನಗಳು ಭೂಮಿಯ ವಾತಾವರಣಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಮುದ್ರದಲ್ಲಿ ಉಂಟಾಗಬಹುದಾದ ಸುನಾಮಿ ಮತ್ತು ಪ್ರವಾಹದಿಂದಾಟಾಗು ಹಾನಿ ತಡೆಯುವಲ್ಲಿ ಕೂಡ ಇವು ಪ್ರಮುಖವಾಗಿದೆ. ಇದೇ ಹಿನ್ನಲೆ ಈ ಕಾಂಡ್ಲಾವನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಬೈನಲ್ಲಿ ಬಿಟ್ಟರೆ ಇಲ್ಲಿಯೇ ಈ ರೀತಿಯ ಕಾಂಡ್ಲಾ ವನ ನಿರ್ಮಿಸಲಾಗಿದೆ.ಕಾಂಡ್ಲಾ ಗಿಡಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮ್ಯಾಂಗ್ರೋವ್ ಬೋರ್ಡ್‌ ವಾಕ್ ನಿರ್ಮಾಣ ಮಾಡಿರುವುದಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂಡ್ಲಾ ವನದ ಸೌಂದರ್ಯವನ್ನ ಆಸ್ವಾದಿಸಲು  ಶರಾವತಿ ಬೋರ್ಡ್‌ವಾಕ್‌ಗೊಮ್ಮೆ ಭೇಟಿ ನೀಡಿ..
Published by: Seema R
First published: January 13, 2021, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories