ಮಂಡ್ಯ ರೈತನ ಕೆಲಸಕ್ಕೆ ಸಲಾಂ ಹೇಳಿದ ವಿವಿಎಸ್ ಲಕ್ಷಣ್..!

news18
Updated:July 30, 2018, 4:05 PM IST
ಮಂಡ್ಯ ರೈತನ ಕೆಲಸಕ್ಕೆ ಸಲಾಂ ಹೇಳಿದ ವಿವಿಎಸ್ ಲಕ್ಷಣ್..!
news18
Updated: July 30, 2018, 4:05 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಜೊತೆಗೆ ಬಡವರ ಬಗ್ಗೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿದವರ ಬಗ್ಗೆ ಪೋಸ್ಟ್​​ಗಳನ್ನು ಹಂಚಿಕೊಂಡು ಅವರ ಬೆನ್ನುತಟ್ಟುವ ಕೆಲಸ ಮಾಡುತ್ತಿರುತ್ತಾರೆ. ಅದರಂತೆ ಮಂಡ್ಯದ 82 ವರ್ಷ ಪ್ರಾಯದ ಕಾಮೇಗೌಡರ ವನ್ಯಜೀವಿಗಳ ಕಾಳಜಿಗೆ, ಲಕ್ಷ್ಮಣ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ವನ್ಯಜೀವಿಗಳ ದಾಹ ತೀರಿಸಲು ಮಂಡ್ಯದ ಕಾಮೇಗೌಡ ಅವರು ಹೊಸ ಯೋಜನೆಯೊಂದನ್ನು ಮಾಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಸುಮಾರು 15 ಲಕ್ಷ ರುಪಾಯಿ ವೆಚ್ಚದಲ್ಲಿ 14 ನೀರಿನ ಹೊಂಡಗಳನ್ನು ನಿರ್ಮಿಸಿದ್ದು, ಸ್ವತಃ ನಿರ್ವಹಣೆ ಕೂಡ ಮಾಡುತ್ತಿದ್ದಾರೆ. ಕುರಿಗಾಹಿ ಕಾಮೇಗೌಡರ ಈ ಕೆಲಸಕ್ಕೆ ವಿವಿಎಸ್ ಸಲಾಂ ಹೇಳಿದ್ದಾರೆ. ಇವರ ಈ ಕಾರ್ಯಕ್ಕೆ ಅನೇಕ ಪ್ರಶಸ್ತಿಗಳನ್ನು ಇವರನ್ನು ಹುಡುಕಿಕೊಂಡು ಬಂದಿದ್ದು, ಪ್ರಣಾಮಗಳು ಎಂದು ಟ್ವೀಟ್ ಮಾಡಿದ್ದಾರೆ.

 


Loading...ಕಾಮೇಗೌಡ ಅವರ ಈ ಕೆಲಸಕ್ಕೆ ಮೆಚ್ಚಿ ಶಿವಮೂರ್ತಿ ಮುರುಘಾ ಶರಣರು ಪ್ರತಿಷ್ಠತ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...