ಬೆಳಗಾವಿ: ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ (SC ST Reservation) ಹೆಚ್ಚಳ ಮಾಡಿ ಸರ್ಕಾರ ಮಹತ್ವ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ (Panchamasali) ಸಮುದಾಯಕ್ಕೆ 2ಎ ಮೀಸಲಾತಿ (2A Reservation) ಹೋರಾಟ ಮತ್ತೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಕೂಡಲಸಂಗಮದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳ (Jayamruthyunjaya Swamiji) ನೇತೃತ್ವದಲ್ಲಿ 20 ತಿಂಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಸರ್ಕಾರ ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ. ಹೀಗಾಗಿ ನವೆಂಬರ್ 2ನೇ ವಾರದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ಸಿದ್ಧತೆ ನಡೆಸಲಾಗಿದೆ. 20 ಲಕ್ಷ ಜನ ಸೇರಿಸಿ ಮಾಡು ಇಲ್ಲವೇ ಮಡಿ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಇದೇ ಅಕ್ಟೋಬರ್ 21ರಂದು ಹುಕ್ಕೇರಿ (Hukkeri) ತಾಲೂಕಿನಲ್ಲಿ ಸಮಾವೇಶದಲ್ಲಿ ಹೋರಾಟದ ರೂಪರೇಷ ಪ್ರಕಟಿಸಲಾಗುವುದು ಎಂದು ಶ್ರೀಗಳು ಹೇಳಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಮೀಸಲಾತಿ ವಿಚಾರದಲ್ಲಿ 4 ಸಲ ನೀಡಿದ ಭರವಸೆ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಿ ಚುನಾವಣೆ ಮೊದಲೇ 2ಎ ಮೀಸಲಾತಿ ಪಡೆಯಲು ಪ್ರಯತ್ನ ಆರಂಭಿಸಲಾಗಿದೆ. ಇಲ್ಲವೇ ಸಮಾಜದ ರಾಜಕೀಯ ನಿರ್ಧಾರ ಪ್ರಕಟ ಮಾಡುವ ಎಚ್ಚರಿಕೆ ಶ್ರೀಗಳು ನೀಡಿದ್ದಾರೆ.
ಮತ್ತೊಂದು ಸುತ್ತಿನ ಹೋರಾಟದ ಸಿದ್ಧತೆ
ಉತ್ತರ ಕರ್ನಾಟದ ಹಲವು ಕ್ಷೇತ್ರ ಹಾಗೂ ದಕ್ಷಿಣ ಕರ್ನಾಟಕದ ಕೆಲ ಕ್ಷೇತ್ರಗಳಲ್ಲಿ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ 2ಎ ಪಂಚಮಸಾಲಿ ಮೀಸಲಾತಿ ಪಡೆಯುವ ಒತ್ತಡ ತರಲು ಮತ್ತೊಂದು ಸುತ್ತಿನ ಹೋರಾಟ ಆರಂಭವಾಗುವ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.
ಸರ್ಕಾರ ಸರ್ವಪಕ್ಷದ ಸಭೆ ಕರೆಯಲಿ
ನ್ಯೂಸ್ 18 ಕನ್ನಡದ ಜೊತೆ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದೆ. ಮೀಸಲಾತಿ ಬಗ್ಗೆ ಉಳಿದ ಸಮಾಜದಲ್ಲಿ ಭರವಸೆ ಹೆಚ್ಚಾಗಿದೆ. ಹೋರಾಟ ಮಾಡಿದ ಸಮಾಜದ ಶ್ರಿಗಳಿಗೆ ಅಭಿನಂದನೆ ಸಲ್ಲಿಕೆ ಸಲ್ಲಿಸುತ್ತೇನೆ. ಮೀಸಲಾತಿ ಬಗ್ಗೆ ಶಾಸಕ ಯತ್ನಾಳ ಸಹ ಧ್ವನಿ ಎತ್ತಿದ್ದರು.
ನಮ್ಮ ಸಮಾಜ ಸಹ ಮೀಸಲಾತಿ ಹೆಚ್ಚಳದ ಬಗ್ಗೆ ಧ್ವತಿ ಎತ್ತಿತ್ತು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದ ಕುರಿತು ಸರ್ಕಾರ ಈ ಬಗ್ಗೆ ಸರ್ವ ಪಕ್ಷ ಸಭೆ ಕರೆದು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Basavaraj Bommai: ನನ್ನನ್ನು ಶ್ರೀರಾಮನಿಗೆ ಹೋಲಿಸಬೇಡಿ: ಸಿಎಂ ಬೊಮ್ಮಾಯಿ
25 ಲಕ್ಷ ಜನರ ನೇತೃತ್ವದಲ್ಲಿ ಹೋರಾಟ
ನಮ್ಮ ಸಮಾಜಕ್ಕೆ ಮೀಸಲಾತಿ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಮಾಡಬೇಕು. ಇಲ್ಲವೇ ನವೆಂಬರ್ 2ನೇ ವಾರದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತೇವೆ. 25 ಲಕ್ಷ ಜನ ಸೇರಿಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಅಕ್ಟೋಬರ್ 21ರಂದು ಹೋರಾಟದ ದಿನಾಂಕ ನಿಗದಿ ಮಾಡುತ್ತೇವೆ ಎಂದು ಶ್ರಿಗಳು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಮೊದಲು ಹಿಂದುಳಿದ ವರ್ಗದ ವರದಿ ಬರಬೇಕು ಎಂದು ನೆಪ ಹೇಳುತ್ತಿದ್ದಾರೆ. 20 ತಿಂಗಳಿಂದ ವರದಿ ಬರಲಿ ಎಂದು ಕಾಲಹರಣ ಮಾಡುತ್ತಿದ್ದಾರೆ. ಮಾತು ತಪ್ಪಿದ ಕಾರಣಕ್ಕಾಗಿ ಜನರಲ್ಲಿ ಗೊಂದಲ ನಿರ್ಮಾಣವಾಗಿದೆ. ಉಗ್ರ ಹೋರಾಟ ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಸಾಮಾಜಿಕ, ರಾಜಕೀಯ ನಿರ್ಧಾರ ಸಹ ಪ್ರಕಟ ಮಾಡಲಾಗುವುದು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ.
ಇದನ್ನೂ ಓದಿ: Government Hospital: ಕಣ್ಣರಳಿಸಿ ನೋಡೋಥರ ಇದೆ ಈ ಸರ್ಕಾರಿ ಆಸ್ಪತ್ರೆ! ಖಾಸಗಿ ಹಾಸ್ಪಿಟಲ್ ಇಲ್ಲಿ ಲೆಕ್ಕಕ್ಕೇ ಇಲ್ಲ!
ಯತ್ನಾಳ್ಗೆ ಮಂತ್ರಿ ಸ್ಥಾನದ ಆಫರ್
ನನ್ನ ಮುಂದೆಯೆ ಸಿಎಂ ಯತ್ನಾಳಗೆ ನೀವು ಮಂತ್ರಿ ಆಗುತ್ತೀರಿ ಎಂದು ಹೇಳಿದ್ರು. ಆದರೆ ಯತ್ನಾಳ್ 6 ತಿಂಗಳು ಮಂತ್ರಿ ತಗೊಂಡು ಏನ್ ಮಾಡಲಿ, ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ ಎಂದು ಗಟ್ಟಿಯಾಗಿ ಹೇಳಿದ್ದಾರೆ. ಯತ್ನಾಳ್ ಮಂತ್ರಿ ಸ್ಥಾನವನ್ನು ಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೆ. ನಮಗೆ ಅನುದಾನ ಕೊಡತ್ತಿವಿ ಎಂದು ಬಿಎಸ್ ವೈ ಸರ್ಕಾರ ಇದ್ದಾಗ ಹೇಳಿದ್ರು. ಅನುದಾನ, ನಿಗಮ ಮಂಡಳಿ, ಮಂತ್ರಿ ಸ್ಥಾನ ಯಾವುದು ನಮಗೆ ಬೇಡ, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೋಡಿ ಎಂದು ಸಿಎಂಗೆ ಕೇಳಿದ್ದೇವೆ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ