ತಿಂಡಿ​ಗಾಗಿ ಮತದಾನವೇ ಸ್ಥಗಿತ; ಮುಖ್ಯಮಂತ್ರಿ ಮತಚಲಾಯಿಸಿದ ಮತಗಟ್ಟೆಯಲ್ಲೇ ಹೀಗೊಂದು ಉಡಾಫೆ?

Lok Sabha Elections 2019: ಕೇತಗಾನಹಳ್ಳಿ ಸ್ವತಃ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮತ ಚಲಾಯಿಸುವ ಮತಗಟ್ಟೆ. ಬೆಳಗ್ಗೆ 7.45ರ ರ ಸುಮಾರಿಗೆ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಮತ ಚಲಾಯಿಸಿ ಹಿಂದಿರುಗಿದ್ದಾರೆ.

news18
Updated:April 18, 2019, 10:34 AM IST
ತಿಂಡಿ​ಗಾಗಿ ಮತದಾನವೇ ಸ್ಥಗಿತ; ಮುಖ್ಯಮಂತ್ರಿ ಮತಚಲಾಯಿಸಿದ ಮತಗಟ್ಟೆಯಲ್ಲೇ ಹೀಗೊಂದು ಉಡಾಫೆ?
ಬೆಳಗ್ಗಿನ ತಿಂಡಿಯಲ್ಲಿ ನಿರತರಾಗಿರುವ ಕೇತಗಾನಹಳ್ಳಿ ಮತಗಟ್ಟೆ ಅಧಿಕಾರಿಗಳು.
news18
Updated: April 18, 2019, 10:34 AM IST
ಮಾಗಡಿ(ಬೆಂ.ಗ್ರಾಮಾಂತರ) : ಮತಗಟ್ಟೆ ಅಧಿಕಾರಿಗಳು ಸಾಮೂಹಿಕವಾಗಿ ತಿಂಡಿಗೆ ತೆರಳಿದ ಪರಿಣಾಮ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾನವನ್ನೇ ಸ್ಥಗಿತಗೊಳಿಸಿದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ ತಾಲೂಕಿನ ಕೇತಗಾನಹಳ್ಳಿ ಇಂತಹ ನಾಚಿಕೆಗೇಡಿನ ಕೆಲಸಕ್ಕೆ ಸಾಕ್ಷಿಯಾಗಿರುವ ಮತಗಟ್ಟೆ.

ಕೇತಗಾನಹಳ್ಳಿ ಸ್ವತಃ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮತ ಚಲಾಯಿಸುವ ಮತಗಟ್ಟೆ. ಬೆಳಗ್ಗೆ 7.45ರ ರ ಸುಮಾರಿಗೆ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಮತ ಚಲಾಯಿಸಿ ಹಿಂದಿರುಗಿದ್ದಾರೆ. ಆದರೆ, ಅತ್ತಕಡೆ ಮುಖ್ಯಮಂತ್ರಿಗಳು ಮತಚಲಾಯಿಸಿ ಹಿಂದಿರುಗುತ್ತಿದ್ದಂತೆ ತಕ್ಷಣ ಇತ್ತಕಡೆ ಚುನಾವಣಾ ಅಧಿಕಾರಿಗಳು ಬೆಳಗ್ಗಿನ ತಿಂಡಿಗೆ ಸಾಮೂಹಿಕವಾಗಿ ತೆರಳಿದ್ದಾರೆ.

ಇದನ್ನೂ ಓದಿ : ಎರಡನೇ ಹಂತದ ಚುನಾವಣೆ: 12 ರಾಜ್ಯ; 95 ಲೋಕಸಭೆ ಕ್ಷೇತ್ರಗಳಲ್ಲಿ ಇವತ್ತು ಮತದಾನ

ಪರಿಣಾಮ ಅರ್ಧಗಂಟೆಗೂ ಹೆಚ್ಚಿನ ಕಾಲ ಮತದಾರರು ಮತಗಟ್ಟೆಯ ಹೊರಗೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿದೆ. ಅಲ್ಲದೆ ಹಲವಾರು ಜನ ಮತ ಚಲಾಯಿಸದೆ ಮನೆಗೆ ಹಿಂದಿರುಗಿದ್ದಾರೆ. ಈ ಕುರಿತು ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಮತಗಟ್ಟೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : lok sabha elections 2019: ಒಡಿಶಾದಲ್ಲಿ ನಕ್ಸಲರ ಅಟ್ಟಹಾಸ; ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ

 
Loading...

First published:April 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...