• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Transgenders: ಜವಾಬ್ದಾರಿ ಮರೆಯದ ಮಂಗಳಮುಖಿಯರು; ರಾಜ್ಯದೆಲ್ಲೆಡೆ ಟ್ರಾನ್ಸ್‌ಜೆಂಡರ್‌ಗಳಿಂದ ಮತದಾನ

Transgenders: ಜವಾಬ್ದಾರಿ ಮರೆಯದ ಮಂಗಳಮುಖಿಯರು; ರಾಜ್ಯದೆಲ್ಲೆಡೆ ಟ್ರಾನ್ಸ್‌ಜೆಂಡರ್‌ಗಳಿಂದ ಮತದಾನ

ಲೈಂಗಿಕ ಅಲ್ಪಸಂಖ್ಯಾತರಿಂದ ಮತದಾನ

ಲೈಂಗಿಕ ಅಲ್ಪಸಂಖ್ಯಾತರಿಂದ ಮತದಾನ

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲೂ ಕೂಡ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿದ್ದು, ರಾಜ್ಯದ ವಿವಿಧ ಭಾಗಗಲ್ಲಿ ಸ್ವಯಂಪ್ರೇರಿತವಾಗಿ ಟ್ರಾನ್ಸ್‌ಜೆಂಡರ್‌ ಸಮುದಾಯದ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

 • Share this:

ನೆಲಮಂಗಲ: ಮತದಾನದ ಮಹತ್ವದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಮತದಾನದ (Karnataka Polls) ಪ್ರಮಾಣವೂ ಹೆಚ್ಚುತ್ತಿದೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲೂ (Transgender Community) ಕೂಡ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿದ್ದು, ರಾಜ್ಯದ ವಿವಿಧ ಭಾಗಗಲ್ಲಿ ಸ್ವಯಂಪ್ರೇರಿತವಾಗಿ ಟ್ರಾನ್ಸ್‌ಜೆಂಡರ್‌ ಸಮುದಾಯದ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.


ನೆಲಮಂಗಲ ನಗರದ ಮತಗಟ್ಟೆ ಸಂಖ್ಯೆ 175ರಲ್ಲಿ ಸುಮಾರು 20 ಜನ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನರು ಮತದಾನ ಮಾಡಿದ್ದು, ಎಲ್ಲರೂ ಖುಷಿಯಿಂದ ತಮ್ಮ ಹಕ್ಕು ಚಲಾಯಿಸಿ ಸೆಲ್ಫಿ ಜೊತೆಗೆ ಫೋಸ್ ನೀಡಿದ್ದಾರೆ. ಅಲ್ಲದೇ ಮತದಾನ ಮಾಡದೆ ತಪ್ಪಿಸಿಕೊಳ್ಳುವ ಜನರ ಮಧ್ಯೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನರು ಮತದಾನ ಮಾಡುವ ಮೂಲಕಮಾದರಿಯಾಗಿ ನಿಂತಿದ್ದಾರೆ.


ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ - ಗ್ರೀನ್​ ಕಾರ್ಪೆಟ್​ ಹಾಸಿ ಖರ್ಗೆಗೆ ಸ್ವಾಗತ


'ಮತದಾನ ಮಾಡದವರು ವೇಸ್ಟ್'


ತನ್ನ ಹಕ್ಕು ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಾನ್ಸ್‌ಜೆಂಡರ್ ಸಮುದಾಯದ ಪ್ರತಿನಿಧಿ ಮಾಧುರಿ, ನಾವು ನಮ್ಮ ಹಕ್ಕು ಚಲಾವಣೆ ಮಾಡಿದ್ದೇವೆ. ಎಲ್ಲರೂ ಮತ ಚಲಾವಣೆ ಮಾಡಬೇಕು ಎಂದರು. ಅಲ್ಲದೇ, ಯಾವುದೇ ಸರ್ಕಾರಗಳು ಬಂದರೂ ನಮ್ಮನ್ನ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಮಾಧುರಿ, ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಸ್ಥಾನ ಮಾನ ನೀಡಬೇಕು. ಸರ್ಕಾರ ಈಗ ನೀಡಿರುವ ಅವಕಾಶವನ್ನ ಮತ್ತಷ್ಟು ಹೆಚ್ಚಿಸಬೇಕು. ಮತದಾನ ಮಾಡದವರು ವೇಸ್ಟ್, ನಮ್ಮ ದೇಶದಲ್ಲಿ ಇರಬಾರದು ಎಂದು ಹೇಳಿದರು.
ಇತ್ತ ದಾವಣಗೆರೆ ಜಿಲ್ಲೆಯ ಹರಿಹರದ ಬೇತೂರು ಗ್ರಾಮದಲ್ಲಿ ಕೂಡ ಟ್ರಾನ್ಸ್‌ಜೆಂಡರ್‌ ಮಹಿಳೆಯರು ಮತದಾನ ಮಾಡಿ ತಮ್ಮ ಜವಾಬ್ದಾರಿಯನ್ನು ಮೆರೆದರು.


ಚುನಾವಣಾ ರಾಯಭಾರಿ ಮಂಜಮ್ಮ ಜೋಗತಿ ಮತದಾನ


ವಿಜಯನಗರ: ರಾಜ್ಯ ವಿಧಾನಸಭಾ ಚುನಾವಣೆಯ ರಾಯಭಾರಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರು ಮತದಾನ ಮಾಡಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ತಮ್ಮ ಹಕ್ಕು ಚಲಾಯಿಸಿದ ಮಾತಾ ಮಂಜಮ್ಮ ಜೋಗತಿ ಅವರು ಎಲ್ಲರೂ ಮತದಾನ ಮಾಡುವಂತೆ ವಿನಂತಿ ಮಾಡಿದರು.


ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಮಧುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರನ್ನು ಆಕರ್ಷಿಸಿದ ಮತಗಟ್ಟೆ!


ಈ ಬಾರಿ ರಾಜ್ಯ ಚುನಾವಣಾ ಆಯೋಗದ ರಾಯಭಾರಿ ಆಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತ ಮಂಜಮ್ಮ‌ ಜೋಗತಿಯವರು ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಅವರು, ಚುನಾವಣೆ ಅಂದ್ರೆ ಭಾರತ ದೇಶದ ಬಹುದೊಡ್ಡ ಹಬ್ಬ ಅಂತ ನಾನು ಭಾವಿಸಿದ್ದೇನೆ. ಪ್ರತಿಯೊಬ್ಬರೂ ಮತದಾನ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ ಎಂದು ಹೇಳಿದರು.


top videos  ಅಲ್ಲದೇ, ಹೆಚ್ಚಿನ‌ ಸಂಖ್ಯೆಯಲ್ಲಿ ನಮ್ಮ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನರು ಚುನಾವಣೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದ ಮಂಜಮ್ಮ‌ ಜೋಗತಿ ಅವರು, ರಾಜ್ಯದ ಪ್ರತಿಯೊಬ್ಬ ಯುವಕ ಯುವತಿಯರು ಸೂಕ್ತವಾದ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಕೇಳಿಕೊಂಡರು.

  First published: