ಚಿಕ್ಕಮಗಳೂರು: ಚುನಾವಣೆಗೆ (Karnataka Assembly Election 2023) ದಿನಗಣನೇ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ರಾಜಕೀಯ ನಾಯಕರು (Political Leaders) ಜನರ ಹತ್ತಿರ ಹೋಗುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಜನ ನಾಯಕರಿಗೆ ಮತದಾರರ (Voters) ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಆಭಿವೃದ್ಧಿ ಕಾಣದ ಗ್ರಾಮದ ಗ್ರಾಮಸ್ಥರು ಚುನಾವಣೆಗೆ ಬಹಿಷ್ಕಾರ ಹಾಕುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ (BJP MLA MP Kumaraswamy) ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂಬ ಕೂಗು ಕೇಳಿ ಬರುತ್ತಿದೆ. ಈ ಹಿನ್ನೆಲೆ ಎಂ.ಪಿ.ಕುಮಾರಸ್ವಾಮಿ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದು, ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದಾರೆ. ಮತದಾರರೊಬ್ಬರು ಶಾಸಕರಿಗೆ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ (Video Viral) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೂಡಿಗೆರೆ ತಾಲೂಕಿನ ಕಣಚೂರು ಗ್ರಾಮಕ್ಕೆ ಶಾಸಕ ಎಂಪಿ ಕುಮಾರಸ್ವಾಮಿ ಭೇಟಿ ನೀಡಿದ್ದರು.ಈ ವೇಳೆ ಮತದಾರರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. 94 ಸಿನಲ್ಲಿ ಎಷ್ಟು ಸೈಟ್ ಮಾಡಿಕೊಟ್ಟಿದ್ದೀರಾ ನೀವು? ಫೀಸ್ ಕಟ್ಟೋಕಿರೋದು 2800-3000, ಆದ್ರೆ, ಆರ್.ಐ, ತಹಶೀಲ್ದಾರ್ 30 ಸಾವಿರ ಕೇಳಿದ್ರು. ಒಬ್ಬೊಬ್ಬರಿಂದ 5 ಸಾವಿರ ಕೊಡಿಸುತ್ತೇನೆ, ಎಲ್ಲರೂ ಬಡವರು, ಪಾಪದ ಜನ ಎಂದಿದ್ದೇವೆ. ಎಲ್ಲರನ್ನೂ ಕರೆದುಕೊಂಡು ನಿಮ್ಮ ಮನೆಗೆ ಬಂದಿದ್ದೆ, ನೀವು ಮಾಡಿದ್ದು ಏನು ಅಂತ ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಕೈನಲ್ಲಿ ಆಗಲಿಲ್ಲ
ತಹಶೀಲ್ದಾರ್ ನಿಮ್ಮ ಪಕ್ಕದಲ್ಲೇ ಕೂತು ಇದು ಆಗಲ್ಲ ಅಂದ್ರು. ಏಕೆ ಅಂತ ಕೇಳಬೇಕು ಅಲ್ಲವೇ ನೀವು? ನಮ್ಮ ಅಕ್ಕ-ಪಕ್ಕದ್ದು ಆಗಿದೆ, ನಮ್ಮದು ಆಗಲಿಲ್ಲ, ನೀವು ರಸ್ತೆಯನ್ನೂ ಮಾಡಲಿಲ್ಲ. ನಾವು ಓಡಾಡಿದ್ದು ಬಿಜೆಪಿಗೆ, ನೀವು ಶಾಸಕರಾದ್ರು ನಿಮ್ಮ ಕೈನಲ್ಲಿ ಆಗ್ಲಿಲ್ಲ ಎಂದು ಮತದಾರ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: MP Kumaraswamy: ಜೀಪ್ ಹತ್ತುವಾಗ ಚೆನ್ನಾಗಿದ್ದ ಶರ್ಟ್, ಇಳಿಯುವಾಗ ಹರಿದಿದ್ದು ಹೇಗೆ? HDK ಪ್ರಶ್ನೆ
ಶಾಸಕರಾಗಿ ನೀವು ಮಾಡಿದ್ದೇನು?
ನಿಮ್ಮ ಬಳಿ ಐದಾರು ಸರಿ ಬಂದರೂ ಆಗ್ಲಿಲ್ಲ, ಜೆಡಿಎಸ್ ನವರು ಒಂದೇ ಸಲಕ್ಕೆ ಕೆಲಸ ಮಾಡಿಸಿಕೊಟ್ಟರು. ನಮ್ಮ ಶಾಸಕರು ಎಂದು ನಿಮ್ಮ ಮನೆಗೆ ಕರೆದುಕೊಂಡ ಬಂದೆ, ನೀವು ಮಾಡಿದ್ದು ಏನು ಸರ್ ಎಂದು ಪ್ರಶ್ನೆ ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ