HOME » NEWS » State » VOTERS ATTACKING ON DISQUALIFIED MLAS WHILE THEY CAMPAIGN FOR KARNATAKA BY ELECTION RMD

ನಮ್ಮನ್ನು ಕೇಳದೆ ರಾಜೀನಾಮೆ ನೀಡಿದ್ದೇಕೆ?; ಉಪಚುನಾವಣಾ ಪ್ರಚಾರದ ವೇಳೆ ಮತದಾರರ ಪ್ರಶ್ನೆಗೆ ಕಂಗಾಲಾದ ಅನರ್ಹರು

ಚುನಾವಣೆ ಪ್ರಚಾರದ ವೇಳೆ ಅನೇಕ ಅನರ್ಹ ಶಾಸಕರಿಗೆ ಇದೇ ರೀತಿಯ ಅನುಭವ ಆಗಿದೆ. ಮತದಾರರು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಅನರ್ಹ ಶಾಸಕರು ಪೇಚಿಗೆ ಸಿಲುಕುತ್ತಿದ್ದಾರೆ. 

Rajesh Duggumane | news18-kannada
Updated:November 25, 2019, 8:08 AM IST
ನಮ್ಮನ್ನು ಕೇಳದೆ ರಾಜೀನಾಮೆ ನೀಡಿದ್ದೇಕೆ?; ಉಪಚುನಾವಣಾ ಪ್ರಚಾರದ ವೇಳೆ ಮತದಾರರ ಪ್ರಶ್ನೆಗೆ ಕಂಗಾಲಾದ ಅನರ್ಹರು
ಅನರ್ಹ ಶಾಸಕರು
  • Share this:
ಬೆಂಗಳೂರು (ನ.25): ಕರ್ನಾಟಕ ವಿಧಾನಸಭೆ ಉಪಚುನಾವಣೆ ರಂಗೇರುತ್ತಿದೆ. ಬಹುತೇಕ ಅನರ್ಹರು ಉಪಚುನಾವಣೆ ಕಣದಲ್ಲಿದ್ದಾರೆ. ಹಳ್ಳಿ ಹಳ್ಳಿಗೆ ತೆರಳಿ ಪ್ರಚಾರವನ್ನೂ ಮಾಡುತ್ತಿದ್ದಾರೆ. ಆದರೆ, ಚುನಾವಣೆ ವೇಳೆ ಎದುರಾಗುತ್ತಿರುವ ಪ್ರಶ್ನೆಗಳಿಗೆ ಅನರ್ಹರು ಉತ್ತರಿಸಲೂ ಆಗದೇ, ಬಿಡಲೂ ಆಗದೇ ಇರುವ ಸ್ಥಿತಿ ತಲುಪಿದ್ದಾರೆ.

‘ಕಾಂಗ್ರೆಸ್​ ಸರ್ಕಾರದಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ರಾಜೀನಾಮೆ ಕೊಟ್ಟಿದ್ದೇವೆ. ಬಿಜೆಪಿಯವರು ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ’ ಎಂದು ಅನರ್ಹ ಶಾಸಕರು ಪ್ರಚಾರದ ವೇಳೆ ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ, ಕೆಲ ಮತದಾರರು ಮಾತ್ರ ಅನರ್ಹರ ವಿರುದ್ಧ ಎಡಬಿಡದೆ ವಾಗ್ದಾಳಿ ಮುಂದುವರಿಸಿದ್ದಾರೆ.

ಈಗ, ಅನರ್ಹ ಶಾಸಕ ಎಚ್​​. ವಿಶ್ವನಾಥ್​ಗೂ ಇದೇ ರೀತಿ ಆಗಿದೆ. ಜೆಡಿಎಸ್​ ಹಿರಿಯ ನಾಯಕರಾಗಿದ್ದ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಹುಣಸೂರು ಉಪಚುನಾವಣೆಯಲ್ಲಿ ಇವರು ಸ್ಪರ್ಧೆ ಮಾಡಿದ್ದಾರೆ. ಪ್ರಚಾರಕ್ಕೆ ತೆರಳಿದ ವೇಳೆ ಮತದಾರರು ಇವರನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಹಣ ಪಡೆದು ಅನರ್ಹರಿಗೆ ಕೊಟ್ಟಿದ್ದಾರೆ; ಎಚ್​​ಡಿಕೆ ಹೊಸ ಬಾಂಬ್​​

ಶ್ರವಣನಹಳ್ಳಿಯಲ್ಲಿ ವಿಶ್ವನಾಥ್​ ಪ್ರಚಾರಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ. “ನಿಮ್ಮನ್ನು ಗೆಲ್ಲಿಸಿದ್ದಕ್ಕೆ ರೈತರಿಗೆ ಏನು ಮಾಡಿದ್ದೀರಿ? ನಮ್ಮನ್ನ ಕೇಳದೆ ಏಕೆ ರಾಜಿನಾಮೆ ನೀಡಿದಿರಿ?,” ಎಂಬಿತ್ಯಾದಿ ಪ್ರಶ್ನೆಗಳನ್ನು ಮತದಾರರು ವಿಶ್ವನಾಥ್​ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮತದಾರರನ್ನು ಅವರು ಸಮಾಧಾನ ಮಾಡಲು ತೆರಳಿದರಾದರೂ ಯಾವುದೇ ಪ್ರಯೋಜನ ಆಗಿಲ್ಲ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು. ಮೊನ್ನೆ ದೊಡ್ಡಹೆಜ್ಜೂರು ಗ್ರಾಮದಲ್ಲಿ ವಿಶ್ವನಾಥ್​ಗೆ ಇದೇ ರೀತಿಯ ಅನುಭವ ಆಗಿತ್ತು.

ಇನ್ನು, ಚುನಾವಣೆ ಪ್ರಚಾರದ ವೇಳೆ ಅನೇಕ ಅನರ್ಹ ಶಾಸಕರಿಗೆ ಇದೇ ರೀತಿಯ ಅನುಭವ ಆಗಿದೆ. ಮತದಾರರು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಅನರ್ಹ ಶಾಸಕರು ಪೇಚಿಗೆ ಸಿಲುಕುತ್ತಿದ್ದಾರೆ.
First published: November 25, 2019, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading