• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • By Election: ಮಧ್ಯಾಹ್ನ 3 ಗಂಟೆವರೆಗೆ ಹಾನಗಲ್ ನಲ್ಲಿ ಶೇ.62.72, ಸಿಂದಗಿಯಲ್ಲಿ ಶೇ.51.60 ರಷ್ಟು ಮತದಾನ

By Election: ಮಧ್ಯಾಹ್ನ 3 ಗಂಟೆವರೆಗೆ ಹಾನಗಲ್ ನಲ್ಲಿ ಶೇ.62.72, ಸಿಂದಗಿಯಲ್ಲಿ ಶೇ.51.60 ರಷ್ಟು ಮತದಾನ

ಮತಗಟ್ಟೆ

ಮತಗಟ್ಟೆ

ಸಿಂದಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಲಮೇಲ್ ಪಟ್ಟಣದ ಬೂತ್ ನಂಬರ್ 21ರಲ್ಲಿ ಗಲಾಟೆ ನಡೆಯಿತು. ಪೋಲಿಂಗ್ ಅಧಿಕಾರಿ ಕುಂಬಾರ್ ಎಂಬವರು ಬಿಜೆಪಿಗೆ ಮತ ಹಾಕುವಂತೆ ನಿರ್ದೇಶನ ನೀಡುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ್ದರು.

  • Share this:

ಹಾವೇರಿ/ವಿಜಯಪುರ: ಹಾನಗಲ್ (Hangal) ವಿಧಾನಸಭಾ ಕ್ಷೇತ್ರ (Assembly By Election)ದಲ್ಲಿ ಮತದಾನ ಚುರುಕುಗೊಂಡಿದ್ದು, ಮಧ್ಯಾಹ್ನ 3 ಗಂಟೆವರೆಗೆ ಶೇ.ರಷ್ಟು ಮತದಾನವಾಗಿದೆ. ಮಧ್ಯಾಹ್ನ 1 ಗಂಟೆಗೆ ಶೇ.44.59ರಷ್ಟು ಮತದಾನವಾಗಿತ್ತು. ಒಂದು ಗಂಟೆಯ ನಂತರ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ವೇಗ ಪಡೆದುಕೊಂಡಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಇನ್ನು ಸಿಂದಗಿ(Sindagi By Election)ಯಲ್ಲಿ  ಶೇ.51.60 ರಷ್ಟು ಸಹ ಮತದಾನವಾಗುತ್ತಿದೆ. ಹಾನಗಲ್ ಕ್ಷೇತ್ರದ ಮತಗಟ್ಟೆಗಳ ಮುಂದೆ ಜನರ ಸಾಲುಗಳು ಕಾಣ ಬಹುದಾಗಿದೆ.


ಶಾಸಕ ಚವ್ಹಾಣ್ ಮತದಾನ


ಸಿಂದಗಿ ಕ್ಷೇತ್ರದ ತಾಂಬಾ ಗ್ರಾಮದ ನಾರಾಯಣ ಹಟ್ಟಿಯ ಮತಗಟ್ಟೆ ಸಂಖ್ಯೆ 93 ರಲ್ಲಿ ನಾಗಠಾಣಾದ ಶಾಸಕ ಡಾ.ದೇವಾನಂದ್ ಚವ್ಹಾಣ್ (MLA Devanand Chavan) ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಮತದಾನದ ಬಳಿಕ ಮಾತನಾಡಿದ ಶಾಸಕರು, ಗ್ರಾಮದ ಜನರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಿಕೊಂಡರು.


ಆಲಮೇಲ್ ನಲ್ಲಿ ಗಲಾಟೆ


ಸಿಂದಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಲಮೇಲ್ ಪಟ್ಟಣದ ಬೂತ್ ನಂಬರ್ 21ರಲ್ಲಿ ಗಲಾಟೆ ನಡೆಯಿತು. ಪೋಲಿಂಗ್ ಅಧಿಕಾರಿ ಕುಂಬಾರ್ ಎಂಬವರು ಬಿಜೆಪಿಗೆ ಮತ ಹಾಕುವಂತೆ ನಿರ್ದೇಶನ ನೀಡುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಈ ವೇಳೆ ಸ್ಪಷ್ಟನೆ ನೀಡಲು ಬಂದ ಚುನಾವಣಾಧಿಕಾರಿ ವಿರುದ್ಧವೇ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದ್ದರು. ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.


ಇದನ್ನೂ ಓದಿ:  By Election; ಎರಡೂ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಮತದಾನ; ಅಲ್ಲಲ್ಲಿ  ಕಾರ್ಯಕರ್ತರ ನಡುವೆ ಗಲಾಟೆ


ಅಶೋಕ್ ಮನಗೂಳಿ ಮತದಾನ


ಸಿಂದಗಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ, ಮಲಘಾಣ ಗ್ರಾಮದ ಮತಗಟ್ಟೆ 106ರಲ್ಲಿ ಪತ್ನಿ ನಾಗರತ್ನ ಜೊತೆ ಆಗಮಿಸಿ ಮತದಾನ ಮಾಡಿದರು. ಸಾಮಾನ್ಯ ಜನರ ಜೊತೆ ಸರತಿ ಸಾಲಿನಲ್ಲಿ ನಿಲ್ಲುವ ಬದಲು ವಿವಿಐಪಿಯಂತೆ ಬಂದು ಮತದಾನ ಮಾಡಿದ್ದರಿಂದ ಸರತಿಯಲ್ಲಿ ನಿಂತಿದ್ದ ಮತದಾರರು ಕಾಯುವಂತಾಯ್ತು. ಅಶೋಕ್ ಮನಗೂಳಿ ಮತದಾನ ಮಾಡುವ ವೇಳೆ ಹೊರಗಡೆ ಮತದಾರರು ಕಾದು ನಿಂತಿದ್ದರು. ಮತದಾನದ ಬಳಿಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.


ಒಂದೆರಡು ಸಣ್ಣ ಗಲಾಟೆ ಹೊರತುಪಡಿಸಿ ಇನ್ನುಳಿದಂತೆ ಸಿಂದಗಿ ಮತ್ತು ಹಾನಗಲ್ ನಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಮತಕ್ಷೇತ್ರದ ಚಾಂದಕವಡೆ ಗ್ರಾಮದ ಮತಗಟ್ಟೆ142ರಲ್ಲಿ 90ವರ್ಷದ ವೃದ್ಧೆ ಗುರುಬಾಯಿ ಉಡುಚಣ ಅವರ ಮಗ ಹಾಗೂ ಮೊಮ್ಮಗ ಬೈಕನಲ್ಲಿ ಕರೆದುಕೊಂಡು ಬಂದ ಮತ ಚಲಾಯಿಸಲು ಸಹಾಯ ಮಾಡಿದರು.


ಇದನ್ನೂ ಓದಿ:  By Election; ಸಿಂದಗಿ, ಹಾನಗಲ್ ಉಪಚುನಾವಣೆ; ಎರಡೂ ಕ್ಷೇತ್ರಗಳಲ್ಲಿ ಮತದಾನ ಆರಂಭ: ಎರಡೂ ಕ್ಷೇತ್ರಗಳಲ್ಲಿ ಮತಗಾರರ ಸಂಖ್ಯೆ ಎಷ್ಟು?


ಅಭ್ಯರ್ಥಿಗಳಿಂದ ಮತದಾನ


ಸಿಂದಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು, ಕುಟುಂಬ ಸಮೇತರಾಗಿ ಹನುಮಾನ್ ಮತ್ತು ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಮಾತನಾಡಿದ ರಮೇಶ್ ಭೂಸನೂರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಚುನಾವಣೆಯಲ್ಲಿ ನಾನು ಸೋತಿದಕ್ಕೆ ಜನರು ಈ ಬಾರಿ ನನ್ನ ಮೇಲೆ ಅನುಕಂಪ ತೋರಿಸಿ ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್ ನವರ ಅನುಕಂಪ ಈ ಬಾರಿ ವರ್ಕೌಟ್ ಆಗೋದಿಲ್ಲ. ಕಳೆದ ಬಾರಿಯೆ ಎಂ ಸಿ ಮನಗೋಳಿಯವರು ಕೊನೆ ಚುನಾವಣೆ ಅಂತಾ ಅನುಕಂಪ ಗಿಟ್ಟಿಸಿಕೊಂಡು ಆಯ್ಕೆಯಾಗಿದ್ದರು. ಆದ್ರೆ ಈ ಬಾರಿ ಜನ ಬಿಜೆಪಿ ಪರ ಒಲವು ತೋರಿದ್ದಾರೆ ಗೆದ್ದು ಬಂದ ಮೇಲೆ ಕ್ಷೇತ್ರದ ಅಭಿವೃದ್ಧಿಯೆ ನನ್ನ ಮೊದಲ ಗುರಿ ಎಂದು ಹೇಳಿದರು.


ತದನಂತರ ಕುಟುಂಬ ಸಮೇತರಾಗಿ ಆಗಮಿಸಿದ ರಮೇಶ್ ಭೂಸನೂರು ಸಿಂದಗಿ ತಾಲ್ಲೂಕಿನ ದೇವಣಗಾಂವ್ ಗ್ರಾಮದ ಸರ್ಕಾರಿ ಶಾಲೆಯ ವಾರ್ಡ್ ನಂಬರ್ 9 ರಲ್ಲಿ ಮತದಾನ ಮಾಡಿದರು. ಇನ್ನು ಜೆಡಿಎಸ್ ಅಭ್ಯರ್ಥಿ ನಾಜೀಯಾ ಅಂಗಡಿ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಗಣಿಗಾರದ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.


ಎರಡೂ ಕ್ಷೇತ್ರದ ಅಭ್ಯರ್ಥಿಗಳು


ಸಿಂದಗಿಯಲ್ಲಿ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭುಸನೂರು ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಕಣದಲ್ಲಿದ್ದಾರೆ. ಇತ್ತ ಹಾನಗಲ್ ನಲ್ಲಿ ಕಾಂಗ್ರೆಸ್ ನಿಂದ  ಶ್ರೀನಿವಾಸ್ ವಿ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನ್  ಮತ್ತು ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪರ್ಧೆಯಲ್ಲಿದ್ದಾರೆ.

Published by:Mahmadrafik K
First published: