ಬೆಂಗಳೂರು (ನ.27): ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆ ಅಕ್ರಮ (Voter ID Scam) ಪ್ರಕರಣದ ತನಿಖೆ ಚುರುಕುಗೊಂಡಿದೆ. ಬಿಬಿಎಂಪಿ (BBMP) ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ವಿವಿಧ ತನಿಖಾ ತಂಡಗಳು ನೋಟಿಸ್ ನೀಡಿವೆ. ಪದೇ ಪದೇ ವಿಚಾರಣೆ ನಡೆಸೋದ್ರಿಂದ ಮಾನಸಿಕ ಹಿಂಸೆ (Mental Violence) ಆಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು (Officers) ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಬಿಬಿಎಂಪಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರದಿದೆ. ವಿಚಾರಣೆಗಾಗಿ ಹಾಜರಾಗುವಂತೆ ವಿವಿಧ ಠಾಣೆಗಳಿಂದ ನೋಟಿಸ್ (Notice) ನೀಡಲಾಗುತ್ತಿದೆ.
ಮಾನಸಿಕ ಚಿತ್ರಹಿಂಸೆ ನೀಡ್ತಿದ್ದಾರೆ
ಏಕಕಾಲದಲ್ಲಿ ವಿಚಾರಣೆ ಹಾಜರಾಗುವಂತೆ ನೋಟಿಸ್ ಬರುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಹಾಗೇ ತನಿಖೆ ನೆಪದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಮಾನವ ಹಕ್ಕು ಉಲ್ಲಂಘನೆಯಾಗದ ರೀತಿ ಒಂದೇ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು ಡಿಸಿ, ಬಿಬಿಎಂಪಿ ವಿಶೇಷ ಆಯುಕ್ತರು ಸಸ್ಪೆಂಡ್
ಬೆಂಗಳೂರು (ನ.25): ಮತದಾರರ ಐಡಿ ಕಾರ್ಡ್ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ (Central Election Commission) ಮಧ್ಯೆ ಪ್ರವೇಶ ಮಾಡಿದ್ದು, ಕೇಸ್ ಸಂಬಂಧ ಬೆಂಗಳೂರು ಡಿಸಿ K.ಶ್ರೀನಿವಾಸ್ ತಲೆದಂಡವಾಗಿದೆ. ಶ್ರೀನಿವಾಸ್ (Srinivas) ಜೊತೆ BBMP ADEO ರಂಗಪ್ಪ ಅವರನ್ನು ಸಹ ಸಸ್ಪೆಂಡ್ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಮಹತ್ವದ ಕ್ರಮ ಕೈಗೊಂಡಿದೆ. 3 ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ (Voters List) ಪರಿಷ್ಕರಣೆ ಮಾಡುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ಡಿಸೆಂಬರ್ 24 ರವರೆಗೆ ಡೆಡ್ಲೈನ್
ಮತದಾರರ ಡೇಟಾ ಕಳ್ಳತನದ ಹಗರಣ ಏನು?
2018 ರಲ್ಲಿ, ಬೆಂಗಳೂರಿನ ನಾಗರಿಕ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತದಾರರ ಜಾಗೃತಿಗಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಸಕ್ರಿಯ ಪಾಲುದಾರಿಕೆ (SVEEP) ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, NGO ಗೆ ಅನುಮತಿ ನೀಡಿದೆ. ಹೀಗಿರುವಾಗ ಅವರು 2018 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗಿತ್ತು. ಹೀಗಿರುವಾಗ ತಾವು ಈ ಸಮೀಕ್ಷೆಯನ್ನು ಉಚಿತವಾಗಿ ನಡೆಸುವುದಾಗಿ ಎನ್ಜಿಒ ಹೇಳಿಕೊಂಡಿತ್ತು.
ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ
ಆದರೆ ನಂತರ, ನಿಯೋಜಿತ ಕ್ಷೇತ್ರ ಕಾರ್ಯಕರ್ತರು ಜಾತಿ, ವಯಸ್ಸು, ಲಿಂಗ, ಉದ್ಯೋಗ, ಶಿಕ್ಷಣ ವಿವರಗಳು, ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳನ್ನು ಒಳಗೊಂಡಂತೆ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದರು. ಸಂಸ್ಥೆಯು ಅಕ್ರಮವಾಗಿ ಸಂಗ್ರಹಿಸಿದ ಈ ಡೇಟಾ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು INC ಆರೋಪಿಸಿದೆ.
ಇದನ್ನೂ ಓದಿ: Border Dispute: 'ಮಹಾ' ಪುಂಡಾಟದ ವಿರುದ್ಧ ಕನ್ನಡಿಗರ ಆಕ್ರೋಶ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಬಸ್ಗೆ ಕಪ್ಪು ಮಸಿ!
ನಗರದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರಿಗೆ ಅನುಕೂಲ ಮಾಡಿಕೊಡಲು ಹಲವು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅದು ಹೇಳಿದೆ. ಆದರೆ ಇತ್ತ ಬಿಬಿಎಂಪಿ ಒಬ್ಬ ವ್ಯಕ್ತಿ ಅನೇಕ ಸ್ಥಳಗಳಲ್ಲಿ ಮತದಾನ ಮಾಡದಂತೆ ತಡೆಯಲು 6.73 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ