Chitradurga: ಮತದಾರರ ಗುರುತಿನ ಚೀಟಿಗೆ ಅಧಾರ್ ಜೋಡಣೆ! ಇಲ್ಲಿದೆ ಅಗತ್ಯ ಮಾಹಿತಿ

ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ  ಮತದಾರ ಗುರುತಿನ ಚೀಟಿಗೆ ಆದಾರ್ ಜೋಡಣೆ ಮಾಡಲು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಗೌಪ್ಯತೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಚಿತ್ರದುರ್ಗ(ಆ.02): ಚುನಾವಣೆಗಳಲ್ಲಿ (Election) ಮತದಾರರ ಗುರುತಿನ ಚೀಟಿ (Identity News), ನೊಂದಣಿ (Register) ದುರುಪಯೋಗ ತಡೆಯೋಕೆ, ಮತದಾರರ ನೋಂದಣಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿತ್ತಿ ಪತ್ರ ಬಿಡುಗಡೆ ಮಾಡಿ  ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ  ಮತದಾರ ಗುರುತಿನ ಚೀಟಿಗೆ ಆದಾರ್ ಜೋಡಣೆ ಮಾಡಲು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಗೌಪ್ಯತೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಮತದಾರರ ಗುರುತಿನ ಚೀಟಿಗೆ ಆಧಾರ್  (Aadhar) ಸಂಖ್ಯೆ ಜೋಡಣೆ ಮಾಡುವ ವಿಷಯಕ್ಕೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಚುನಾವಣಾ ಆಯೋಗದ (Election Commission) ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯಾಲಯ ಸಚಿವಾಲಯ ಪ್ರಜಾ ಪ್ರತಿನಿಧಿ ಕಾಯ್ದೆ-1950 ಮತ್ತು 51ರ ಕಾಯ್ದೆಗಳಿಗೆ, ಚುನಾವಣಾ ಕಾನೂನುಗಳ ತಿದ್ದುಪಡಿ ಕಾಯ್ದೆ-2021ರ ಅನ್ವಯ ಬದಲಾವಣೆ ತಂದಿದೆ. ಆಗಸ್ಟ್ 1 ರಿಂದ ಈ ತಿದ್ದುಪಡಿ ಅಂಶಗಳು ಜಾರಿಗೆ ಬರಲಿವೆ.

ತಿದ್ದುಪಡಿ ಕಾಯ್ದೆಯ ಅನ್ವಯ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲು ನಮೂನೆ-6, ಮತದಾರರ ಪಟ್ಟಿಯ ದೃಢೀಕರಣದ ಉದ್ದೇಶಕ್ಕಾಗಿ ಆಧಾರ್ ಸಂಖ್ಯೆಯ ಮಾಹಿತಿ ಪತ್ರ ನಮೂನೆ-6ಬಿ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಅಥವಾ ಹೆಸರು ತೆಗೆದು ಹಾಕಲು ಮತದಾರರ ಅರ್ಜಿ ನಮೂನೆ-7, ಮತದಾರ ಗುರುತಿನ ಚೀಟಿ ಅಥವಾ ಪಟ್ಟಿಯಲ್ಲಿ ತಿದ್ದುಪಡಿ ತರಲು ನಮೂನೆ-8ರ ಪರಿಷ್ಕೃತ ನಮೂನೆ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Anekal: ಮಳೆ ನೀರಿಗೆ ಕೆರೆಯಂತಾದ ಹೈವೇ ಸಬ್ ವೇ​; ಸಾರ್ವಜನಿಕರು ಹೈರಾಣು

ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಬಾರಿ ಅವಕಾಶ

ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಬಾರಿ ಅವಕಾಶವನ್ನು ಕಲ್ಪಿಸಲಾಗಿದೆ. ಜನವರಿ 01, ಏಪ್ರಿಲ್ 01, ಜುಲೈ 01, ಹಾಗೂ ಅಕ್ಟೋಬರ್ 01 ತಾರೀಖಿಗೆ 18 ವರ್ಷ ಪೂರೈಸಿದವರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನೋಂದಾಯಿಸಿಕೊಳ್ಳಬಹುದು. ಸ್ವಯಂ ಪ್ರೇರಿತವಾಗಿ ತಮ್ಮ ಆಧಾರ್ ಸಂಖ್ಯೆ ಜೋಡಣೆಗೆ ಮತಗಟ್ಟೆ ಮಟ್ಟದ ಅಧಿಕಾರಿ(ಬಿ.ಎಲ್.ಓ)ಗಳಿಗೆ ನಮೂನೆ-6ಬಿ ರಲ್ಲಿ ಅರ್ಜಿಸಲ್ಲಿಸಬಹುದು.

ಓಟರ್ ಹೆಲ್ಪ್ಲೈನ್ ಆ್ಯಪ್, ಮೂಲಕ ಸಹ ಅರ್ಜಿ ಸಲ್ಲಿಕೆ

ಇದರ ಹೊರತಾಗಿ ಓಟರ್ ಹೆಲ್ಪ್ಲೈನ್ ಆ್ಯಪ್, ಮೂಲಕ ಸಹ ಅರ್ಜಿ ಸಲ್ಲಿಸಬಹುದು. ಆಧಾರ್ ಸಂಖ್ಯೆ ಇಲ್ಲದಿರುವವರು ಪರ್ಯಾಯ ದಾಖಲೆಗಳಾದ ಎನ್.ಆರ್.ಇ.ಜಿ. ಕಾರ್ಡ, ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರ ಇರುವ ಪಾಸ್ ಬುಕ್, ಕಾರ್ಮಿಕ ಇಲಾಖೆಯ ನೀಡಲಾದ ಆರೋಗ್ಯ ಮಿಮೆ ಸ್ಮಾರ್ಟ್ ಕಾರ್ಡ, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾಡ್, ಪಾಸ್ ಪೋರ್ಟ್, ಪಿಂಚಣಿ ದಾಖಲೆ ಬಳಸಬಹುದು.

ಇದನ್ನೂ ಓದಿ: Rain Effects: ಎರಡು ಎಳೆ ಜೀವ ಬಲಿ ಪಡೆದ ಭಾರೀ ಮಳೆ! ಕೊಲ್ಲಮೊಗು,ಬಾಳುಗೋಡಿನಲ್ಲಿ ಭಾರೀ ನಷ್ಟ

ಎನ್.ಪಿ.ಆರ್ ಅಡಿಯಲ್ಲಿ ನೀಡಿರುವ ಆರ್.ಜಿ.ಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಉದ್ದಿಮೆಗಳು ನೀಡಿದ ಭಾವಚಿತ್ರ ಇರುವ ಗುರುತಿನ ಚೀಟಿ, ಸಂಸತ್, ವಿಧಾನ ಸಭಾ, ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ ಸಲ್ಲಿಸಬಹುದು ಎನ್ನಲಾಗಿದೆ. ಈ ಹಿನ್ನಲೆ ಮತದಾರರ ನೋಂದಣಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
Published by:Divya D
First published: