ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು (KGF Babu) ನಿವಾಸದ ಮೇಲೆ ಎರಡು ದಿನಗಳ ಹಿಂದೆ ಐಟಿ ದಾಳಿ (IT Raid) ನಡೆದಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಸಿಕ್ಕಿವೆ. ಈ ಸಂಬಂಧ ಚುನಾವಣಾ ಅಧಿಕಾರಿಗಳು (Election Officers) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿ ವಿಜಯ್ ಎಸ್ಎಲ್ ನ್ಯಾಯಾಲಯದ ಅನುಮತಿ ಪಡೆದು ದೂರು ದಾಖಲಿಸಿದ್ದಾರೆ. ಯೂಸೂಫ್ ಶರೀಫ್ @ ಕೆಜಿಎಫ್ ಬಾಬು ನಿವಾಸದಲ್ಲಿ ಅಕ್ರಮ ನಡೆಸುವ ಸಲುವಾಗಿ ಮತದಾರ ಗುರುತಿನ ಚೀಟಿ, ಮತದಾರರಿಗೆ ಹಂಚಲು ಸೀರೆ, ಚೆಕ್ ಶೇಖರಿಸಿರುವ ಮಾಹಿತಿಯಾಧರಿಸಿ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದಾಗ ಕೆಜಿಎಫ್ ಬಾಬು ನಿವಾಸದಲ್ಲಿ 26 ಬ್ಯಾಗ್, ನಾಲ್ಕು ಬಾಕ್ಸ್ಗಳಲ್ಲಿ 394 ಸೀರೆಗಳು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತವಾಗಿರುವ 500 ಕರಪತ್ರಗಳು, ವ್ಯಾನ್ ಹುಸೈನ್ ಕಂಪನಿಯ 481 ಸೂಟ್ಗಳು ಪತ್ತೆಯಾಗಿವೆ.
1925 ಚೆಕ್ಗಳು ಪತ್ತೆ
ಒಂದು ಬಾಕ್ಸ್ನಲ್ಲಿ HDFC ಬ್ಯಾಂಕ್ ಖಾತೆಯೊಂದರ 5000 ರೂಪಾಯಿ ಮೌಲ್ಯದ 1925 ಚೆಕ್ಗಳು ಪತ್ತೆಯಾಗಿವೆ. ಈ ಚೆಕ್ಗಳನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ಗುರುತಿನ ಚೀಟಿಯೊಂದಿಗೆ ಅಂಟಿಸಲಾಗಿತ್ತು. ಮತದಾರರನ್ನು ಸೆಳೆಯಲು ಕೆಜಿಎಫ್ ಬಾಬು ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಹಾವೇರಿ: 11 ಕೆಜಿ ಬಂಗಾರ ಹಾಗೂ 74 ಕೆಜಿ ಬೆಳ್ಳಿ ಜಪ್ತಿ
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಚುನಾವಣೆ ಅಕ್ರಮಗಳಿಗೆ ಬ್ರೇಕ್ ಹಾಕಲು ಚುನಾವಣಾ ಅಧಿಕಾರಿಗಳು ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಡುವೆ ಹಾವೇರಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 11 ಕೆಜಿ ಬಂಗಾರ ಹಾಗೂ 74 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: Gift Politics: ವಾಹನದೊಳಗಿತ್ತು ₹6.93 ಕೋಟಿ ಮೌಲ್ಯದ 11 ಕೆಜಿ ಚಿನ್ನ, 74 ಕೆಜಿ ಬೆಳ್ಳಿ! ಅತ್ತ 60 ಲಕ್ಷ ನೋಟ್ ಸೀಜ್!
ಹಾವೇರಿ ಚೆಕ್ ಪೋಸ್ಟ್ ನಲ್ಲಿ ಅಪಾರ ಪ್ರಮಾಣದ ಬಂಗಾರ, ಬೆಳ್ಳಿ ಪತ್ತೆಯಾಗಿದೆ. ಹಾವೇರಿ ಹೊರವಲಯದ ಅಜ್ಜಯ್ಯನ ಬಳಿಯ ಚೆಕ್ ಪೋಸ್ಟ್ ನಲ್ಲಿ ಅಪಾರ ಪ್ರಮಾಣ ಚಿನ್ನಾಭರಣ ಪತ್ತೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ