• Home
  • »
  • News
  • »
  • state
  • »
  • Voter Data Theft: ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲೇರಿದ ಚಿಲುಮೆ ಕೇಸ್; ಕಾಂಗ್ರೆಸ್​​ಗೆ ಠಕ್ಕರ್ ಕೊಟ್ಟ ಬಿಜೆಪಿ

Voter Data Theft: ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲೇರಿದ ಚಿಲುಮೆ ಕೇಸ್; ಕಾಂಗ್ರೆಸ್​​ಗೆ ಠಕ್ಕರ್ ಕೊಟ್ಟ ಬಿಜೆಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಂಗ್ರೆಸ್ ಪಕ್ಷದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ‌ N. ರವಿಕುಮಾರ್ ಮನವಿ ಮಾಡಿದ್ದಾರೆ.

  • Share this:

ಚಿಲುಮೆ ಸಂಸ್ಥೆಯ (Chilume Organization) ವಿರುದ್ಧ ಮತದಾರರ ಮಾಹಿತಿ ಕಳುವು (Voters Data Theft) ಪ್ರಕರಣ ಕೇಂದ್ರ ಚುನಾವಣಾ ಆಯೋಗದ (Central Election Commission) ಮೆಟ್ಟಿಲೇರಿದೆ. ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಾಯಕರು (Congress Leaders) ದೂರು ನೀಡುತ್ತಿರುವ ಹಿನ್ನೆಲೆ ನಿನ್ನೆ ರಾತ್ರಿಯೇ ಬಿಜೆಪಿ (BJP) ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಮೂಲಕ ಕಾಂಗ್ರೆಸ್‌ಗೆ (Congress) ಬಿಜೆಪಿ ಠಕ್ಕರ್ ಕೊಟ್ಟಿದೆ. ಬಿಜೆಪಿ ಪರಿಷತ್ ಸದಸ್ಯ N. ರವಿಕುಮಾರ್ (MLC N Ravikumar),  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ವಿಚಾರ ಉಲ್ಲೇಖಿಸಿ, ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಫ್ಯಾಕ್ಸ್ ಮೂಲಕ ದೂರು ಸಲ್ಲಿಸಿದೆ.


ನಕಲಿ ಮತದಾರರ ಹೆಸರುಗಳನ್ನು ರಾಜ್ಯ ಚುನಾವಣಾ ಆಯೋಗದಿಂದ ರದ್ದು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಗೂ ರಾಜ್ಯ ಸರ್ಕಾರಕ್ಕೂ ಸಂಬಂಧ ಇಲ್ಲ. ಆದ್ರೆ ಕಾಂಗ್ರೆಸ್ ಈ ವಿಚಾರದಲ್ಲಿ ದಿಕ್ಕು ತಪ್ಪಿಸುವ ಯತ್ನ ಮಾಡ್ತಿದೆ ಎಂದು ಬಿಜೆಪಿ ಆರೋಪಿಸಿದೆ.


ಚಿಲುಮೆ ನಿಯಮ ಉಲ್ಲಂಘಿಸಿದೆ


ನಕಲಿ ಮತದಾರರ ರದ್ದು ಬಗ್ಗೆ ಗೊಂದಲ ಮೂಡಿಸ್ತಿದೆ. ಚಿಲುಮೆ ಸಂಸ್ಥೆಯ ನೇಮಕ ಮಾಡಿದ್ದೇ ಕಾಂಗ್ರೆಸ್. ಮತದಾರರ ಜಾಗೃತಿ ಕೆಲಸದ ನೆಪದಲ್ಲಿ ಚಿಲುಮೆ ನಿಯಮ ಉಲ್ಲಂಘಿಸಿದೆ. ಹೀಗಾಗಿ ಬಿಬಿಎಂಪಿ ಚಿಲುಮೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿದೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.


ಅಲ್ಲದೇ ಚಿಲುಮೆ ವಿರುದ್ಧ ಪೊಲೀಸರ ತನಿಖೆ ನಡೆಯುತ್ತಿದೆ. ಆದ್ರೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುವ ಮೂಲಕ ಗೊಂದಲ ಸೃಷ್ಟಿಸ್ತಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ‌ N. ರವಿಕುಮಾರ್ ಮನವಿ ಮಾಡಿದ್ದಾರೆ.


voter data theft case bjp files complaint against congress to election commission of india mrq
ಚಿಲುಮೆ ಸಂಸ್ಥೆ


‘ಚಿಲುಮೆ’ 2ನೇ ಆರೋಪಿ ಲೋಕೇಶ್ ಅರೆಸ್ಟ್‌


ಚಿಲುಮೆ ಸಂಸ್ಥೆಯಿಂದ ಮತದಾರರ ದತ್ತಾಂಶ ಕಳವು ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಕೇಸ್ ದಾಖಲಾಗ್ತಿದ್ದಂತೆ ನಾಪತ್ತೆಯಾಗಿದ್ದ 2ನೇ ಆರೋಪಿ ಲೋಕೇಶ್‌ನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.


ಲೋಕೇಶ್, ಬಿಎಲ್ಒಗಳಿಂದ ಅನುಮತಿ ಪಡೆಯುವ ಕೆಲಸ ಮಾಡ್ತಿದ್ದ. ಪ್ರಕರಣದಲ್ಲಿ ಇದುವರೆಗೂ 6 ಆರೋಪಿಗಳನ್ನ ಬಂಧಿಸಲಾಗಿದೆ.


ಇದನ್ನೂ ಓದಿ:  Congress Leaders: ಧಮ್​ ಇದ್ರೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ; ಸಿಎಂ ಬೊಮ್ಮಾಯಿಗೆ ಡಿಕೆಶಿ ಸವಾಲ್​!


ರವಿಕುಮಾರ್, ಕೆಂಪೇಗೌಡ, ಧರ್ಮೇಶ್, ರೇಣುಕಾಪ್ರಸಾದ್, ಸಂಜೀವ್ ಶೆಟ್ಟಿ ಹಾಗೂ ಲೋಕೇಶ್ ಬಂಧಿತ ಆರೋಪಿಗಳು. ಇನ್ನು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ ಗೌಡ ಮಾತನಾಡಿದ್ದು, ಲೋಕೇಶ್, ಪ್ರಮುಖ ಆರೋಪಿ ರವಿಕುಮಾರ್ ಆಪ್ತನಾಗಿದ್ದ. ಹೆಚ್ಚಿನ‌‌ ವಿಚಾರಣೆ ಮಾಡಲಾಗ್ತಿದೆ ಅಂತ ಹೇಳಿದ್ದಾರೆ.


ಮತದಾರರ ಡೇಟಾ ಕಳ್ಳತನದ ಹಗರಣ ಏನು?


2018 ರಲ್ಲಿ, ಬೆಂಗಳೂರಿನ ನಾಗರಿಕ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತದಾರರ ಜಾಗೃತಿಗಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಸಕ್ರಿಯ ಪಾಲುದಾರಿಕೆ (SVEEP) ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, NGO ಗೆ ಅನುಮತಿ ನೀಡಿದೆ.


ಹೀಗಿರುವಾಗ ಅವರು 2018 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗಿತ್ತು. ಹೀಗಿರುವಾಗ ತಾವು ಈ ಸಮೀಕ್ಷೆಯನ್ನು ಉಚಿತವಾಗಿ ನಡೆಸುವುದಾಗಿ ಎನ್‌ಜಿಒ ಹೇಳಿಕೊಂಡಿತ್ತು.


ಇದನ್ನೂ ಓದಿ:  Voters Data Steal: ಮತದಾರರ ಮಾಹಿತಿ ಕನ್ನ; ಕಾಂಗ್ರೆಸ್ ಆರೋಪಕ್ಕೆ 5 ಅಂಶಗಳಲ್ಲಿ ಸಿಎಂ ತಿರುಗೇಟು


ನಿಯೋಜಿತ ಕ್ಷೇತ್ರ ಕಾರ್ಯಕರ್ತರು ಜಾತಿ, ವಯಸ್ಸು, ಲಿಂಗ, ಉದ್ಯೋಗ, ಶಿಕ್ಷಣ ವಿವರಗಳು, ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳನ್ನು ಒಳಗೊಂಡಂತೆ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದರು. ಸಂಸ್ಥೆಯು ಅಕ್ರಮವಾಗಿ ಸಂಗ್ರಹಿಸಿದ ಈ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು INC ಆರೋಪಿಸಿದೆ.

Published by:Mahmadrafik K
First published: