• Home
  • »
  • News
  • »
  • state
  • »
  • Voter Data Steal: ಮತದಾರರ ಮಾಹಿತಿಗೆ ಕನ್ನ, ತನಿಖೆಗೆ ಇಳಿದ ಖಾಕಿಗೆ ಶಾಕ್; ಬಗೆದಷ್ಟು ತೆರೆದುಕೊಳ್ಳುತ್ತಿದೆ ಚಿಲುಮೆಯ ಕರಾಳ ಮುಖ

Voter Data Steal: ಮತದಾರರ ಮಾಹಿತಿಗೆ ಕನ್ನ, ತನಿಖೆಗೆ ಇಳಿದ ಖಾಕಿಗೆ ಶಾಕ್; ಬಗೆದಷ್ಟು ತೆರೆದುಕೊಳ್ಳುತ್ತಿದೆ ಚಿಲುಮೆಯ ಕರಾಳ ಮುಖ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರಕ್ಕೆ ಉಚಿತವಾಗಿ ಕೆಲಸ ಮಾಡಿಕೊಡ್ತೀವಿ ಅಂದಿದೆ ಚಿಲುಮೆ ನೂರಾರು ಏಜೆಂಟರುಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ನೀಡಿದೆ. ಒಬ್ಬೊಬ್ಬ ಏಜೆಂಟ್​ಗೂ 15-20 ಸಾವಿರ ಸಂಬಳ ಕೊಟ್ಟಿದೆ.

  • Share this:

ಬೆಂಗಳೂರಿನಲ್ಲಿ ಮತದಾರರ (Bengaluru Voters Data) ವೈಯಕ್ತಿಕ ಮಾಹಿತಿ ಕಳವು ಪ್ರಕರಣದ ಸಂಬಂಧ ಚಿಲುಮೆ ಸಂಸ್ಥೆ (Chilume Organization) ಮೇಲೆ ಶುಕ್ರವಾರ (ನವೆಂಬರ್ 18) ಪೊಲೀಸರು (Police) ದಾಳಿ ಮಾಡಿದ್ದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್​ ಠಾಣೆ​ ಇನ್ಸ್​​ಪೆಕ್ಟರ್​​ ಜಗದೀಶ್​ ನೇತೃತ್ವದಲ್ಲಿ ದಾಳಿ ಮಾಡಿದ್ದು, ಕಚೇರಿಯನ್ನು ಪರಿಶೀಲನೆ ನಡೆಸಿದ್ದಾರೆ. ಚಿಲುಮೆ ಸಂಸ್ಥೆ ವಿರುದ್ಧ ಹಲಸೂರು ಗೇಟ್‌ ಮತ್ತು ಕಾಡುಗೋಡಿ ಪೊಲೀಸ್‌ ಠಾಣೆಗಳಲ್ಲಿ ಬಿಬಿಎಂಪಿ ದೂರು (BBMP Complaint) ದಾಖಲಿಸಿತ್ತು. ಈ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಎರಡು ಬ್ಯಾಗ್‌ಗಳಲ್ಲಿ  ಅಧಿಕಾರಿಗಳು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಿಂಟರ್, ಸಿಪಿಯು ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಚಿಲುಮೆ ಕಚೇರಿಗೆ ಪೊಲೀಸರು ಬೀಗ ಜಡಿದಿದ್ದಾರೆ. ಇನ್ನು ಈಗಾಗಲೇ ಹಲಸೂರು ಗೇಟ್ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡ್ತಿದ್ದಾರೆ.


ಮತದಾರರ ಮಾಹಿತಿಗೆ ಕನ್ನ ಹಾಕಿರೋ ಆರೋಪದ ಬಗ್ಗೆ ಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಮಾತಾಡಿದ್ದಾರೆ. ಚಿಲುಮೆ ಸಂಸ್ಥೆ ಹೀಗೆ ಮಾಡುತ್ತೆ ಅಂತ ತಿಳಿದಿರಲಿಲ್ಲ. ಆದ್ದರಿಂದ ಚಿಲುಮೆ ವಿರುದ್ಧ ದೂರು ನೀಡಲಾಗಿದೆ. 48 ಗಂಟೆಗಳ ಒಳಗೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.


ಚಿಲುಮೆ ಸಂಸ್ಥೆಯಲ್ಲಿ ಏನೆಲ್ಲಾ ದಾಖಲೆ ಸಿಕ್ಕಿದೆ?


ಶುಕ್ರವಾರ ಮಲ್ಲೇಶ್ವರಂನಲ್ಲಿರುವ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆ ಚಿಲುಮೆ ಕಚೇರಿಯಲ್ಲಿದ್ದ ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಿರುವ ಶಂಕೆಗಳು ವ್ಯಕ್ತವಾಗಿವೆ. ರಾತ್ರೋರಾತ್ರಿ ಕಚೇರಿಯಲ್ಲಿದ್ದ ದಾಖಲೆಗಳು ನಾಪತ್ತೆಯಾಗಿರುವ ಮಾಹಿತಿ ನ್ಯೂಸ್​ 18ಗೆ ಲಭ್ಯವಾಗಿದೆ.


ಚಿಲುಮೆ ಕಚೇರಿ ಪರಿಶೀಲನೆ ವೇಳೆ ಮಹತ್ವದ ದಾಖಲೆಗಳು ಕಣ್ಮರೆಯಾಗಿರೋದು ಬೆಳಕಿಗೆ ಬಂದಿದೆ. ಇನ್ನು ಕಚೇರಿಗೆ ಯಾರು ಬರುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ಹೋದ್ರೆ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿದೆ. ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಆದರೆ ಡಿವಿಆರ್ ಮಾತ್ರ ಕಾಣುತ್ತಿಲ್ಲ. ಡಿವಿಆರ್ ಬೇರೆ ಕಡೆ ಸ್ಥಳಾಂತರಿಸಿರುವ ಅನುಮಾನಗಳು ವ್ಯಕ್ತವಾಗಿವೆ. ಸಣ್ಣ ಪುಟ್ಟ ಕಂಪ್ಯೂಟರ್ ಹೊರತುಪಡಿಸಿದ್ರೆ ಬೇರೆ ಯಾವ ದಾಖಲೆಗಳು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.


ಸದ್ಯ ಬಂಧಿತ ನಾಲ್ವರ ಮೊಬೈಲ್​ಗಳನ್ನು ವಶಕ್ಕೆ ಪಡೆದುಕೊಂಡಿರುವ ಖಾಕಿಪಡೆ ಮೆಸೇಜ್, ಮೇಲ್, ಕಾಲ್ ಡೀಟೈಲ್ಸ್​ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.


ಸಮೀಕ್ಷೆಗೆ ಜಾಹೀರಾತು


ಇನ್ನು ಚಿಲುಮೆ ಸಂಸ್ಥೆ ಸಮೀಕ್ಷೆ ನಡೆಸಲು ಜನರು ಬೇಕಾಗಿದ್ದಾರೆ ಎಂದು ಜಾಹೀರಾತು ಸಹ ನೀಡಿತ್ತು. ಆಧಾರ್​ ಜೋಡಣೆ, ಹೊಸಬರ ಸೇರ್ಪಡೆ, ಜಾಗೃತಿ ಕೆಲಸ ಎಂದು ಹೇಳಿ ಬಿಬಿಎಂಪಿ ಸಮೀಕ್ಷೆ ನಡೆಸಲು ಸೂಚನೆ ನೀಡಿತ್ತು. ಆದ್ರೆ ಚಿಲುಮೆ ಸಂಸ್ಥೆ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿರುವ ಆರೋಪಗಳು ಕೇಳಿ ಬಂದಿವೆ.


ಚಿಲುಮೆ ಸರ್ವೇ ಮಾಡಿದ್ದು ಹೇಗೆ? ಯಾವ ಮಾಹಿತಿ ಸಂಗ್ರಹಿಸಿದೆ?


ಸಮೀಕ್ಷೆ ವೇಳೆ ಚಿಲುಮೆ ಸಂಸ್ಥೆ ಏಜೆಂಟ್​ಗಳು ಮತದಾರರ ವೋಟರ್ ಐಡಿ ಕಾರ್ಡ್​ ನಂಬರ್, ಮನೆ ವಿಳಾಸ, ಫೋನ್ ನಂಬರ್, ಜಾತಿ, ಆಧಾರ್ ಕಾರ್ಡ್​ ನಂಬರ್, ಉದ್ಯೋಗ, ನೀವು ಯಾರಿಗೆ ವೋಟ್ ಹಾಕ್ತಿರಾ? ನಿಮ್ಮ ಮಾತೃ ಭಾಷೆ ಯಾವುದು? ವೈವಾಹಿಕ ಸ್ಥಿತಿಗತಿ, ಶೈಕ್ಷಣಿಕ ವಿವರ ಮತ್ತು ಇಮೇಲ್ ವಿಳಾಸ ಪಡೆದುಕೊಂಡಿದೆ ಎನ್ನಲಾಗಿದೆ.


ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ಮಾಹಿತಿ ಕದ್ದಿದೆ ಅನ್ನೋ ಆರೋಪ ಇದೆ. ಹಾಗಿದ್ರೆ ಹೇಗೆಲ್ಲಾ ಮಾಹಿತಿ ಕದ್ದಿದೆ ಅನ್ನೋ ಮಾಹಿತಿ ಇಲ್ಲಿದೆ


ಸಮೀಕ್ಷೆ ವೇಳೆ ನೂರಾರು ಏಜೆಂಟ್​ಗಳಿಗೆ ನಕಲಿ ಐಟಿ ಕಾರ್ಡ್​​​ ವಿತರಣೆ ಆಗಿದೆ. ಪಿಯುಸಿ ಫೇಲ್​ ಆದವನಿಗೂ ಅಧಿಕಾರಿ ಅಂತ ಐಡಿಕಾರ್ಡ್​ ಕೊಟ್ಟಿದ್ದಾರೆ. ಮತದಾರರ ಬಳಿ ಜಾತಿ, ಧರ್ಮ, ಭಾಷೆ, ವೈವಾಹಿಕ ಮಾಹಿತಿ, ವಯಸ್ಸು, ಉದ್ಯೋಗ, ಶಿಕ್ಷಣದ ಬಗ್ಗೆ ಅಕ್ರಮವಾಗಿ ಸಂಗ್ರಹ, ಆಧಾರ್​ ಸಂಖ್ಯೆ, ಫೋನ್​​ ನಂಬರ್​, ಖಾಸಗಿ ಇಮೇಲ್​​ ಸಂಗ್ರಹ, ಆಯಾ ಕ್ಷೇತ್ರದಲ್ಲಿ ಯಾರು ಬೆಸ್ಟ್​ ರಾಜಕಾರಣಿ, ಚುನಾಯಿತ ಪ್ರತಿನಿಧಿ ಯಾರು ಬೆಸ್ಟ್​ ಅಂತಾನೂ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ.


ಚಿಲುಮೆ ಸಂಸ್ಥೆ ಹುಟ್ಟು-ವಿವಾದ?


ನೆಲಮಂಗಲ ಮೂಲದ ಕೃಷ್ಣಪ್ಪ ರವಿಕುಮಾರ್​​ ಎಂಬಾತ ಐವರು ಪಾಲುದಾರರ ಹೆಸರಲ್ಲಿ ಜುಲೈ 2013ಕ್ಕೆ ಸಂಸ್ಥೆ ನೋಂದಣಿ ಮಾಡಲಾಗಿದೆ. 2017 ಡಿಸೆಂಬರ್​ನಲ್ಲಿ DAP ಹೊಂಬಾಳೆ ಖಾಸಗಿ ಕಂಪನಿ ಶುರು ಮಾಡಲಾಗಿದೆ. ಆದರೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿ ಆಗಿಲ್ಲ.


ಇದನ್ನೂ ಓದಿ:  Karnataka Politics: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಾಂಗ್ರೆಸ್ ಬಳಿ ಮಹತ್ವದ ಅಸ್ತ್ರ!


2018 ಜನವರಿಯಲ್ಲಿ ಚಿಲುಮೆ ಎಂಟರ್​ಪ್ರೈಸಸ್​​ ಹೆಸರಲ್ಲಿ ಕಂಪನಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಮತದಾನ ಕೊಠಡಿ ಭದ್ರತೆ, ಸಿಸಿಟಿವಿ, ವೆಬ್​​ಕಾಸ್ಟಿಂಗ್​​​ ಕೆಲಸ ನಿರ್ವಹಣೆ, ಮತಗಟ್ಟೆಗಳಿಗೆ ಸಿಬ್ಬಂದಿ ಒದಗಿಸುವ ಕೆಲಸವನ್ನೂ ಚಿಲುಮೆ ಮಾಡ್ತಿದೆ. ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ಆಯೋಜನೆ ಮಾಡಿದೆ. ಚಿಲುಮೆ ಸಂಸ್ಥೆ ಡಿಜಿಟಲ್​​ ಆ್ಯಪ್​ಗೆ ರಾಜಕಾರಣಿಗಳು ಚಂದಾದಾರರು ಆಗಿದ್ದಾರೆ.


ಮತದಾರರ ಮಾಹಿತಿ ಸೇಲ್?


ಸರ್ಕಾರಕ್ಕೆ ಉಚಿತವಾಗಿ ಕೆಲಸ ಮಾಡಿಕೊಡ್ತೀವಿ ಅಂದಿದೆ ಚಿಲುಮೆ ನೂರಾರು ಏಜೆಂಟರುಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ನೀಡಿದೆ. ಒಬ್ಬೊಬ್ಬ ಏಜೆಂಟ್​ಗೂ 15-20 ಸಾವಿರ ಸಂಬಳ ಕೊಟ್ಟಿದೆ.


ಇದನ್ನೂ ಓದಿ:  Tanveer Saith: ಭಜರಂಗದಳದ ನಾಯಕನಿಂದ ತನ್ವೀರ್​ ಸೇಠ್​ಗೆ ಜೀವ ಬೆದರಿಕೆ; ದೂರು ದಾಖಲು


ಇಷ್ಟೊಂದು ಹಣ ಎಲ್ಲಿಂದ ಬಂತು, ಹಣದ ಮೂಲ ಗೊತ್ತಾಗಿಲ್ಲ. ಸಂಗ್ರಹಿಸಿದ ಮತದಾರರ ಮಾಹಿತಿ ಸೇಲ್​ ಮಾಡಿರೋ ಅನುಮಾನಗಳು ವ್ಯಕ್ತವಾಗಿವೆ. ಖಾಸಗಿ ಉದ್ದಿಮೆಗಳಿಗೆ, ಸಂಸ್ಥೆಗಳಿಗೆ, ಬ್ಯಾಂಕ್​ಗಳಿಗೆ, ಎಲೆಕ್ಷನ್​​ಗೆ ನಿಲ್ಲಲು ರೆಡಿಯಾಗಿರುವ ರಾಜಕಾರಣಿಗಳಿಗೂ ಮತದಾರರ ಮಾಹಿತಿ ಮಾರಾಟ ಆಗಿರುವ ಶಂಕೆ ವ್ಯಕ್ತವಾಗಿದೆ.

Published by:Mahmadrafik K
First published: