• Home
  • »
  • News
  • »
  • state
  • »
  • Car Repair: ಕಾರಿನ ಬೆಲೆ 11 ಲಕ್ಷ, ಅದರ ರಿಪೇರಿಗೆ 22 ಲಕ್ಷ ರೂಪಾಯಿ! ಮಳೆ ಅವಾಂತರ ಹೆಸರಲ್ಲಿ ಭರ್ಜರಿ ಸುಲಿಗೆ!

Car Repair: ಕಾರಿನ ಬೆಲೆ 11 ಲಕ್ಷ, ಅದರ ರಿಪೇರಿಗೆ 22 ಲಕ್ಷ ರೂಪಾಯಿ! ಮಳೆ ಅವಾಂತರ ಹೆಸರಲ್ಲಿ ಭರ್ಜರಿ ಸುಲಿಗೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೆಂಗಳೂರಲ್ಲಿ ಕಳೆದ ಬಾರಿ ಸುರಿದ ಮಳೆಗೆ ಅಪಾರ್ಟ್ ಮೆಂಟ್‌ ಹಾಗೂ ಮನೆಗಳ ಬೇಸ್‌ ಮೆಂಟ್‌ ಗಳಲ್ಲಿ ದಿನಗಟ್ಟಲೇ ನಿಂತ ನೀರು ನಿಲ್ಲಿಸಿಟ್ಟ ಕಾರು, ಬೈಕ್‌ ಗಳನ್ನು ಹಾಳು ಮಾಡಿತ್ತು. ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ರಸ್ತೆ, ಮನೆ, ಬೇಸ್‌ ಮೆಂಟ್‌ ಹೀಗೆ ಕಂಡ ಕಂಡಲೆಲ್ಲ ನೀರು. ಹೀಗಾಗಿ ಸಾಲು ಸಾಲು ವಾಹನಗಳು ಹಾಳಾಗಿದ್ದು, ರಿಪೇರಿಗೆಂದು ಜನರು ಓಡುತ್ತಿದ್ದಾರೆ. ಆದರೆ ಇದನ್ನೇ ಗಾಳವಾಗಿಸಿಕೊಂಡ ಕೆಲ ವಾಹನ ರಿಪೇರಿ ವ್ಯಕ್ತಿಗಳು ಜನರಿಂದ ಹಣ ಪೀಕುವ ಕಾರ್ಯಕ್ಕಿಳಿದಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.

ಮುಂದೆ ಓದಿ ...
  • Share this:

ಇತ್ತೀಚಿಗೆ ಬೆಂಗಳೂರಿನಲ್ಲಿ (Bengaluru) ಸುರಿದ ಭಾರೀ ಮಳೆಯಿಂದಾಗಿ ಆದ ನಷ್ಟ ಅಷ್ಟಿಷ್ಟಲ್ಲ. ಹಲವರ ಮನೆಗಳಿಗೇ ನೀರು ನುಗ್ಗಿದ್ದು ನೆಲೆಯೇ ಕಳೆದುಕೊಂಡಿದ್ದಾರೆ, ಇದು ಬಡವರ ಕಥೆಯಾದರೆ ದೊಡ್ಡವರು ಎನಿಸಿಕೊಂಡವರಿಗೂ ಮಳೆ (Rain) ಸಾಕಷ್ಟು ನಷ್ಟ ಉಂಟುಮಾಡಿದೆ. ಅಪಾರ್ಟ್ ಮೆಂಟ್‌ ಹಾಗೂ ಮನೆಗಳ ಬೇಸ್‌ ಮೆಂಟ್‌ ಗಳಲ್ಲಿ ದಿನಗಟ್ಟಲೇ ನಿಂತ ನೀರು ನಿಲ್ಲಿಸಿಟ್ಟ ಕಾರು, ಬೈಕ್‌ ಗಳನ್ನು ಹಾಳು ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ರಸ್ತೆ, ಮನೆ, ಬೇಸ್‌ ಮೆಂಟ್‌ ಹೀಗೆ ಕಂಡ ಕಂಡಲೆಲ್ಲ ನೀರು. ಹೀಗಾಗಿ ಸಾಲು ಸಾಲು ವಾಹನಗಳು (Vehicle) ಹಾಳಾಗಿದ್ದು, ರಿಪೇರಿಗೆಂದು ಜನರು ಓಡುತ್ತಿದ್ದಾರೆ. ಆದರೆ ಇದನ್ನೇ ಗಾಳವಾಗಿಸಿಕೊಂಡ ಕೆಲ ವಾಹನ ರಿಪೇರಿ (Repair) ವ್ಯಕ್ತಿಗಳು ಜನರಿಂದ ಹಣ ಪೀಕುವ ಕಾರ್ಯಕ್ಕಿಳಿದಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.


ಇದಕ್ಕೆ ಕಾರಣವಾಗಿದ್ದು ಈ ಕಾರ್‌ ರಿಪೇರಿ ಎಸ್ಟಿಮೇಟ್‌ ಚಾರ್ಜ್! ಹೌದು ಬೆಂಗಳೂರಿನ ಅನಿರುದ್ಧ ಗಣೇಶ್‌ ಎಂಬುವವರು ಇತ್ತೀಚಿಗೆ 11 ಲಕ್ಷ ಕ್ಕೆ ಖರೀದಿ ಮಾಡಿದ್ದ ವಿಡಬ್ಲ್ಯೂ ಪೋಲೋ ಕಾರ್‌ ರಿಪೇರಿಗೆ 22 ಲಕ್ಷ ರೂಪಾಯಿಗಳ ದುರಸ್ತಿ ಅಂದಾಜು ಪಡೆದಿದ್ದಾರೆ.


ಕಾರ್‌ ದುರಸ್ತಿ ಅಂದಾಜು 22 ಲಕ್ಷ !
ಅನಿರುದ್ಧ್‌ ಹೇಳೊ ಪ್ರಕಾರ, ಇತ್ತೀಚಿನ ಸುರಿದ ಮಳೆಯಿಂದಾಗಿ ಅವರ ವಿಡಬ್ಲ್ಯೂ ಪೋಲೋ ಕಾರ್‌ ಹಾನಿಗೊಳಗಾಗಿತ್ತು, ಅವರು ಕಾರನ್ನು ವೈಟ್‌ಫೀಲ್ಡ್ ನ ಸರ್ವೀಸ್‌ ಸೆಂಟರ್‌ ಒಂದಕ್ಕೆ ಕಳುಹಿಸಿದ್ದಾರೆ. ರಾತ್ರಿ 11 ಗಂಟೆಗೆ ಅರ್ಧ ಮುಳುಗಿದ್ದ ಅವರ ಕಾರನ್ನು ಎಳೆಯುವ ಟ್ರಕ್‌ಗೆ ತಳ್ಳಲಾಯ್ತು.


ಇದನ್ನೂ ಓದಿ:  Bengaluru: ಕದ್ದ ಕಾರ್​ನ್ನೇ ಮನೆ ಮಾಡ್ಕೊಂಡು ಜೀವನ ನಡೆಸ್ತಿದ್ದ ದಂಪತಿ ಅರೆಸ್ಟ್


ಆದ್ರೆ ಕಾರ್‌ ಅನ್ನು ರಿಪೇರಿಗೇನೋ ಕಳುಹಿಸಿದರು. ಅದರ ಬಳಿಕವೇ ಅವರಿಗೆ ಶಾಕಿಂಗ್‌ ನ್ಯೂಸ್‌ ಕಾದಿತ್ತು. ಕಾರ್‌ ಕಳುಹಿಸಿ 20 ದಿನಗಳ ನಂತರ ಸರ್ವೀಸ್ ಸೆಂಟರ್ ಅವರಿಗೆ ದುರಸ್ತಿ ಅಂದಾಜು 22 ಲಕ್ಷ ರೂ ನೀಡಬೇಕು ಎಂದಿದ್ದಾರೆ. ಇದನ್ನು ಕೇಳಿದ ಅನಿರುದ್ಧ್‌ ಶಾಕ್‌ ಆಗಿದ್ರು. ಆದ್ರೆ ಇದ್ದುದರಲ್ಲಿಯೇ ಸಮಾಧಾನದ ವಿಷಯ ಅಂದರೆ ಅವರ ಕಾರಿನ ಇನ್ಶುರೆನ್ಸ್‌ ಕಂಪನಿಯವರು 'ಒಟ್ಟು ನಷ್ಟ' ಎಂದು ಘೋಷಿಸಲಾಗುವುದು ಅಂತ ಹೇಳಿದರಂತೆ.


ಎಸ್ಟಿಮೇಶನ್‌ ಚಾರ್ಜ್‌ 41299 ರೂ !!
ಇನ್ನೇನು ಮಗಿಯಿತು ಅಂದುಕೊಂಡ ಅನಿರುದ್ಧ್‌ ಗೆ ಮತ್ತೊಂದು ಶಾಕ್‌ ಇತ್ತು. ಆ ಶಾಕ್‌ ನೀಡಿದ್ದು ಬೇರೆ ಯಾರೂ ಅಲ್ಲ ಬದಲಾಗಿ ಸರ್ವೀಸ್‌ ಸೆಂಟರ್‌. ಅದೇನೆಂದರೆ ಸರ್ವೀಸ್‌ ಸೆಂಟರ್‌ ನಿಂದ ವಾಹನ ಪಡೆಯಲು 44,840 ರೂ.ಗಳನ್ನು ಪಾವತಿ ಮಾಡಲು ಹೇಳಿದೆ. ಕಾರು ಅನುಭವಿಸಿದ ಹಾನಿಯ ಬಗ್ಗೆ ದಾಖಲೆಗಳನ್ನು ಪಡೆಯಲು ಅನಿರುದ್ಧ್‌ ಈ ಶುಲ್ಕವನ್ನು ಪಾವತಿಸಲೇ ಬೇಕಾಗಿದೆ.
ಸರ್ವೀಸ್‌ ಸೆಂಟರ್‌ ನವರು ಹೇಳೋದೇನೆಂದರೆ “ನಮ್ಮ ಅಂದಾಜು ದಾಖಲೆಯಿಂದಾಗಿ ನೀವು ಮಾತ್ರ ವಿಮೆಯನ್ನು ಪಡೆಯುತ್ತೀರಿ, ನಾವು ಇಲ್ಲದೆ ನೀವು ಏನನ್ನೂ ಪಡೆಯುವುದಿಲ್ಲ. ನೀವು ನಮ್ಮ ಶೋರೂಮ್‌ನಿಂದ ಹೊಸ ಕಾರನ್ನು ಖರೀದಿಸಿದರೆ, ನಾವು ಈ ಶುಲ್ಕಗಳನ್ನು ಮನ್ನಾ ಮಾಡಬಹುದು ಎಂದಿದ್ದಾರಂತೆ. ಆದರೆ ಇನ್ನೊಂದು ಗಮನಿಸಬೇಕಾದ ವಿಷ್ಯ ಎಂದರೆ ಇಲ್ಲಿ ಯಾವುದೇ ಲಿಖಿತ ರಿಪೇರ್‌ ಎಸ್ಟಿಮೇಟ್‌ ಅನ್ನು ಒದಗಿಸಲಾಗಿಲ್ಲ ಅಂತಾರೆ ಅನಿರುದ್ಧ್.‌ ಅಲ್ಲದೆ, ವಿಡಬ್ಲ್ಯೂ ಪೊಲೊ ಮಾಲೀಕರು ತನಗೆ ಯಾವುದೇ ಅಂದಾಜು ಶುಲ್ಕದ ಸರಕುಪಟ್ಟಿ ಒದಗಿಸಿಲ್ಲ ಎಂದು ಹೇಳುತ್ತಾರೆ.


ಇದನ್ನೂ ಓದಿ:  Viral Video: ಅಯ್ಯಪ್ಪಾ! ರಸ್ತೆಯಲ್ಲಿನ ಬೃಹತ್ ಹೊಂಡಕ್ಕೆ ಬಿದ್ದ ಸ್ಕೂಟರ್


ಆದರೆ, ದುರಸ್ತಿಗೆ ಆಗಿರುವ ಅಂದಾಜು ವೆಚ್ಚದ ಬಗ್ಗೆ ಫೋನ್‌ ಕಾಲ್‌ ಮಾಡಿ ತಿಳಿಸಲಾಗಿದೆ ಎನ್ನುತ್ತಾರೆ ಅನಿರುದ್ಧ್.ಇನ್ನು ಘಟನೆಯಿಂದ ಶಾಕ್‌ ಗೆ ಒಳಗಾದ ಅನಿರುದ್ಧ್‌ ಅವರು ಮೇಲ್ ಮೂಲಕ VW ಇಂಡಿಯಾವನ್ನು ಸಂಪರ್ಕಿಸಿದ್ದು, ಕಂಪನಿಯ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

Published by:Ashwini Prabhu
First published: