Text Book Row: ಬಿಜೆಪಿ ಸರ್ಕಾರಕ್ಕೆ ಬೇಡವಾದ ವಿಷಯಗಳೇ ಪ್ರಮುಖವಾಗಿದೆ; ರಾಜ್ಯ ಒಕ್ಕಲಿಗರ ಸಂಘ

ರೋಹಿತ್ ಚಕ್ರತೀರ್ಥ ಎಂಬುವರು 2017 ರಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನವಾಗುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ‌ ಶೇರ್ ಮಾಡಿದ್ದು ಸಾಕಷ್ಟು ಟ್ರೋಲ್ ಆಗಿತ್ತು. ಇದೀಗ ಅಂಥವರನ್ನೇ ಪಠ್ಯ ಪುಸ್ತಕ‌ ಮರು ಪರಿಷ್ಕರಣಾ ಸಮಿತಿ‌ ಅಧ್ಯಕ್ಷರನ್ನಾಗಿ ಮಾಡಿರುವುದು ಎಷ್ಟು‌ ಸರಿ ಎಂಬ ಪ್ರಶ್ನೆ ಮೂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣೆ (Karnataka State Syllabus) ಮತ್ತು ಅದರ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohit Chakrateertha) ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಳೆಯ ಪಠ್ಯವನ್ನು ಮುಂದುವರಿಸಬೇಕು ಎಂದು ಮೇ 31 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ (KaRave), ವಿವಿಧ ವಿದ್ಯಾರ್ಥಿ ಸಂಘಟನೆಗಳು ನಿರ್ಧರಿಸಿವೆ. ಇತ್ತ ವಿಪಕ್ಷಗಳಾದ ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಸಹ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿವೆ. ಇದೀಗ ಕರ್ನಾಟಕ ಒಕ್ಕಲಿಗರ ಸಂಘದ (Vokkaligara Sangha) ಅಧ್ಯಕ್ಷರಾಗಿರುವ ಸಿ.ಎನ್.ಬಾಲಕೃಷ್ಣ (CN Balakrishna) ಅವರು ಪತ್ರಿಕಾ ಪ್ರಕಟನೆ ಮೂಲಕ ತಮ್ಮ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.  

ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ‌ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೇಡವಾದ ವಿಷಯಗಳೇ ಪ್ರಮುಖವಾಗಿರುವುದು ವಿಪರ್ಯಾಸ. ಅದರಲ್ಲೂ ಪಠ್ಯ ಪುಸ್ತಕ‌ ಮರು ಪರಿಕ್ಷರಣೆ ಹೆಸರಿನಲ್ಲಿ ರಾಷ್ಟ್ರಕವಿ ಕುವೆಂಪು ಮೊದಲಾದ‌ ಮಹನೀಯರಿಗೆ ಅವಮಾನ ಮಾಡುತ್ತಿರುವುದು ನಿಜಕ್ಕೂ ‌ಒಳ್ಳೇ‌ ಬೆಳವಣಿಗೆ ಅಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ರೋಹಿತ್ ಚಕ್ರತೀರ್ಥ ಆಯ್ಕೆ ಎಷ್ಟು ಸರಿ?

ಹಾಲಿ‌ ಪಠ್ಯ ಪರಿಷ್ಕರಣ‌ ಸಮಿತಿ‌ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಎಂಬುವರು 2017 ರಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನವಾಗುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ‌ ಶೇರ್ ಮಾಡಿದ್ದು ಸಾಕಷ್ಟು ಟ್ರೋಲ್ ಆಗಿತ್ತು. ಇದೀಗ ಅಂಥವರನ್ನೇ ಪಠ್ಯ ಪುಸ್ತಕ‌ ಮರು ಪರಿಷ್ಕರಣಾ ಸಮಿತಿ‌ ಅಧ್ಯಕ್ಷರನ್ನಾಗಿ ಮಾಡಿರುವುದು ಎಷ್ಟು‌ ಸರಿ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:  Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು

ರಾಷ್ಟ್ರೀಯ ಕವಿ ಕುವೆಂಪು ಅವರು ಒಂದು‌ ಜಾತಿ, ಮತ , ಧರ್ಮಕ್ಕೆ‌ ಸೀಮಿತ ಆದವರಲ್ಲ. ನಮ್ಮ ನಾಡು‌ ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾರಿದವರು, ಎಲ್ಲಾ ಧರ್ಮ ಗಳನ್ನು, ಎಲ್ಲಾ ಸಮುದಾಯದವರನ್ನು ಸಮಾನವಾಗಿ ಗೌರವಿಸಿದವರು, ಎಲ್ಲಕ್ಕಿಂತ ಮುಖ್ಯವಾಗಿ ಮಾನವ ಜನ್ಮ ತಾನೊಂದೆ ವಲಂ ಎಂಬ ಪಂಪನ ಮಾತಿನಂತೆ ವಿಶ್ವಮಾನವ ಸಂದೇಶ‌ಸಾರಿದ ಅನಿಕೇತನ‌ ಕವಿ.

ಕುವೆಂಪುರ ಅವರ ಜಗದ ಕವಿ

ಅವರನ್ನು ಯಾರೂ ಒಕ್ಕಲಿಗರು ಎಂದು ಗುರುತಿಸಿಲ್ಲ. ತಮ್ಮ ಸಮಕಾಲೀನ‌ಕವಿಗಳಿಂದಲೇ ಯುಗದ ಕವಿ, ಜಗದ ಕವಿ, ರಸಋಷಿ ಎಂದೆಲ್ಲಾ ಹೊಗಳಿಸಿ ಕೊಂಡವರು. ನಮಸ್ಕರಿಸಿಕೊಂಡವರು ಶ್ರೀ ಕುವೆಂಪು. ಅಂಥ‌ ಮೇರುಕವಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದಾಗಲೀ, ಕಿಡಿಗೇಡಿಗಳ ಕೃತ್ಯವನ್ನು ಪ್ರೋತ್ಸಾಹಿಸುವುದಾಗಲಿ ವೃಥಾ ಸಲ್ಲದು. ನಾಡ ಗೀತೆಯನ್ನು ಸರ್ಕಾರವೇ ಒಪ್ಪಿ ಸ್ವೀಕಾರ ಮಾಡಿದೆ. ನಾಡ ಜನರು ಅದನ್ನು ಒಪ್ಪಿ‌ಹಾಡುತ್ತಿದ್ದಾರೆ.

ರಾಷ್ಟ್ರದ್ರೋಹದ‌ ಅಡಿಯಲ್ಲಿ ಕ್ರಮ ಜರುಗಿಸಿ

ಸರ್ಕಾರವೇ ಮಾನ್ಯ ಮಾಡಿರುವ ,ಕರುನಾಡಿನ‌ ಗೌರವದ ಸಂಕೇತ ಆಗಿರುವ ನಾಡಗೀತೆಗೆ, ಅದರ‌ ಕರ್ತೃವಿಗೆ ಅವಮಾನ ಆಗುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ರಾಷ್ಟ್ರದ್ರೋಹದ‌ ಅಡಿಯಲ್ಲಿ ಕ್ರಮ ಜರುಗಿಸಬೇಕು. ಇಲ್ಲವಾದರೆ ನಮ್ಮ ನಾಡಿನ ಹಿರಿಮೆ ಗರಿಮೆಯನ್ನು ವಿಶ್ವಮಟ್ಟಕ್ಕೆ ಸಾರಿರುವ ಕವಿ‌ ವರೇಣ್ಯರಿಗೆ ಆಗುತ್ತಿರುವ ಅವಮಾನಕ್ಕೆ ಸರ್ಕಾರವೇ ಕಾರಣ ಎಂದು‌ ಭಾವಿಸಬೇಕಾಗುತ್ತದೆ.

ಯುಗದ ಕವಿ ಕುವೆಂಪು ಅವರೊಬ್ಬರೇ ಅಲ್ಲ ಅವರೊಂದಿಗೆ ಅನೇಕ ಸಾಹಿತ್ಯ ದಿಗ್ಗಜರು ಈ ನಾಡಿಗೆ ದಾರಿ ದೀಪವಾಗಿದ್ದರೆ  ಅವರನ್ನೂ ಸಹ ಕೆಟ್ಟದಾಗಿ ಬಿಂಬಿಸುವ ಪ್ರಯತ್ನವನ್ನು ಯಾರೂ ಕೂಡ ಮಾಡಬಾರದಾಗಿ ವಿನಂತಿಸುತ್ತೇನೆ.

ಇದನ್ನೂ ಓದಿ:  BC Nagesh: ದೇಶವನ್ನು ಇಟಲಿಕರಣ ಮಾಡಲು ಹೋಗ್ತಿಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಬಿ ಸಿ ನಾಗೇಶ್ ತಿರುಗೇಟು

ತಪ್ಪನ್ನು ಆರಂಭದಲ್ಲಿ ಸರಿಪಡಿಸಿ

ಹಾಗಾಗಿ ತಪ್ಪನ್ನು‌ ಆರಂಭದಲ್ಲೇ ಸರಿ‌ಪಡಿಸದೇ‌ ಇದ್ದರೆ ಮುಂದೆ ಅದು ಯಾವ ಸ್ವರೂಪವನ್ನಾದರೂ ಪಡೆದುಕೊಳ್ಳಬಹುದು. ಸರ್ಕಾರ ಇಂಥ ಬೆಳವಣಿಗೆಗೆ, ಅತಿರೇಕದ ವರ್ತನೆಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಸಿ ಎನ್ ಬಾಲಕೃಷ್ಣ ‌ ಒತ್ತಾಯಿಸಿದ್ದಾರೆ.
Published by:Mahmadrafik K
First published: