ಒಕ್ಕಲಿಗರ ಸಂಘದ ಆಡಳಿತಾಧಿಕಾರಿಗೆ ನಿರ್ಬಂಧ; ಹಣಕಾಸು ವ್ಯವಹಾರ ಮಾಡುವಂತಿಲ್ಲ

ಒಕ್ಕಲಿಗರ ಸಂಘದ ರಾಜಕೀಯ ಮೇಲಾಟಗಳಿಂದ ಬೇಸತ್ತ ಸರ್ಕಾರ ತಾತ್ಕಾಲಿಕ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ಈಗ ಕೋರ್ಟ್​ ಆಡಳಿತಾಧಿಕಾರಿಗೆ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಆದೇಶಿಸಿದೆ

news18
Updated:August 29, 2018, 6:46 PM IST
ಒಕ್ಕಲಿಗರ ಸಂಘದ ಆಡಳಿತಾಧಿಕಾರಿಗೆ ನಿರ್ಬಂಧ; ಹಣಕಾಸು ವ್ಯವಹಾರ ಮಾಡುವಂತಿಲ್ಲ
ಕರ್ನಾಟಕ ಹೈಕೋರ್ಟ್​
news18
Updated: August 29, 2018, 6:46 PM IST
ಪುಟ್ಟರಾಜು, ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುಂತೆ ಕಾಣಿಸುತ್ತಿಲ್ಲ. ಒಕ್ಕಲಿಗರ ಸಂಘದಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿತ್ತು. ಇದೀಗ ಹೈಕೋರ್ಟ್​ ನೂತನ ಆಡಳಿತಾಧಿಕಾರಿಗೆ ಯಾವುದೇ ರೀತಿಯ ಹಣಕಾಸು ವ್ಯವಹಾರ ನಡೆಸದಂತೆ ನಿರ್ಬಂಧ ಹೇರಿದೆ.

ಸಂಘಕ್ಕೆ ನೂತನ ಆಡಳಿತಾಧಿಕಾರಿ ನೇಮಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ನ ಆದೇಶದಿಂದ ಭಾರೀ ಹಿನ್ನಡೆಯಾಗಿದೆ. ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​ನ ಏಕ ಸದಸ್ಯ ಪೀಠ ಮಧ್ಯಂತರ ಆದೇಶವನ್ನು ಹೊರಡಿಸಿದೆ. ನೂತನ ಆಡಳಿತಾಧಿಕಾರಿ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು, ಹಣಕಾಸು ವ್ಯವಹಾರ ನಡೆಸಬಾರದೆಂದು ಹೈಕೋರ್ಟ್ ಆದೇಶ ನೀಡಿದೆ.

ಆಡಳಿತಾಧಿಕಾರಿ ನೀತಿ ನಿರ್ಣಯ ಕೈಗೊಳ್ಳುವಂತಿಲ್ಲ, ಚೆಕ್ ಗಳಿಗೆ ಸಹಿ ಹಾಕುವಂತಿಲ್ಲ ಹಾಗೂ ಬ್ಯಾಂಕ್​ನಿಂದ ಹಣ ಹಿಂತೆಗೆದುಕೊಳ್ಳುವಂತಿಲ್ಲ ಎಂದು ಕೋರ್ಟ್​ ಆದೇಶಿಸಿದೆ.  ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್​ 4ಕ್ಕೆ ಹೈಕೋರ್ಟ್ ಮುಂದೂಡಿದೆ. ಅಲ್ಲಿಯವರೆಗೂ ಇಂದಿನ ಆದೇಶವನ್ನು ಯಥವಾತ್ತಾಗಿ ಪಾಲಿಸುವಂತೆ ಖಡಕ್​ ಸೂಚನೆ ನೀಡಿದೆ. ಒಕ್ಕಲಿಗರ ಸಂಘದ ಶಿವಲಿಂಗಯ್ಯ ರಿಟ್​ ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ?:

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಬಣಗಳ ನಡುವೆ ನಡೆದಿದ್ದ ರಾಜಕೀಯವನ್ನು ನೋಡಿ ಸರ್ಕಾರ ಬೇಸತ್ತಿತ್ತು. ಈ ಕಾರಣಕ್ಕಾಗಿಯೇ ಸಂಘಕ್ಕೆ ರಾಜ್ಯ ಸರಕಾರವೇ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿತ್ತು.

ನಿವೃತ್ತ ಐಎಎಸ್‌ ಅಧಿಕಾರಿ ಎಚ್‌.ಎಸ್‌. ಅಶೋಕಾನಂದ ಅವರನ್ನು ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಒಕ್ಕಲಿಗ ಸಂಘದಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಸಂಘದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಆಡಳಿತ ಮಂಡಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಿ ಚುನಾಯಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಆದೇಶದಲ್ಲಿ ಸರ್ಕಾರ ಸೂಚಿಸಿತ್ತು.

ನೇಮಕ ಆದೇಶ ಹೊರಬಿದ್ದ ಬೆನ್ನಲ್ಲೇ ಅಶೋಕಾನಂದ ಅವರು ಅಧಿಕಾರ ಸ್ಸಂವೀಕರಿಸಿ ಸಂಘದ ನಿರ್ದೇಶಕರ ಜತೆ ಸಭೆ ನಡೆಸಿದ್ದರು.
Loading...

ಸಂಘದ ಆಡಳಿತದ ಚುಕ್ಕಾಣಿ ಹಿಡಿಯಲು ಎರಡು ಬಣಗಳು ಪೈಪೋಟಿ ನಡೆಸುತ್ತಿದ್ದವು. ನಿಕಟಪೂರ್ವ ಅಧ್ಯಕ್ಷ ಡಿ.ಎನ್‌. ಬೆಟ್ಟೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅಧಿಕಾರದಿಂದ ಕೆಳಗಿಳಿಸಿದ ಬಳಿಕ ಹಲವು ರಾಜಕೀಯ ಬೆಳವಣಿಗೆಗಳು ಗರಿಗೆದರಿದ್ದವು. ಸಂಘದಲ್ಲಿ ಒಮ್ಮತ ಮೂಡಿಸಲು ಆದಿಚುಂಚನಗಿರಿ ಮಠಾಧೀಶರು ಸೇರಿದಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಪ್ರಯತ್ನಿಸಿದ್ದರಾದರೂ ಅದರಿಂದ ಯಾವುದೇ ಬದಲಾವಣೆ ಆಗಿರಲಿಲ್ಲ.

ಸಹಕಾರ ಸಂಘಗಳ ನಿಯಮದ ಅನ್ವಯ ನೋಂದಾಯಿತ ಸಂಘವು ಪ್ರತಿವರ್ಷ ಸರ್ವ ಸದಸ್ಯರ ಸಭೆ ನಡೆಸಿ ಲೆಕ್ಕಪತ್ರ ಸಲ್ಲಿಸಬೇಕು, ಹಾಗೂ ಇದು ಕಡ್ಡಾಯವಾಗಿದೆ. ಆದರೆ, ಸಂಘವು 2014ರಿಂದ 2017ರವರೆಗೆ ಲೆಕ್ಕಪತ್ರ ಸಲ್ಲಿಸಿಯೇ ಇರಲಿಲ್ಲ. ಈ ಕುರಿತು ಬೆಂಗಳೂರು ನಗರ ಜಿಲ್ಲಾ ನೋಂದಣಾಧಿಕಾರಿಗಳು ಸರಕಾರಕ್ಕೆ ವರದಿ ನೀಡಿದ್ದರು.

ಸಂಘದ ವ್ಯಾಪ್ತಿಗೆ ಬರುವ ಕಿಮ್ಸ್‌ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ನೇಮಿಸಿದ್ದ ಹೆಚ್ಚುವರಿ ಸಿಬ್ಬಂದಿಗಳನ್ನು ತೆಗೆದುಹಾಕುವಂತೆ ವೈದ್ಯರು ಒಳಗೊಂಡ ನೌಕರರ ಸಂಘ ಪ್ರತಿಭಟನೆ ಮಾಡಿತ್ತು. ಸಂಘದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿದ ನಂತರ ಆಡಳಿತ ಮಂಡಳಿಗೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದ್ದರು.

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...