ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ; ಮುನ್ನೆಚ್ಚರಿಕಾ ಕ್ರಮವಾಗಿ ಖಾಕಿ ಕಣ್ಗಾವಲು

ಡಿಕೆಶಿ ಬಂಧನದ ವೇಳೆ ಹಲವೆಡೆ ಬಸ್​ಗಳಿಗೆ ಕಲ್ಲು ತೂರಾಟ, ಬೆಂಕಿ ಹಾಕಿದ್ದು, ರಸ್ತೆಗಳಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪೊಲೀಸ್ ಆಯುಕ್ತರ 15 ಸೂಚನೆ ಮೇರೆಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ.

Latha CG | news18-kannada
Updated:September 11, 2019, 10:05 AM IST
ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ; ಮುನ್ನೆಚ್ಚರಿಕಾ ಕ್ರಮವಾಗಿ ಖಾಕಿ ಕಣ್ಗಾವಲು
ಭಾಸ್ಕರ್ ರಾವ್.
 • Share this:
ಬೆಂಗಳೂರು(ಸೆ.11): ಇಡಿ ಅಧಿಕಾರಿಗಳಿಂದ ಡಿಕೆ ಶಿವಕುಮಾರ್​ ಬಂಧನ ಖಂಡಿಸಿ ಇಂದು ಒಕ್ಕಲಿಗ ಸಂಘಗಳು ಪ್ರತಿಭಟನಾ ರ‍್ಯಾಲಿ ನಡೆಸಲಿವೆ. ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ರ‍್ಯಾಲಿ ಸಾಗುವ ಮಾರ್ಗ ಮಧ್ಯೆ ಖಾಕಿ ಕಣ್ಗಾವಲು ಇಟ್ಟಿದೆ.

11 ಜನ ಡಿಸಿಪಿ, 40 ಎಸಿಪಿಗಳು, 200ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್, 40 ಕೆಎಸ್ಆರ್​​ಪಿ, 30 ಸಿಎಆರ್, 12 ಕ್ಷಿಪ್ರ ಕಾರ್ಯಚರಣೆ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಮಾರ್ಗ ಮಧ್ಯೆ  ಅಹಿತಕರ ಘಟನೆಗಳು ನಡೆಯದಂತೆ 2800 ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 11 ಜನ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿಭಟನಾ ರ‍್ಯಾಲಿ ಸಾಗುವ ಮಾರ್ಗದಲ್ಲಿ 50 ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ.

ಡಿಕೆಶಿ ಬಂಧನದ ವೇಳೆ ಹಲವೆಡೆ ಬಸ್​ಗಳಿಗೆ ಕಲ್ಲು ತೂರಾಟ, ಬೆಂಕಿ ಹಾಕಿದ್ದು, ರಸ್ತೆಗಳಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪೊಲೀಸ್ ಆಯುಕ್ತರ 15 ಸೂಚನೆ ಮೇರೆಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ.

Bangalore Rain: ಇಂದು ಬೆಂಗಳೂರಿಗಿಲ್ಲ ವರುಣನ ಕಾಟ; ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆ

ಪೊಲೀಸ್ ಆಯುಕ್ತರ ಮುನ್ನೆಚ್ಚರಿಕೆಗಳು
 •  ನಿಗದಿತ ರಸ್ತೆಯಲ್ಲಿ ಮಾತ್ರ ಮೆರವಣಿಗೆ

 • ಯಾವುದೇ ಧಾರ್ಮಿಕ ,ರಾಜಕೀಯ ಸಾಮಾಜಿಕ ಭಾಷಾವಾರು ಅಥವಾ ಸಾಂಸ್ಕೃತಿಕ ಗುಂಪುಗಳನ್ನು ಕೆರಳಿಸುವಂತೆ ಪ್ರಚೋದನಕಾರಿ ಹೇಳಿಕೆ ನೀಡುವಂತಿಲ್ಲ.

 • ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 36 ಮತ್ತು 37 ಉಲ್ಲಂಘನೆ ಮಾಡುವಂತಿಲ್ಲ

 • ಸಾರ್ವಜನಿಕ ರಸ್ತೆ ಅಡಚಣೆ ಆಗದಂತೆ ನೋಡಿಕೊಳ್ಳಬೇಕು

 • ದೊಡ್ಡ ಮಟ್ಟದ ದ್ವನಿ ವರ್ಧಕಗಳನ್ನು ಬಳಸುವಂತಿಲ್ಲ

 • ಅಹಿತಕರ ಘಟನೆಗಳು ನಡೆದರೆ ಆಯೋಜಕರೆ ಸಂಪೂರ್ಣ ಹೊಣೆ

 • ಸುವ್ಯವಸ್ಥಿತವಾಗಿ ನಡೆಸಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು

 • ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಸ್ಥಳದಲ್ಲೇ ಮಾಡಬೇಕು, ರಸ್ತೆಗಿಳಿದು ಬಂದ್ ಮಾಡುವಂತಿಲ್ಲ

 • ಪಟಾಕಿ ಮತ್ತು ಬೆಂಕಿ ಹಚ್ಚುವಂತಿಲ್ಲ

 • ಪೊಲೀಸರು ಮತ್ತು ಸಂಚಾರಿ ಪೊಲೀಸರು ನೀಡುವಂತಹ ಸೂಚನೆಗಳನ್ನು ಸ್ಥಳದಲ್ಲಿ ಪಾಲಿಸಬೇಕು

 • ಕಾರ್ಯಕ್ರಮದ ಸಂದರ್ಭದಲ್ಲಿ ಗಲಭೆ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿ, ಜೀವಹಾನಿ ಮಾಡಿದರೂ, ಆಯೋಜಕರ ಮೇಲೆ ಮತ್ತು ಗಲಭೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

 • ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು

 • ಷರತ್ತುಗಳ ಉಲ್ಲಂಘನೆ ಮಾಡಿದಲ್ಲಿ ಪ್ರತಿಭಟನೆ ಅನುಮತಿ ರದ್ದು ಮಾಡಲಾಗುವುದು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

 • ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ.


(ವರದಿ:ಮುನಿರಾಜು)

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ