ಬೆಂಗಳೂರು (ನ.27): ಒಕ್ಕಲಿಗರ ಮೀಸಲಾತಿಗೆ (Vokkaliga Reservation) ಒತ್ತಾಯಿಸಿ ನಡೆಯಲಿರುವ ಬೃಹತ್ ಹೋರಾಟ ಸಂಬಂಧ ಇಂದು (ನ.27) ಬೆಂಗಳೂರಿನ (Bengaluru) ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ನಾಯಕರು, ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸಿದ್ರು. ಇದೇ ವೇಳೆ ಡಿಕೆ ಶಿವಕುಮಾರ್ (D.K Shivakumar) ಮತ್ತೆ ಸಿಎಂ ಆಗೋ ಆಸೆ ವ್ಯಕ್ತಪಡಿದ್ದಾರೆ.
ಸಿಎಂ ಕುರ್ಚಿ ಮೇಲೆ ಡಿ.ಕೆ ಶಿವಕುಮಾರ್ ಕಣ್ಣು
ರಾಜ್ಯ ಒಕ್ಕಲಿಗರ ಸಂಘದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ಸಿಎಂ ಆಗಲು ಪರೋಕ್ಷವಾಗಿ ಸಮುದಾಯದ ಆಶೀರ್ವಾದ ಕೇಳಿದ್ದಾರೆ. ನಿಮ್ಮ ಶಕ್ತಿ ಉತ್ಸಾಹ ನೋಡಿದ್ರೆ. ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ಇದೆ. ನೀವು ಮನಸ್ಸು ಮಾಡಿದ್ರೆ ವಿಧಾನಸೌಧ, ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಲು ಹೋಗಬೇಡಿ ಸಮುದಾಯದ ಆಶೀರ್ವಾದ ನನ್ನ ಮೇಲಿರಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಜೊತೆಗೂಡಿ ಹೋರಾಟ ಮಾಡ್ಬೇಕಿದೆ
ಸುಮ್ಮನೆ ಈ ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ಎಲ್ಲರ ಜೊತೆ ಚರ್ಚೆ ಮಾಡಿ ಈ ಹೋರಾಟದ ರೂಪುರೇಷೆ ಸಿದ್ದಪಡಿಸಿದ್ದು, ಜೊತೆಗೂಡಿ ಹೋರಾಟ ಮಾಡ್ಬೇಕಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಾವೆಲ್ಲಾ ಪಕ್ಷ ಭೇದ ಮರೆತು ಹೋರಾಟ ಮಾಡಿದ್ರೆ ಎಲ್ಲವೂ ಸಾಧ್ಯವಾಗುತ್ತೆ.
ಯಾರ ಹಕ್ಕನ್ನು ಕಿತ್ತುಕೊಳ್ಳಬೇಕೆಂದು ನಾವು ಇಲ್ಲಿ ಸಭೆ ಸೇರಿಲ್ಲ
ಒಕ್ಕಲಿಗ ಜಾತಿಯಲ್ಲಿ ನಾವೆಲ್ಲರೂ ಸಂಘಟಿತರಾಗಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಹಕ್ಕನ್ನು ಕೇಳೋಕೆ ನಾವಿಲ್ಲಿ ನಿಂತಿದ್ದೇವೆ
ನಾವೆಲ್ಲಾ ಇಲ್ಲಿ ಕುಳಿತಿದ್ದೇವೆ ಅಂದ್ರೆ ಅದಕ್ಕೆ ಕಾರಣ ಒಕ್ಕಲಿಗರು. ನಮ್ಮ ಪಕ್ಷದಲ್ಲಿ ನಮ್ಮನ್ನು ಗುರುತಿಸಿರೋದು ಒಕ್ಕಲಿಗರು ಅಂತ ಇಲ್ಲಿ ಮಂತ್ರಿ ಆದ 3 ಜನ ಕೂತಿದ್ದಾರೆ. ಅವರು ಸಮಾಜದ ಪ್ರತಿನಿಧಿಗಳು ಅಂತ ಪದವಿ ಕೊಟ್ಟಿರೋದು ನಮ್ಮ ಹಕ್ಕನ್ನು ಕೇಳೋಕೆ ನಾವಿಲ್ಲಿ ನಿಂತಿದ್ದೇವೆ ಎಂದು ಡಿಕೆಶಿ ಹೇಳಿದ್ರು.
ನಮಗೂ ಮೀಸಲಾತಿ ಕೊಡಿ
ಈ ಸಮಾಜದ ಜನಸಂಖ್ಯೆ ಎಷ್ಟಿದೆ? ಅದರ ಆಧಾರದ ಮೇಲೆ ನಮಗೆ ಮೀಸಲಾತಿ ಕೊಡಿ ಅಷ್ಟೇ ಕೇಳೋದು. SC-STಗೆ ಮೀಸಲಾತಿ ಕೊಟ್ಟಿರೋದು ಜನಸಂಖ್ಯೆ ಆಧಾರದ ಮೇಲೆ ಅಲ್ವಾ? ಅದೇ ರೀತಿ ನಮಗೂ ಮೀಸಲಾತಿ ಕೊಡಿ ನಾವು ನ್ಯಾಯಯುತವಾಗಿ ಬೇಡಿಕೆ ಇಟ್ಟಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಹೋರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ
ಹೋರಾಟದ ದಿಕ್ಕನ್ನು ಶ್ರೀಗಳು ಪ್ರಕಟ ಮಾಡ್ತಾರೆ. ಶುಭ ಗಳಿಗೆ, ಮುಹೂರ್ತ ಎಲ್ಲಾ ಫಿಕ್ಸ್ ಮಾಡಿದ್ದೇವೆ. ನಾವು ನಾಯಕರಾದವರು ಸ್ವಾಭಿಮಾನದಿಂದ ಪಕ್ಷಬೇಧ ಮರೆತು ಕೆಲಸ ಮಾಡಬೇಕು. ನಾನು ಜೈಲಿಗೋದಾಗ ಈ ಸಮಾಜದ ಸಾವಿರಾರು ಜನ ನನ್ನ ಬೆನ್ನಿಗೆ ನಿಂತು ನನ್ನನ್ನು ಬೆಳೆಸಿದ್ದಾರೆ. ಈಗ ಆ ಋಣ ತೀರಿಸುವ ಸಮಯ ಬಂದಿದೆ ಅದಕ್ಕೆ ಹೋರಾಟ ಮಾಡ್ತೇನೆ
ಯಶಸ್ಸು ಸಿಗಬೇಕಂದ್ರೆ ನಾವೆಲ್ಲಾ ದೊಡ್ಡ ಹೋರಾಟಕ್ಕೆ ಸಿದ್ದರಾಗಬೇಕು
ಸಂಘಟನೆ ಮಾಡಬೇಕು, ನೀಲಿನಕ್ಷೆ ಸಿದ್ದಪಡಿಸಿ ಹೋರಟ ಮಾಡಬೇಕು ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: Karnataka-Maharashtra Dispute: ಕರ್ನಾಟಕದ ಹೊಸ ನಕಾಶೆ ಸಿದ್ಧಪಡಿಸಿದ ಮಹಾರಾಷ್ಟ್ರ ಕನ್ನಡಿಗರು; ಮರಾಠಿ ಪುಂಡರಿಗೆ ಎಚ್ಚರಿಕೆ
ಮೀಸಲಾತಿ ಹೋರಾಟಕ್ಕೆ ಡಿವಿಎಸ್ ಬೆಂಬಲ
ಸಭೆಯಲ್ಲಿ ಮಾತಾಡಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡರ ಒಕ್ಕಲಿಗ ಸಮುದಾಯ ಮೀಸಲಾತಿ ಹೆಚ್ಚಳ ವಿಚಾರವನ್ನು ಎಲ್ಲಿ ಪ್ರಸ್ತಾಪಿಸಬೇಕು ಅಲ್ಲಿ ಪ್ರಸ್ತಾಪ ಮಾಡ್ತೇವೆ, ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳೋಕೆ ಆಗಲ್ಲ ಎನ್ನುವ ಮೂಲಕ ಬಹಿರಂಗವಾಗಿ ಮೀಸಲಾತಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ