• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • VK Sasikala: ತಮಿಳುನಾಡಿನ ಚಿನ್ನಮ್ಮ ಶಶಿಕಲಾ ಶೀಘ್ರದಲ್ಲೇ ಪರಪ್ಪನ ಅಗ್ರಹಾರದಿಂದ ಬಿಡುಗಡೆ

VK Sasikala: ತಮಿಳುನಾಡಿನ ಚಿನ್ನಮ್ಮ ಶಶಿಕಲಾ ಶೀಘ್ರದಲ್ಲೇ ಪರಪ್ಪನ ಅಗ್ರಹಾರದಿಂದ ಬಿಡುಗಡೆ

ವಿ.ಕೆ. ಶಶಿಕಲಾ

ವಿ.ಕೆ. ಶಶಿಕಲಾ

ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾಗೆ ಆದಾಯಕ್ಕೆ ಮೀರಿದ ಆಸ್ತಿಗಳಿಕೆ ಆರೋಪದಡಿ ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಶಿಕ್ಷೆ ವಿಧಿಸಿತ್ತು. ಶಶಿಕಲಾ ಬಿಡುಗಡೆಗಿದ್ದ ಊಹಾಪೋಹಗಳಿಗೆ ಜೈಲು ಅಧೀಕ್ಷಕರು ತೆರೆ ಎಳೆದಿದ್ದಾರೆ.

  • Share this:

ಬೆಂಗಳೂರು (ಸೆ. 16): ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ಶಶಿಕಲಾ 2021ರ ಜನವರಿ 27ರಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಆರ್​ಟಿಐ ಅಡಿ ಶಶಿಕಲಾ ಅವರ ಬಿಡುಗಡೆ ದಿನಾಂಕವನ್ನು ನೀಡುವಂತೆ ಕಾರಾಗೃಹ ಇಲಾಖೆಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು ಖೈದಿಯಾದ ಶಶಿಕಲಾ 27-01-2021ಕ್ಕೆ ಜೈಲಿನಿಂದ ರಿಲೀಸ್ ಆಗಲಿದ್ದಾರೆ. ಆದರೆ ಅದಕ್ಕೆ ಅವರು ದಂಡವನ್ನು ಪಾವತಿಸಬೇಕು. ದಂಡ ಪಾವತಿಸದಿದ್ದರೆ ಮತ್ತೊಂದು ವರ್ಷ ಜೈಲಿನಲ್ಲಿ ಇರಬೇಕಾಗುತ್ತದೆ. ದಂಡ ಪಾವತಿಯಾಗದಿದ್ದರೆ ಅವರ ಕಾರಾಗೃಹ ಶಿಕ್ಷೆ ಒಂದು ವರ್ಷ ಮುಂದೆ ಹೋಗಲಿದೆ. ನಂತರ ಅವರು 27-02-2022ರವರೆಗೂ ಜೈಲಿನಲ್ಲಿ ಇದ್ದು, ಆ ಬಳಿಕ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಉತ್ತರಿಸಲಾಗಿದೆ.


ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಖೈದಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾಗೆ ಆದಾಯಕ್ಕೆ ಮೀರಿದ ಆಸ್ತಿಗಳಿಕೆ ಆರೋಪದಡಿ ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಶಿಕ್ಷೆ ವಿಧಿಸಿತ್ತು. ಈ ಹಿಂದೆ ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಶಶಿಕಲಾ ಬಿಡುಗಡೆಗಿದ್ದ ಊಹಾಪೋಹಗಳಿಗೆ ಜೈಲು ಅಧೀಕ್ಷಕರು ತೆರೆ ಎಳೆದಿದ್ದಾರೆ.


ಒಂದುವೇಳೆ ಶಶಿಕಲಾ ಪೆರೋಲ್ ಸೌಲಭ್ಯ ಅನ್ನು ಬಳಸಿದರೆ ಬಿಡುಗಡೆಯ ದಿನಾಂಕ ಬದಲಾಗಬಹುದು. ಸದ್ಯಕ್ಕೆ ಶಶಿಕಲಾ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಫೆಬ್ರವರಿ 15, 2017ರಿಂದ ಶಶಿಕಲಾ ಇದೇ ಜೈಲಿನಲ್ಲಿದ್ದಾರೆ. ಅವರನ್ನು ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಲಾಗಿದೆ. ಶಶಿಕಲಾ ಅವರ ಸೋದರಳಿಯ ಸುಧಾಕರನ್ ಮತ್ತು ಅವರ ಆಪ್ತ ಜೆ. ಇಳವರಸಿ ಸಹ ಇದೇ ಪ್ರಕ್ರಣದಲ್ಲಿ ಜೈಲು ಸೇರಿದ್ದಾರೆ. ಮುಂದಿನ ವರ್ಷ ಜನವರಿ ತಿಂಗಳ ಅಂತ್ಯದಲ್ಲಿ ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

top videos
    First published: