• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • VK Sasikala: ಶಶಿಕಲಾ ಆರೋಗ್ಯದಲ್ಲಿ ಏರುಪೇರು; ಬೌರಿಂಗ್​ ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ

VK Sasikala: ಶಶಿಕಲಾ ಆರೋಗ್ಯದಲ್ಲಿ ಏರುಪೇರು; ಬೌರಿಂಗ್​ ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ

ವಿ.ಕೆ. ಶಶಿಕಲಾ

ವಿ.ಕೆ. ಶಶಿಕಲಾ

ಇನ್ನೇನು ಚಿನ್ನಮ್ಮ ಶಶಿಕಲಾ ಬಿಡುಗಡೆಗೆ ದಿನಗಣನೆ ಇರುವ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

  • Share this:

ಬೆಂಗಳೂರು (ಜ. 20):  ಕಳೆದ ನಾಲ್ಕು ವರ್ಷಗಳಿಂದ ಸೆರೆವಾಸದ ಶಿಕ್ಷೆ ಅನುಭವಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಆಪ್ತೆ ವಿಕೆ ಶಶಿಕಲಾ ಜ. 27ಕ್ಕೆ ಬಿಡುಗಡೆಯಾಗಲಿದ್ದಾರೆ. ಚಿನ್ನಮ್ಮನ ಬಿಡುಗಡೆ ಹಿನ್ನಲೆ ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿದೆ. ಇನ್ನೇನು ಚಿನ್ನಮ್ಮ ಶಶಿಕಲಾ ಬಿಡುಗಡೆಗೆ ದಿನಗಣನೆ ಇರುವ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಎರಡ್ಮೂರು ದಿನದಿಂದ ಶಶಿಕಲಾಗೆ ಸ್ವಲ್ಪ ಉಸಿರಾಟ ಹಾಗೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳವಾರ ಮಧ್ಯಾಹ್ನದಿಂದ ಶಶಿಕಲಾರಿಗೆ ಹೆಚ್ಚಾದ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಬ್ಯಾರಕ್ ನಿಂದ ಜೈಲಿನ ಆಸ್ಪತ್ರೆ ವಾರ್ಡ್ ಗೆ ಅಧಿಕಾರಿಗಳು ಸ್ಥಳಾಂತರಿಸಿ, ಜೈಲಿನ ವೈದ್ಯರಿಂದಲೇ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ಹಿನ್ನಲೆ ಅವರನ್ನು ಬೌರಿಂಗ್​ ಆಸ್ಪತ್ರೆಗೆ ಶಿಫ್ಟ್​ ಮಾಡಲು ಸಿದ್ಧತೆ ನಡೆಸಲಾಗಿದೆ.


ನೆನ್ನೆ ರಾತ್ರಿಯಿಂದ ಶಶಿಕಲಾರಿಗೆ ಜ್ವರ ಮತ್ತು ಕೆಮ್ಮು ಹೆಚ್ಚಾಗಿದ್ದು ಬೆಳಗ್ಗೆ ಎಕ್ಸ್ ರೇ ಮಾಡಲಾಗಿತ್ತು. ವರದಿಯಲ್ಲಿ ಕಫ ಜಾಸ್ತಿಯಾಗಿರುವ  ಬಗ್ಗೆ ತಿಳಿಸಲಾಗಿದೆ. ಮೊದಲೇ ಅರಿಗೆ  ಬಿಪಿ, ಶುಗರ್ ಇರುವ ಹಿನ್ನಲೆ  ಮುಂಜಾಗ್ರತೆ ವಹಿಸಿ ಬೌರಿಂಗ್​ ಆಸ್ಪತ್ರೆಗೆ ದಾಖಲಿಸಲು ಮುಂದಾಗಲಾಗಿದೆ. ಇದೇ ವೇಳೆ ಶಶಿಕಲಾ ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಜೈಲಾಧಿಕಾರಿಗಳ ಮನವಿ ಹಿನ್ನಲೆ  ಬೌರಿಂಗ್ ಆಸ್ಪತ್ರೆಗೆ ಹೋಗಲು ಒಪ್ಪಿದರು. ಇನ್ನೆರಡು ದಿನ ಬೌರಿಂಗ್ ಆಸ್ಪತ್ರೆಯಲ್ಲಿಯೇ ಅವರು ಚಿಕಿತ್ಸೆ ಪಡೆಯಲಿದ್ದಾರೆ.


ಜ. 27ರಂದು ಜೈಲಿನಿಂದ ಬಿಡುಗಡೆಯಾಗಲಿರುವ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಿಂದ ತಮಿಳುನಾಡಿವರೆಗೂ  ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗಿದೆ. ಶಶಿಕಲಾ ಬಿಡುಗಡೆ ದಿನ ಜೈಲಿನ ಬಳಿ ಒಂದು ಲಕ್ಷ ಮಂದಿ ಜಮಾವಣೆ ನಿರೀಕ್ಷೆ ಇದೆ.  ಐದು ಸಾವಿರಕ್ಕೂ ಹೆಚ್ಚು ವಾಹನಗಳು ತಮಿಳುನಾಡಿನಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುವ ಸಾಧ್ಯತೆ ಇದೆ. ಈ ಮೂಲಕ ರಾಜಕೀಯ ಬೆಳವಣಿಗೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಶಶಿಕಾ ಶಕ್ತಿ ಪ್ರದರ್ಶಿಸುವ ಪ್ರಯತ್ನ ನಡೆಸಲಾಗಿದೆ.


ಏನಿದು ಪ್ರಕರಣ?


1997 ರಲ್ಲಿ ಬೆಳಕಿಗೆ ಬಂದ ಜಯಲಲಿತಾ ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಎರಡು ಬಾರಿ ಶಶಿಕಲಾ ಬಂಧನಕ್ಕೆ ಒಳಗಾಗಿದ್ದಾರೆ. 1997ರಲ್ಲಿ ಮೊದಲ ಬಾರಿ ಇವರನ್ನು ಬಂಧಿಸಲಾಗಿತ್ತು.  ಇದಾದ ನಂತರ ಪುನಃ 2014 ರಲ್ಲಿ ಮತ್ತೆಬಂಧಿಸಿ  ಕೊನೆಗೆ ಕೇಸ್ ಟ್ರಾಯಲ್ ನಡೆದು ಕೋರ್ಟ್ ಶಿಕ್ಷೆಯನ್ನು ಘೋಷಿಸಿತ್ತು. ಬಳಿಕ ಕೋರ್ಟ್ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ದಂಡ ವಿಧಿಸಿತ್ತು. 2017 ಜೈಲು ಸೇರಿದ ಶಶಿಕಲಾ 17 ದಿನಗಳು ಪೆರೋಲ್ ಹೋಗಿದ್ದು, ಅದರಲ್ಲಿ ಗಂಡನಿಗೆ ಆರೋಗ್ಯ ಸಮಸ್ಯೆ ಸರಿಯಿಲ್ಲ ಅಂತಾ 5 ದಿನ ಹೋಗಿದ್ದರು. ಬಳಿಕ ಗಂಡ ನಟರಾಜನ್ ಸಾವನ್ನಪ್ಪಿದ ದಿನ 12 ದಿನ ಪೆರೋಲ್ ಪಡೆದಿದ್ದರು. ಈಗ ನಾಲ್ಕು ವರ್ಷ ಶಿಕ್ಷೆ ಪೂರೈಸಿರುವ ಅವರು ಜ. 27ರಂದು ಬಿಡುಗಡೆಯಾಗಲಿದ್ದಾರೆ

top videos
    First published: