ಬೆಂಗಳೂರು(ಜ.31): ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ 4 ವರ್ಷಗಳ ಹಿಂದೆ ಜೈಲು ಸೇರಿದ್ದ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರೂ ಸಹ ಚೆನ್ನೈಗೆ ತೆರಳಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ಶಶಿಕಲಾ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಕೊರೋನಾದಿಂದ ಗುಣಮುಖರಾಗಿರುವ ಚಿನ್ನಮ್ಮನವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಶಶಿಕಲಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆ, ಇಂದು ಡಿಸ್ಚಾರ್ಜ್ ಮಾಡಲಾಗಿದೆ. ಬೆಳಗ್ಗೆಯಿಂದಲೂ ಶಶಿಕಲಾ ಅವರ ಅಭಿಮಾನಿಗಳು ಆಸ್ಪತ್ರೆಯ ಮುಂಭಾಗ ಜಮಾಯಿಸಿದ್ದರು. ಶಶಿಕಲಾ ಆರೋಗ್ಯ ಸ್ಥಿರವಾಗಿದೆ ಫಿಟ್ ಆಗಿದ್ದಾರೆ, ವೈಟಲ್ಸ್ ಎಲ್ಲವೂ ಸರಿಯಾಗಿದೆ. ಫ್ಯಾಚುರೇಷನ್ ನಾರ್ಮಲ್ ಆಗಿದೆ ಆಕ್ಸಿಜನ್ ಇಲ್ಲದೆ ಉಸಿರಾಡುತ್ತಿದ್ದಾರೆ. ಸಾಮಾನ್ಯವಾಗಿ ಹತ್ತು ದಿನಗಳ ನಂತರ ಪ್ರೋಟೋಕಾಲ್ ಪ್ರಕಾರ ಯಾವುದೇ ಕೊರೊನಾ ಟೆಸ್ಟ್ ಮಾಡುವ ಅಗತ್ಯವಿಲ್ಲ. ಆರೋಗ್ಯ ಕಂಡಿಷನ್ ಸುಧಾರಣೆ ಆಗಿದೆ. ಸಾಮಾನ್ಯವಾಗಿ ಏಳರಿಂದ ಹತ್ತು ದಿನಗಳವರೆಗೆ ಹೋಂ ಐಸೋಲೇಷನ್ನಲ್ಲಿರಬೇಕು. ಈಗಾಗಲೇ ವೈದ್ಯರು ತಪಾಸಣೆ ನಡೆಸಿದ್ದಾರೆ. ಇಳವರಸಿಗೆ ಇವತ್ತು ಡಿಸ್ಚಾರ್ಜ್ ಮಾಡಲ್ಲ ಅವರು ಆರೋಗ್ಯವಾಗಿದ್ದಾರೆ ಎಂದು ವಿಕ್ಟೋರಿಯಾ ಸೂಪರಿಡೆಂಟ್ ರಮೇಶ್ ಕೃಷ್ಣ ಹೇಳಿದ್ದಾರೆ.
ಚಿತ್ರೋದ್ಯಮಕ್ಕೆ ಸಿಹಿ ಸುದ್ದಿ: ಥಿಯೇಟರ್ಗಳಲ್ಲಿ ಶೇ. 100 ಸೀಟಿಂಗ್ಗೆ ಕೇಂದ್ರ ಅನುಮತಿ; ಹೊಸ ಮಾರ್ಗಸೂಚಿ ಪ್ರಕಟ
ಇನ್ನು, ಇಂದು ಶಶಿಕಲಾ ಅವರ ಡಿಸ್ಚಾರ್ಜ್ ಹಿನ್ನೆಲೆ, ಚಿನ್ನಮ್ಮನ ಖಾಸಗಿ ಎಸ್ಕಾರ್ಟ್ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿತ್ತು. ಹತ್ತು ಜನರ ಖಾಸಗಿ ಎಸ್ಕಾರ್ಟ್ ನಿಂದ ಶಶಿಕಲಾಗೆ ಭದ್ರತೆ ನೀಡಲಾಗಿತ್ತು. ಈ ಖಾಸಗಿ ಎಸ್ಕಾರ್ಟ್ ತಮಿಳುನಾಡಿನಿಂದ ಆಗಮಿಸಿತ್ತು. ಶಶಿಕಲಾ ಡಿಸ್ಚಾರ್ಜ್ ಆದ ಕೂಡಲೇ ಚಿನ್ನಮ್ಮನ ಭದ್ರತೆ ನೋಡಿಕೊಳ್ಳಲು ಈ ಎಸ್ಕಾರ್ಟ್ ಸಿಬ್ಬಂದಿ ಸಿದ್ದರಿದ್ದರು. ಈ ಹಿಂದೆ ಕೂಡ ಇವರು ಶಶಿಕಲಾ ಭದ್ರತೆ ನೋಡಿಕೊಳ್ಳುತ್ತಿದ್ದರು. ಇಂದು ಶಶಿಕಲಾ ಡಿಸ್ಚಾರ್ಜ್ ಹಿನ್ನಲೆ, ಖಾಸಗಿ ಅಂಗ ಆರಕ್ಷಕರು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಇನ್ನು, ಶಶಿಕಲಾ ಡಿಸ್ಚಾರ್ಜ್ ಹಿನ್ನೆಲೆ, ವಿಕ್ಟೋರಿಯಾ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಓರ್ವ ಎಸಿಪಿ ಹಾಗೂ ಇಬ್ಬರು ಇನ್ಸ್‌ಪೆಕ್ಟರ್ ಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ಗೇಟ್ ನಿಂದ 50 ಮೀಟರ್ವರೆಗೂ ಬ್ಯಾರಿಕೇಡ್ ಹಾಕಿ ಭದ್ರತೆ ನೀಡಲಾಗಿತ್ತು. ಆಸ್ಪತ್ರೆ ಒಳಗೆ ಆಪ್ತರು ಹಾಗೂ ಅಭಿಮಾನಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಬೆಳ್ಳಗ್ಗಿನಿಂದಲ್ಲೂ ಆಸ್ಪತ್ರೆ ಬಳಿಅಭಿಮಾನಿಗಳು ಜಮಾಯಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ