HOME » NEWS » State » VISHWA SAHITHYA SAMMELANA IN SHARANABASAVESHWAR UNIVERSITY AT KALBURGI HK

ಶರಣಬಸವೇಶ್ವರ ವಿ.ವಿ.ಯಲ್ಲಿ ವಿಶ್ವ ಸಾಹಿತ್ಯ ಸಮ್ಮೇಳನ - ಅಖಿಲ ಭಾರತ ಸಮ್ಮೇಳನಕ್ಕೆ ಸೆಡ್ಡು ಹೊಡೆದ ಅಪ್ಪ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸೆಡ್ಡು ಹೊಡೆದ ರೀತಿಯಲ್ಲಿ ಶರಣಬಸವೇಶ್ವರರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ವಿಶ್ವ ಸಾಹಿತ್ಯ ಸಮ್ಮೇಳನ ನಡೆಸಿದರು.

news18-kannada
Updated:February 1, 2020, 8:15 PM IST
ಶರಣಬಸವೇಶ್ವರ ವಿ.ವಿ.ಯಲ್ಲಿ ವಿಶ್ವ ಸಾಹಿತ್ಯ ಸಮ್ಮೇಳನ - ಅಖಿಲ ಭಾರತ ಸಮ್ಮೇಳನಕ್ಕೆ ಸೆಡ್ಡು ಹೊಡೆದ ಅಪ್ಪ
ಸಮ್ಮೇಳನಕ್ಕೆ ಮಾಜಿ ಸಿಎಂ ವೀರಪ್ಪ ಮೋಯ್ಲಿ ಚಾಲನೆ ನೀಡಿದರು
  • Share this:
ಕಲಬುರ್ಗಿ(ಫೆ.01) :  ಫೆಬ್ರವರಿ ತಿಂಗಳಲ್ಲಿ ಆಯೋಜಿಸಿರುವ ಸಮ್ಮೇಳನ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಇದೀಗ ತಮ್ಮನ್ನು ಕಡೆಗಣಿಸಲಾಗಿದೆ, ತಮ್ಮ ವಿಶ್ವವಿದ್ಯಾಲಯ ಯಾರೊಬ್ಬರನ್ನು ಗೋಷ್ಠಿಗಳಿಗೆ ಹಾಕಿಕೊಂಡಿಲ್ಲ ಎಂದು ಸಮ್ಮೇಳನಕ್ಕೆ ಸೆಡ್ಡು ಹೊಡೆದ ರೀತಿಯಲ್ಲಿ ಶರಣಬಸವೇಶ್ವರರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ವಿಶ್ವ ಸಾಹಿತ್ಯ ಸಮ್ಮೇಳನ ನಡೆಸಿದರು.

ಶರಣಬಸವೇಶ್ವರ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವ ಸಾಹಿತ್ಯ ಸಮ್ಮೇಳನಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಚಾಲನೆ ನೀಡಿದರು. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡಿದ್ದರು. ಎರಡು ದಿನಗಳ ವಿಶ್ವ ಸಮ್ಮೇಳನದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ ಭಾಷೆಗಳ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶರಣಬಸವೇಶ್ವರ ಸಂಸ್ಥಾನವನ್ನು ಕಡೆಗಣಿಸಲಾಗಿದೆ.

ಶರಣಬಸವೇಶ್ವರ ವಿಶ್ವವಿದ್ಯಾಲಯದ ಸಿಬ್ಬಂದಿಯನ್ನು ಯಾವುದೇ ಗೋಷ್ಠಿಗೆ ಹಾಕಿಕೊಂಡಿಲ್ಲ ಎಂದ ಶರಣಬಸವಪ್ಪ ಅಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಪರಿಣಾಮವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಎಂಬ ರೀತಿಯಲ್ಲಿ ಅದಕ್ಕೂ ಮುಂಚಿತವಾಗಿಯೇ ಕಲಬುರ್ಗಿಯಲ್ಲಿ ವಿಶ್ವ ಸಾಹಿತ್ಯ ಸಮ್ಮೇಳನ ನಡೆಯಿತು.

ಗೋವಿಂದ ಕಾರಜೋಳರನ್ನು ಹುಡಿಕಿಕೊಡಿ - ಪೋಸ್ಟರ್ ಹಿಡಿದು ಅಡ್ಡಾಡುತ್ತಿರುವ ಕನ್ನಡಪರ ಸಂಘಟನೆಗಳು

ವಿಚಿತ್ರವೆಂದರೆ ಶರಣಬಸವೇಶ್ವರ ಸಂಸ್ಥಾನ ಈ ಹಿಂದೆ ನಡೆದ ಎಲ್ಲ ಸಮ್ಮೇಳನಗಳಿಗೂ ಸಂಪೂರ್ಣ ಸಹಕಾರ ನೀಡಿತ್ತು. 1987ರಲ್ಲಿ ಕಲಬುರ್ಗಿಯಲ್ಲಿ ಅಖಿಲ ಭಾರತ ಸಮ್ಮೇಳನ ಆಯೋಜಿಸಲು ಉದ್ದೇಶಿಸಿದ್ದಾಗ, ಅದಕ್ಕೆ ಸ್ಥಳಾವಕಾಶ ಮಾಡಿಕೊಟ್ಟವರು ಇದೇ ಶರಣಬಸವೇಶ್ವರ ಸಂಸ್ಥಾನ. ಇದು ಹೀಗಿರಬೇಕಾದರೆ, ಈ ಬಾರಿಯ ಸಮ್ಮೇಳನದಲ್ಲಿ ಸಂಸ್ಥಾವನ್ನು ನಿರ್ಲಕ್ಷಿಸಲಾಗಿದೆ. ಜೊತೆಗೆ ಶರಣಬಸವೇಶ್ವರ ವಿಶ್ವವಿದ್ಯಾಲಯದ ಸಿಬ್ಬಂದಿಯನ್ನು ಯಾವುದೇ ಗೋಷ್ಠಿಗಳಿಗೆ ಹಾಕಿಕೊಳ್ಳದೆ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವದಲ್ಲಿಯೇ ವಿಶ್ವ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಶರಣಬಸವಪ್ಪ ಅಪ್ಪ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸೆಡ್ಡು ಹೊಡೆದರು. ಅವರದ್ದು ಅಖಿಲ ಭಾರತವಾದರೆ, ನಮ್ಮದು ವಿಶ್ವ ಸಾಹಿತ್ಯ ಸಮ್ಮೇಳನ ಎನ್ನುವ ಮೂಲಕ ಶರಣಬಸವಪ್ಪ ಅಪ್ಪ, ಕಸಾಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮ್ಮೇಳನದಲ್ಲಿ ಬಹುಭಾಷಾ ಕವಿಗೋಷ್ಠಿ, ಜಾನಪದ ಸಾಹಿತ್ಯ, ಸಂಸ್ಕೃತ, ಮರಾಠಿ, ಇಂಗ್ಲೀಷ್ ಉರ್ದು ಗೋಷ್ಠಿಗಳನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ.ಆದರೆ ಇದನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅಲ್ಲಗಳೆದಿದ್ದಾರೆ. ಈ ಹಿಂದೆ ಕಲಬುರ್ಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಿಗೆ ಶರಣಬಸವೇಶ್ವರ ಸಂಸ್ಥಾನ ಸಂಪೂರ್ಣ ಸಹಕಾರ ನೀಡಿದೆ. ಅವರ ಪಾಡಿಗೆ ಅವರು ವಿಶ್ವ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ನಮ್ಮ ಸಮ್ಮೇಳನಕ್ಕೆ ಇದು ಪರ್ಯಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ ಖ್ವಾಜಾ ಬಂದೇನವಾಜ್ ದರ್ಗಾದ ಪೀಠಾಧಿಪತಿಯನ್ನೂ ಸಮ್ಮೇಳನಕ್ಕೆ ಸರಿಯಾಗಿ ಆಹ್ವಾನಿಸಿಲ್ಲವೆಂದು ಮುಸ್ಲಿಂ ಸಮುದಾಯದವರು ಕಸಾಪ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಮ್ಮೇಳದ ಲಾಂಛನದಲ್ಲಿ ಶರಣಬಸವೇಶ್ವರ ದೇವಸ್ಥಾನ ಹಾಗೂ ಬಂದೇನವಾಜ್ ದರ್ಗಾವನ್ನು ಬಳಸಿಕೊಳ್ಳಲಾಗಿದೆ. ಅದಕ್ಕಿಂತ ಮಿಗಿಲಾದ ವಿಷಯ ಏನಿದೆ ಎನ್ನುವ ಪ್ರಶ್ನೆ ಕಸಾಪದ್ದಾಗಿದೆ.

ಸಾಹಿತಿ ಗೀತಾ ನಾಗಭೂಷಣರಿಂದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ, ಪ್ರಚಾರದ ಸಿಡಿ ಬಿಡುಗಡೆ

ಇದೇ ವೇಳೆ ಕೆಲ ಕನ್ನಡಪರ ಸಂಘಟನೆಗೆಳು ಪರ್ಯಾಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಎಚ್ಚರಿಕೆಯನ್ನೂ ನೀಡಿದೆ. ಒಟ್ಟಾರೆ ಸಮ್ಮೇಳನಕ್ಕೆ ಪೂರ್ವದಲ್ಲಿಯೇ ಹತ್ತಾರು ಅಪಸ್ವರಗಳು ಎದ್ದಿದ್ದು, ಗೊಂದಲದ ಗೂಡಾಗುವಂತೆ ಮಾಡಿದೆ.
Youtube Video
First published: February 1, 2020, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories