Kodagu: ಪ್ರವೀಣ್ ನೆಟ್ಟಾರು ಹತ್ಯೆಗೆ ಕೊಡಗಿನಲ್ಲಿ ನಿಲ್ಲದ ಆಕ್ರೋಶ; ಶನಿವಾರಸಂತೆಯಲ್ಲಿ ಪ್ರತಿಭಟನೆ

ನಾಡಕಚೇರಿವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ

ಪ್ರತಿಭಟನೆ

  • Share this:
ಕೊಡಗು: ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ (Bellare, Dakshina Kannada) ನಡೆದ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು (Praveen Nettaru Murder) ಖಂಡಿಸಿ ಕೊಡಗಿನಲ್ಲಿ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಶನಿವಾರಸಂತೆಯಲ್ಲಿ ಭಜರಂಗದಳ (Bhajaanaga dala) ಮತ್ತು ವಿಶ್ವ ಹಿಂದೂ ಪರಿಷತ್ತಿನ (Vishwa Hindu Parishat) ನೂರಾರು ಕಾರ್ಯಕರ್ತರು ಶನಿವಾರವೂ ಪ್ರತಿಭಟನೆ ನಡೆಸಿದರು. ಶನಿವಾರಸಂತೆಯ (Shanivarasante) ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಶನಿವಾರಸಂತೆಯ ನಾಡಕಚೇರಿವರೆಗೆ ಮೆರವಣಿಗೆ ಸಾಗಿದರು. ಮೆರವಣಿಗೆ (Rally) ಯುದ್ದಕ್ಕೂ ಹತ್ಯೆ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಜೊತೆಗೆ ಪ್ರವೀಣ್ ಹತ್ಯೆಯಾದರೂ ಆರೋಪಿಗಳಿಗೆ ಸರಿಯಾದ ಶಿಕ್ಷೆ ಕೊಡಿಸದ ರಾಜ್ಯ ಬಿಜೆಪಿ ಸರ್ಕಾರದ  (BJP Government ) ವಿರುದ್ಧವೂ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಮೆರವಣಿಗೆಗೂ ಮುನ್ನ ಕಾರ್ಯಕರ್ತರು ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರವೀಣ್ ನೆಟ್ಟಾರು ಭಾವಚಿತ್ರವಿರಿಸಿ ಪೂಜೆ ಸಲ್ಲಿಸಿ ಬಳಿಕ ಒಂದು ನಿಮಿಷ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ಅರ್ಧಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಇದರಿಂದ ಸಾರ್ವಜನಿಕ ವಾಹನ ಸವಾರರು ಪರದಾಡಬೇಕಾಯಿತು.

ಇದನ್ನೂ ಓದಿ: CET Result: ಸಿಇಟಿ ಫಲಿತಾಂಶದಲ್ಲಿ ರಿಪೀಟರ್ಸ್​ಗೆ ಅನ್ಯಾಯ; ಸಚಿವರ ಮನೆ ಮುಂದೆ ಪ್ರತಿಭಟನೆ​

ನಾಡಕಚೇರಿವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

vishwa hindu Parishad And bhajarangadal workers protest after murder of Praveen nettaru murder rsk mrq
ಪ್ರತಿಭಟನೆ


ಹಿಂದೂ ಧರ್ಮದ ಕಾರ್ಯಕರ್ತರ ಹತ್ಯೆಗೆ ಸ್ಕೆಚ್

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಅನೀಶ್, ರಾಜ್ಯದಲ್ಲಿ ಬಾಂಗ್ಲಾ ಮತ್ತು ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು ತುಂಬಿದ್ದಾರೆ. ಇವರು ಹಿಂದೂ ಧರ್ಮದ ಕಾರ್ಯಕರ್ತರನ್ನು ಹತ್ಯೆ ಮಾಡುವುದಕ್ಕೆ ಸ್ಕೆಚ್ ಹಾಕಿರುತ್ತಾರೆ. ನೋಡುವುದಕ್ಕೆ ಚಿಕ್ಕ ಹುಡುಗರಂತೆ ಕಾಣುತ್ತಾರೆ ಆದರೂ ನಾವು ಅವರನ್ನು ಕಡೆಗಣಿಸುವಂತಿಲ್ಲ. ಒಂದು ವೇಳೆ ಅನುಮಾನಾಸ್ಪದ ಇಂತಹ ವ್ಯಕ್ತಿಗಳು ಓಡಾಡುತ್ತಿದ್ದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಗೃಹ ಸಚಿವರೇ ಈ ಮೌನ ಯಾಕೆ?

ವಿಶ್ವ ಹಿಂದೂ ಪರಿಷತ್ ತಾಲೂಕು ಸಂಚಾಲಕ ಜೀವನ್ ನೇಗಳ್ಳಿ ಮಾತನಾಡಿ ಪ್ರಾಮಾಣಿಕ ಹಿಂದೂ ಕಾರ್ಯಕರ್ತನಾಗಿದ್ದ ಪ್ರವೀಣ್ ಹತ್ಯೆಯಾಗಿದ್ದರೂ ಮುಖ್ಯಮಂತ್ರಿಗಳು, ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾ ಮೌನವಾಗಿದ್ದಾರೆ. ಹಿಂದೆ ಹರ್ಷನ ಹತ್ಯೆ ಮಾಡಿದ ದುಷ್ಟರು ಇಂದು ಜೈಲಿನಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಹೈಫೈ ಜೀವನ ಮಾಡುತ್ತಿದ್ದಾರೆ. ಹೀಗೆ ಮಾಡುವುದಕ್ಕಾ ಅವರನ್ನು ಬಂಧಿಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಅಧಿಕಾರದಲ್ಲಿ ನಮ್ಮದೇ ಪಕ್ಷವಿದೆ, ಹಿಂದೂಗಳ ರಕ್ಷಣೆಯನ್ನು ಬಿಜೆಪಿ ಮಾಡುತ್ತದೆ ಎಂದು ಕೊಂಡಿದ್ದೆವು. ಆದರೆ ಹಿಂದೂಗಳನ್ನು ಮುಗಿಸಲು ಬಿಜೆಪಿ ಸಜ್ಜಾಗಿರುವಂತೆ ಕಾಣಿಸುತ್ತದೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  PSI Recruitment Exam: ಸಿಐಡಿ ಅಧಿಕಾರಿಗಳಿಂದ ಮತ್ತೊಬ್ಬ PSI ಬಂಧನ

ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ

ಮೊನ್ನೆ ಸಂಸದ ತೇಜಸ್ವಿ ಸೂರ್ಯ ಅವರು ಎಲ್ಲಾ ಮನೆಗಳನ್ನು ಕಾಯಲು ಸಾಧ್ಯವಿದೆಯೇ ಎಂದು ಹಗುರವಾಗಿ ಮಾತನಾಡಿದ್ದಾರೆ. ನೀವು ಎಲ್ಲರ ಮನೆಗಳನ್ನು ಕಾಯುವುದು ಬೇಡ, ಆದರೆ ಹಿಂದೂ ಕಾರ್ಯಕರ್ತರು ಮನಸ್ಸು ಮಾಡಿದರೆ ಎಲ್ಲರ ಮನೆಗಳನ್ನು ನಾವು ಕಾಯುತ್ತೇವೆ. ಆದರೆ ಕಾನೂನಿಗೆ ಗೌರವಕೊಟ್ಟು ಇದುವರೆಗೆ ಸುಮ್ಮನಿದ್ದೇವೆ ಎಂದು ನೇಗಳ್ಳೆ ಜೀವನ್ ಹೇಳಿದರು.

vishwa hindu Parishad And bhajarangadal workers protest after murder of Praveen nettaru murder rsk mrq
ಪ್ರತಿಭಟನೆ


ಜೈಲಿನಲ್ಲಿ ರಾಜಾತಿಥ್ಯ

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವುದು ದುರಂತ. ತಪ್ಪು ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲಿ. ಕೇವಲ ಬಂಧಿಸಿ, ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಿಸಿ ರಾಜಾಥಿತ್ಯ ನೀಡಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಡಿ ಎಂದು ಬಿಜೆಪಿ ಪ್ರಮುಖ್ ರಘು ಹೇಳಿದರು.
Published by:Mahmadrafik K
First published: